ಗುರುವಾಯನಕೆರೆ: ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘ ಇದರ 8 ನೇ ವಾರ್ಷಿಕೋತ್ಸವವು ಡಿ. 10 ರಂದು ನಲಿಕೆಯವರ ಸಮುದಾಯ ಭವನ ಪಣೆಜಾಲುವಿನಲ್ಲಿ ನಡೆಯಿತು.
ಶಾಸಕರಾದ ಹರೀಶ್ ಪೂಂಜಾ ರವರು ಶಾಸಕರ ನಿಧಿಯಿಂದ ರೂ.5 ಲಕ್ಷ ಅನುದಾನದ ನೂತನ ಜನರೇಟರ್ ನ್ನು ಉಧ್ಘಾಟಿಸಿ , ನಲಿಕೆ ಸಂಘದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತ್ಯಂತ ಖುಷಿಯಿಂದ ಭಾಗವಹಿಸುತ್ತೇನೆ, ಇನ್ನೂ ಹೆಚ್ಚಿನ ಅನುದಾನವನ್ನು ಸಂಘಟನೆಗೆ ನೀಡಲೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ಕೊಟ್ಟರು.
ಸಂಘದ ನೂತನ ಅಡುಗೆ ಕೋಣೆಯ ವಿಸ್ತರಣೆಯ( ಎಂಎಲ್ಸಿ ಹರೀಶ್ ಕುಮಾರ್ ಅನುದಾನ ರೂ.1ಲಕ್ಷ) ಮತ್ತು ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಮಾಜಿ ಸಚಿವರು ಮತ್ತು ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ ಗಂಗಾಧರ ಗೌಡರವರು ನೇರವೆರಿಸಿ, ಮಾತಾಡಿ ನಲಿಕೆ ಸಂಘದ ಇಷ್ಟೊಂದು ಸುಂದರ ಸಭಾಭವನದಲ್ಲಿ ಪಾಲ್ಗೊಂಡು ನನಗೆ ಬಹಳ ಸಂತೋಷವಾಗಿದೆ,ತಾಲೂಕಿನಲ್ಲಿ ಇಷ್ಟು ಸುಂದರ ಸಮುದಾಯ ಭವನ ಇರೋದಕ್ಕೆ ಶ್ರಮಿಸಿದ ಅಧ್ಯಕ್ಷರು ಮತ್ತು ಪಧಾದಿಕಾರಿಗಳಿಗೆ ಹಾಗೂ ಎಲ್ಲಾ ನಲಿಕೆ ಸಮುದಾಯದ ಜನರಿಗೆ ನನ್ನ ಅಭಿನಂದನೆಗಳು ಎಂದು ಹೇಳಿದರು.
ಸಂಘದ ಸಮುದಾಯ ಭವನದ ಅಂಗಳಕ್ಕೆ ಇಂಟರ್ ಲಾಕ್ ಅಳವಡಿಕೆಗೆ ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್‌ರವರ ಶಾಸಕರ ನಿಧಿ (ರೂ.3 ಲಕ್ಷ)ಅನುದಾನ ನೀಡಿ ಅದರ ಉಧ್ಘಾಟನೆಯನ್ನು ನೆರವೇರಿಸಿದರು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಪೀಠಿಕೆಯನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಹೇಮಚಂದ್ರ ನೇರವೇರಿಸಿದರು.ಮುಖ್ಯ ಅತಿಥಿಗಳಾಗಿ ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಭಾರತಿ ಶೆಟ್ಟಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯ ನಿವೃತ್ತ ಶಿಕ್ಷಕ ಮೋನಪ್ಪ ಮದ್ದಡ್ಕ, ಕೊಡಗು ಜಿಲ್ಲಾ ಮಡಿಕೇರಿಯ ಸರಕಾರಿ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಮಡಿಕೇರಿ, ಬೆಳ್ತಂಗಡಿ ಸೋಜಾ ಇಲೆಕ್ಟ್ರಾನಿಕ್‌ನ ಮಾಲಕರು ಮತ್ತು ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಲ್ಫಾನ್ಸೋ ಡಿ ಪ್ರಾಂಕೋ, ತಾಲೂಕು ದೈವಾರಾದನೆ ಸಮಿತಿಯ ಅಧ್ಯಕ್ಷ ಜನಾರ್ದನ ಬಳ್ಳಮಂಜ ಉಪಸ್ಥಿತರಿದ್ದರು.
ಕಳೆದ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶೇ 80 ಅಂಕ ಗಳಿಸಿದ 5 ವಿಧ್ಯಾರ್ಥಿಗಳು, ಕ್ರೀಡೆ, ನಾಟಕ, ಯೋಗಾಸನ ದಲ್ಲಿ ೫ ಒಟ್ಟು 10 ಜನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಘಕ್ಕೆ ಉಚಿತ ಕೊಡುಗೆ ನೀಡಿದ ಭಾಸ್ಕರ್(ಗ್ರೈಂಡರ್) ಮತ್ತು 3೦೦ ಅನ್ನದ ಬಟ್ಟಲು ನೀಡಿದ ಶಮಂತ್ ಕುಮಾರ್ ಜೈನ್ (ಅಂದಾಜು ರೂ.3೦೦೦೦) ಗೌರವಿಸಲಾಯಿತು. ಸಮುದಾಯ ಭವನದಲ್ಲಿ ದೈವದ ಚಾಕರಿ ಮಾಡುವ ದುಗ್ಗಪ್ಪ ಪೊಕ್ಕಿ, ಗುತ್ತಿಗೆದಾರ ವಸಂತ ಶೆಟ್ಟಿ ಮತ್ತು ಮೇಸ್ತ್ರಿ ದಿನೇಶ್ ರೇಷ್ಮೆ ರೋಡ್ ರವರನ್ನು ಸನ್ಮಾನಿಸಲಾಯಿತು. ನಂತರ ಸಮುದಾಯದ ಮಕ್ಕಳಿಂದ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ನಡೆಯಿತು..
