30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪತ್ನಿ – ಮಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಆರೋಪಿ ಬಂಧನ

ಬೆಳ್ತಂಗಡಿ : ಪಾನಮತ್ತನಾಗಿ ಪತ್ನಿ ಹಾಗೂ ಮಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿಯನ್ನು ಧರ್ಮಸ್ಥಳ ಪೊಲೀಸ್ ಬಂಧಿಸಿದ ಘಟನೆ ವರದಿಯಾಗಿದೆ.ಘಟನೆ ಶಿಶಿಲದಲ್ಲಿ ಸಂಭವಿಸಿದ್ದು ಸ್ಥಳೀಯರ ಸಹಕಾರದೊಂದಿಗೆ ಹಲ್ಲೆಗೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿಶಿಲ ಗ್ರಾಮದ ಕೋಟೆಬಾಗಿಲು ನಿವಾಸಿ ಸುರೇಶ್ ಎಂಬಾತ ಬಂಧನಕ್ಕೆ ಒಳಗಾದ ಆರೋಪಿ.ಸೋಮವಾರ ತಡರಾತ್ರಿ ಪಾನಮತ್ತನಾಗಿ ಮನೆಗೆ ಬಂದ ಆರೋಪಿ ಸುರೇಶ ಪತ್ನಿ ಮೋಹಿನಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ, ಮಹಿಳೆಯ ಮುಖದ ಮೇಲೆ ಗಂಭೀರ ಗಾಯಗಳಾಗಿದ್ದು ಒಂದು ಕಣ್ಣಿಗೂ ಸಂಪೂರ್ಣ ಹಾನಿಯಾಗಿದೆ, ಮಗಳ ತಲೆಗೂ ಈತ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಹಲ್ಲೆಗೆ ಒಳಗಾದ ತಾಯಿ ಹಾಗೂ ಮಗಳು ಹೆದರಿ ಮನೆಯಿಂದ ಓಡಿದ್ದಾರೆ. ಮಗಳು ನೆರೆಮನೆಗ ಬಂದು ವಿಷಯ ತಿಳಿಸಿದಾಗಲೇ ಇತರರಿಗೆ ಮಾಹಿತಿ ಲಭಿಸಿದ್ದು ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ರಾತ್ರಿ ಹುಡುಕಾಟ ನಡೆಸಿದರೂ ಗಂಬೀರವಾಗಿ ಗಾಯಗೊಂಡಿದ್ದ ಪತ್ನಿ ಪತ್ತೆಯಾಗಿರಲಿಲ್ಲ ಮಂಗಳವಾರ ಬೆಳಿಗ್ಗೆ ಹುಡುಕಾಟ ನಡೆಸಿದಾಗ ಸ್ಥಳೀಯ ಮನೆಯೊಂದರೆ ಕೊಟ್ಟಿಗೆಯಲ್ಲಿ ಅಸ್ವಸ್ಥರಾಗಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಯ ಬಂಧನ: ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಆರೋಪಿ ಸುರೇಶ್ ಗೌಡ ನನ್ನು ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ ಅನೀಲ್ ಕುಮಾರ್.ಡಿ, ಪಿ,ಎಸ್,ಐ ಸಮರ್ಥ ರವೀಂದ್ರ ಗಾಣಿಗೇರ ಮತ್ತು ಸಿಬ್ಬಂದಿಗಳಾದ ಹೆಚ್.ಸಿ ಶಶಿಧರ , ಪಿ.ಸಿ ಮಲ್ಲಿಕಾರ್ಜುನ ರವರುಗಳ ತಂಡವು, ಬೆಳ್ತಂಗಡಿ ಶಿಶಿಲ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

Related posts

ಅಡಿಕೆ ಆಮದು ದರ ಏರಿಕೆಗೆ ಕೇಂದ್ರ ಸರಕಾರ ಬದ್ಧ

Suddi Udaya

ಚಿಕ್ಕಮಗಳೂರಿನ ವಕೀಲ ಪ್ರೀತಮ್ ರವರ ಮೇಲಿನ ಪೊಲೀಸ್ ಹಲ್ಲೆಗೆ ತಾಲೂಕು ವಕೀಲರ ಸಂಘದಿಂದ ಖಂಡನೆ: ಸೂಕ್ತ ಕಾನೂನು ಕ್ರಮಕ್ಕೆ ಅಗ್ರಹಿಸಿ ತಹಶೀಲ್ದಾ‌ರ್ ಮೂಲಕ ಮುಖ್ಯಮಂತ್ರಿಗೆ ಮನವಿ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ 1.07ಕೋಟಿ ನಿವ್ವಳ ಲಾಭ, ಶೇ. 11 ಡಿವಿಡೆಂಡ್ ಘೋಷಣೆ

Suddi Udaya

ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಹುದ್ದೆಗೆ ಗೇರುಕಟ್ಟೆಯ ಹಿದಾಯತುಲ್ಲಾ ಕೆ.ಎ ಆಯ್ಕೆ

Suddi Udaya

ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬೆಳ್ತಂಗಡಿಗೆ ಭೇಟಿ: ಸಾವ೯ಜನಿಕ ಅಹವಾಲು ಸ್ವೀಕಾರ

Suddi Udaya

ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವ

Suddi Udaya
error: Content is protected !!