ನಾರಾವಿ: ಕೆನರಾ ಬ್ಯಾಂಕ್ ನಾರಾವಿ ಹಾಗೂ ನಾರಾವಿ ಗ್ರಾಮ ಪಂಚಾಯತ್ ನ ಸಹಯೋಗದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್‍ಯಕ್ರಮವು ಡಿ.20 ರಂದು ನಾರಾವಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕಾರ್‍ಯಕ್ರಮದ ಉದ್ಘಾಟನೆಯನ್ನು ಗ್ರಾ, ಪಂ. ಅಧ್ಯಕ್ಷರಾದ ರಾಜವರ್ಮ ಜೈನ್ ಉದ್ಘಾಟಿಸಿದರು. ವೇದಿಕೆಯಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ಇವರು ಕೃಷಿ ಬಗ್ಗೆ ಹಾಗೂ ಕೇಂದ್ರ ಸರಕಾರದ ಅನುದಾನ ಬಗ್ಗೆ ಮಾಹಿತಿ ನೀಡಿದರು. ಕಾರ್‍ಯಕ್ರಮವನ್ನು ಮೋಹನ ಅಂಡಿಂಜೆ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಸರ್ಮಪಕ ಬಳಕೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೆನರಾ ಬ್ಯಾಂಕಿನ ಪ್ರಬಂಧಕಿ ಶ್ರೀಮತಿ ಚಂಪಾ, ನಾರಾವಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಮಿತ್ರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಯೋಜನೆಯನ್ನು ಬಳಕೆಮಾಡಿದ ಫಲಾನುಭವಿಗಳಿಗೆ ಕೆನರಾಬ್ಯಾಂಕ್ ವತಿಯಿಂದ ಸನ್ಮಾನ ಮಾಡಲಾಯಿತು. ಅದೇ ರೀತಿ ಕ್ರೀಡೆ ಹಾಗೂ ವಿದ್ಯಾವಂತ ಮಕ್ಕಳು, ಆರೋಗ್ಯವಂತ ಮಕ್ಕಳನ್ನು ಗುರುತಿಸಲಾಯಿತು.
ಈ ಸಂದರ್ಭದಲ್ಲಿ ಆಯುಷ್ಮಾನು ಭಾರತ ಫಲಾನುಭವಿ ಶ್ರೀಮತಿ ಸರಸ್ವತಿ ಅನಿಸಿಕೆ ವ್ಯಕ್ತಪಡಿಸಿದರು. ಇನ್ನೋರ್ವ ಪ್ರಧಾನ ಮಂತ್ರಿ ಭೀಮಾ ಯೋಜನೆಯಲ್ಲಿ 12 ರೂ. ಕಟ್ಟಿದ ಕೃಷ್ಣಪ್ಪ ಪರವ ಅಪಘಾತ ವಿಮೆ ಸಿಕ್ಕಿದ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು.
ಕಾರ್‍ಯಕ್ರಮವು ನಾರಾವಿ ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ನಾರಾವಿ ಗ್ರಾಮ ಪಂಚಾಯಿತ ನಿಕಟಪೂರ್ವ ಉಪಾಧ್ಯಕ್ಷ ಉದಯ ಹೆಗ್ಡೆ, ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮಾಜ ಸೇವಕ ರಾಮಚಂದ್ರ ಭಟ್ ಧನ್ಯವಾದವಿತ್ತರು.
ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು ವಸಂತ ಆಚಾರ್‍ಯ ಕಾರ್‍ಯಕ್ರಮ ನಿರೂಪಿಸಿದರು.