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಮಣ್ಣ ಪೋಲಿಸ್ ಉಪನೀರಿಕ್ಷರು ಕಂಟ್ರೋಲ್ ರೂಂ ಮಂಗಳೂರು, ಮಂಗಳೂರು ವಿ.ವಿಯ ವಾಣಿಜ್ಯ ವಿಭಾಗದ ಉಪನ್ಯಾಸಕ ಡಾ.ವೇದವಾ. ಪಿ., ಜಿಲ್ಲಾ ನಲಿಕೆ ಸಂಘದ ಗೌರವಾಧ್ಯಕ್ಷ ಎಂ.ಡಿ.ವೆಂಕಪ್ಪ., ಎಸ್.ಎ.ಲ್ಯಾಂಡ್ ಲಿಂಕ್ಸ್‌ನ ಮಾಲಕ ಮಹಮ್ಮದ್ ಶರೀಪ್, ಮಾಜಿ ಅಧ್ಯಕ್ಷ ಸೇಸಪ್ಪ. ಕೆ.ನಲಿಕೆ. ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ರಮೇಶ್ ರೆಂಕೆದಗುತ್ತು, ನಾರಾವಿ ಗ್ರಾ.ಪಂ ಸದಸ್ಯ ವಸಂತ ಸಾಲ್ಯಾನ್, ಸವಣೂರು ಸಹಕಾರ ಸಂಘದ ಸಿಬ್ಬಂದಿ ಪೂವಪ್ಪ ಸವಣೂರು, ಮುಂಡಾಜೆ ಗ್ರಾ.ಪಂ ಸದಸ್ಯೆ ರಂಜಿನಿ ರವಿ, ಇಳಂತಿಲ
ಗ್ರಾ.ಪಂ ಸದಸ್ಯೆ ಉಷಾ ಸುರೇಶ್, ಬಾರ್ಯ ಗ್ರಾ.ಪಂ ಸದಸ್ಯೆ ಜಯಂತಿ ಮೂರುಗೋಳಿ, ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷ ಶಶಿ ಬಿ.ಕೆ. ಬಂಟ್ವಾಳ ತಾಲೂಕು ನಲಿಕೆಯವರ ಸಂಘದ ಅಧ್ಯಕ್ಷ ರಾಮಣ್ಣ ಪಿಲಿಂಜ, ಪುತ್ತೂರು ಕೆ.ಎಸ್.ಆರ್. ಟಿ. ಸಿ ವಿಭಾಗದ ವಿನಯ್ ಲ್ಯಾಲ, ಪುತ್ತೂರು ತಾಲೂಕು ನಲಿಕೆಯವರ ಸಂಘದ ಅಧ್ಯಕ್ಷ ರವಿ ಎಂಡೆಸಾಗು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳಗ್ಗಿನ ಸಭಾ ಕಾರ್ಯಕ್ರಮದ ಸ್ವಾಗತವನ್ನು ಸಂಘದ ಉಪಾಧ್ಯಕ್ಷ ರಾಮು ಶಿಶಿಲ ಮತ್ತು ಧನ್ಯವಾದವನ್ನು ಉಪನ್ಯಾಸಕರಾದ ಕೇಶವ ಪದ್ಮುಂಜ ನಿರ್ವಹಿಸಿದರು. ಸಮಾರೋಪ ಸಮಾರಂಭದ ಸ್ವಾಗತವನ್ನು ರಮೇಶ್ ಬಿ.ಕೆ ಶಿಕ್ಷಕರು ವಿಟ್ಲ ಪದವಿ ಪೂರ್ವ ಕಾಲೇಜು ಮತ್ತು ಧನ್ಯವಾದಗಳನ್ನು ಸಂಘದ ತಾಲೂಕು ಸಮಿತಿ ಸದಸ್ಯ ವಿಜಯ್ ಆರ್. ಮುಂಡಾಜೆ ನಿರ್ವಹಿಸಿದರು. ಎರಡು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್. ಪ್ರಭಾಕರ್ ವಹಿಸಿದ್ದರು. ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಹರೀಶ್ ಕೊಕ್ರಾಡಿ ನಿರ್ವಹಿಸಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಸ್ಥಳ ಸಾನಿಧ್ಯ ಗುಳಿಗ ದೈವಕ್ಕೆ ಹೋಮ ಮತ್ತು ಪರ್ವ ಸೇವೆ ದುಗ್ಗಪ್ಪ ಪೊಕ್ಕಿ ಇವರ ಸಾರಥ್ಯ ದಲ್ಲಿ ಎಲ್ಲಾ ಸಂಘದ ಪಧಾದಿಕಾರಿಗಳ ಸಮ್ಮುಖದಲ್ಲಿ ನಡೆಯಿತು.