32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತೆಂಕಕಾರಂದೂರು ಗ್ರಾಮದಲ್ಲಿ ರಾಜರೋಷವಾಗಿ ತಿರುಗಾಡುತ್ತಿರುವ ಚಿರತೆ: ಜನತೆ ಕಂಗಾಲು

ತೆಂಕಕಾರಂದೂರು : ಕಳೆದ ಐದಾರು ತಿಂಗಳಿನಿಂದ ಮುಂಡೂರು, ಕೋಟಿಕಟ್ಟೆ, ಕಾಂತಿಜಾಲು, ಕೇರಿಯಾರು, ಮುಂತಾದ ಕಡೆಗಳಲ್ಲಿ ರಾಜರೋಷವಾಗಿ ತಿರುಗಾಡುತ್ತಿದ್ದ ಹಾಗೂ ಹಲವಾರು ದನ ಕರು ನಾಯಿಗಳನ್ನು ತಿಂದು ಮುಗಿಸಿ ಚಿರತೆ ಇನ್ನೂ ಬೋನಿಗೆ ಬಿದ್ದಿಲ್ಲ ಎಂಬುದು ನಾಗರಿಕರಲ್ಲಿ ಆತಂಕ ಹೆಚ್ಚಾಗಿದ್ದು, ಸದ್ರಿ ಚಿರತೆ ಇಲ್ಲಿ ಸಾಕು ಪ್ರಾಣಿಗಳೂ ಮಾತ್ರವಲ್ಲದೆ ಮನುಷ್ಯನ ಮೇಲೂ ಯಾವುದೇ ಸಂದರ್ಭದಲ್ಲೂ ದಾಳಿ ಮಾಡಬಹುದು ಎಂಬುದು ಜನರಲ್ಲಿರುವ ಆತಂಕ ಮೂಡಿದೆ.

ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಹಳ್ಳಿ ಕಡೆ ನಡೆದುಕೊಂಡು ಹೋಗುವ ಜನರು ಭಯಭೀತರಾಗಿದ್ದಾರೆ.

ಅರಣ್ಯ ಇಲಾಖೆಯ ಬಗ್ಗೆ ಜನರ ಆಕ್ರೋಶ: ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ಪದೇ ಪದೇ ತಿಳಿಸಿದರೂ ಹಂತಕ ಚಿರತೆಯನ್ನು ಸೆರೆ ಹಿಡಿಯುವ ವಿಷಯದಲ್ಲಿ ಅವರ ಯತ್ನ ಸಂಪೂರ್ಣ ವಿಫಲಗೊಂಡಿದೆ ಚಿರತೆ ಈಗಲೂ ತಿರುಗಾಡುತ್ತಿದೆ ಎಂದು ಆ ಭಾಗದ ಜನರು ಆಲವತ್ತುಕೊಂಡಿದ್ದಾರೆ.

Related posts

ಮದ್ದಡ್ಕ: ಚರಂಡಿಯಲ್ಲಿ ಬಾಕಿಯಾದ ಗ್ಯಾಸ್ ಸರಬರಾಜು ಮಾಡುವ ಪಿಕಪ್

Suddi Udaya

ಜೆಸಿಐ ವಲಯ-15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಸಂತೋಷ್ ಪಿ ಕೋಟ್ಯಾನ್ ಬಳಂಜ ರವರಿಗೆ ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”

Suddi Udaya

ಉಜಿರೆ : ಶ್ರೀ ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಗಮಕ ಕಾರ್ಯಕ್ರಮ

Suddi Udaya

ವಿಜಯ ಕ್ರೇಡಿಟ್ ಕೋ- ಆಪರೇಟಿವ್ ಸೊಸೈಟಿಗೆ ‘ದ.ಕ ಜಿಲ್ಲಾ ಉತ್ತಮ ಪತ್ತಿನ ಸಹಕಾರಿ ಸಂಘ’ ಪ್ರಶಸ್ತಿ

Suddi Udaya

ಕೊಯ್ಯೂರು: ಆದೂರು ಪೇರಾಲಿನ ವಿಜಯ ಸ್ಟೋರ್ ಮಾಲಕ ಸಾದೂರು ಮುರಳೀಧರ ಭಟ್ ನಿಧನ

Suddi Udaya

ಕಡಿರುದ್ಯಾವರ : ಕಾನರ್ಪ ಒಕ್ಕೂಟ ಅನ್ನಪೂರ್ಣೇಶ್ವರಿ ಸಂಘದ ಸದಸ್ಯೆಯ ಮನೆ ದುರಸ್ತಿ ಕಾರ್ಯ ನಡೆಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು

Suddi Udaya
error: Content is protected !!