37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ /ದುಗಾ೯ದೇವಿ ದೇವಸ್ಥಾನದಲ್ಲಿ ಮನೆ-ಮನೆಯಿಂದ ಅಡಕೆ ಸಂಗ್ರಹಣಾ ಅಭಿಯಾನ, ರಥಬೀದಿಯ ಕಾಂಕ್ರಿಟೀಕರಣದ ಉದ್ಘಾಟನೆ ಹಾಗೂ ದೇವಸ್ಥಾನದ ಮುಖ ಮಂಟಪದ ಶಿಲಾನ್ಯಾಸ

ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ /ದುರ್ಗಾ ದೇವಿ ದೇವಸ್ಥಾನದಲ್ಲಿ ಮನೆ-ಮನೆಯಿಂದ ಅಡಕೆ ಸಂಗ್ರಹಣಾ ಅಭಿಯಾನ, ರಥಬೀದಿಯ ಕಾಂಕ್ರಿಟೀಕರಣದ ಉದ್ಘಾಟನೆ ಮತ್ತು ದೇವಸ್ಥಾನದ ಮುಖ ಮಂಟಪದ ಶಿಲಾನ್ಯಾಸ ಕಾರ್ಯಕ್ರಮವು ಡಿ.16ರಂದು ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು.

ಮಿತ್ತಬಾಗಿಲು , ಮಲವಂತಿಗೆ, ಕಡಿರುದ್ಯಾವರ ಗ್ರಾಮಸ್ಥರು ತಮ್ಮ ತಮ್ಮ ಬೈಲುವಾರು ಸಮಿತಿಗಳ ಮೂಲಕ ಮನೆಗೊಂದರಂತೆ ಹೆಚ್ಚು ಅಡಕೆ ಗೊನೆಯನ್ನು ಸಂಗ್ರಹಿಸಿ ದೇವಾಲಯಕ್ಕೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ನವಶಕ್ತಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಮಾಜಿ ಅಧ್ಯಕ್ಷ ವಾಸುದೇವ ರಾವ್, ಕೊಲ್ಲಿ ದೇವಾಸ್ಥಾನದ ಆಡಳಿತಾಧಿಕಾರಿ ಕೆ. ಮೋಹನ್ ಬಂಗೇರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ದಾಸಪ್ಪ ಗೌಡ,, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಕೆ ಲೋಕೇಶ್ ರಾವ್, ಪ್ರಧಾನ ಕಾರ್ಯದರ್ಶಿ ಡಿ. ದಿನೆಶ್ ಗೌಡ, ಬ್ರಹ್ಮಕಲಶೋತ್ಸವ ಸಮಿತಿಯ ಹಾಗೂ ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಹಾಗೂ ಊರವರು ಉಪಸ್ಥಿತರಿದ್ದರು.

ವಿನಯಚಂದ್ರ ಸೇನರಬೆಟ್ಟು ಸ್ವಾಗತಿಸಿದರು.

Related posts

ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ

Suddi Udaya

ಮಾಲಾಡಿ ಸೋಣಂದೂರಿನಲ್ಲಿ ಗಾಳಿ ಮಳೆಗೆ ಮನೆ, ಕೃಷಿಗೆ ತೀವ್ರ ತರಹದ ಹಾನಿ: ಕೋಟ್ಯಾಂತರ ರೂ. ನಷ್ಟಮಾಲಾಡಿ ಗ್ರಾ.ಪಂ. ಅಧ್ಯಕ್ಷ ಪುನೀತ್ ಕುಮಾರ್‌ರವರ ನೇತೃತ್ವದಲ್ಲಿ ಕಾರ್ಯಾಚರಣೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಲ್ಲಿ ಆಟಿಡೊಂಜಿ ಕೂಟ ವಿಶೇಷ ಕಾರ್ಯಕ್ರಮ

Suddi Udaya

ಮಡಂತ್ಯಾರು ನಿಯತಿ ನೃತ್ಯ ನಿಕೇತನದ ವಿದ್ಯಾರ್ಥಿಗಳು ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆ

Suddi Udaya

ಅಭಿವೃದ್ಧಿ ಆಧಾರಿತ ರಾಜಕಾರಣಕ್ಕೆ ಮನಸೋತು ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡರು

Suddi Udaya

ಕಣಿಯೂರು: ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದಿಂದ ಸಾಧಕರಿಗೆ ಸನ್ಮಾನ

Suddi Udaya
error: Content is protected !!