30.7 C
ಪುತ್ತೂರು, ಬೆಳ್ತಂಗಡಿ
May 17, 2025
ಜಿಲ್ಲಾ ಸುದ್ದಿತಾಲೂಕು ಸುದ್ದಿ

7ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ತುಳುವಿನ ಮೊದಲ ಸಂಶೋಧನಾತ್ಮಕ ಸಾಕ್ಷ್ಯಚಿತ್ರ “ಪುರ್ಸ ಕಟ್ಟುನೆ: ಇನಿ-ಕೋಡೆ- ಎಲ್ಲೆ” ಆಯ್ಕೆ

  • ಇತ್ತೀಚಿಗೆ ಬೆಳ್ತಂಗಡಿ ವಾಣಿ ವಿದ್ಯಾ ಸಂಸ್ಥೆ ಯಲ್ಲಿ ಬಿಡುಗಡೆಯಾದ ತುಳುವಿನ ಮೊದಲ ಸಂಶೋಧನಾತ್ಮಕ ಸಾಕ್ಷ್ಯಚಿತ್ರ
  • ಭರತೇಶ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ ಬದಿಕಾನ
    ನಿಮಾ೯ಣ – .ಸುಂದರ ಕೇನಾಜೆ ಚಿತ್ರಕತೆ, ನಿರ್ದೇಶನ
  • ತಾಲೂಕಿನ ಕೊಯ್ಯೂರು, ಬಜಿಲ, ಬಂದಾರು, ಬೈಪಾಡಿ, ದಿಡುಪೆ, ಪುದುವೆಟ್ಟು, ಶಿರ್ಲಾಲು ಗಳಲ್ಲಿ ಚಿತ್ರೀಕರಣ

ಬೆಳ್ತಂಗಡಿ: 2024ರ ಜನವರಿ 5 ರಿಂದ 9ರ ವರೆಗೆ ಕೇರಳದ ತ್ರಿಶೂರಿನಲ್ಲಿ ನಡೆಯುವ 7ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಇತ್ತೀಚಿಗೆ ಬೆಳ್ತಂಗಡಿ ವಾಣಿ ವಿದ್ಯಾ ಸಂಸ್ಥೆ ಯಲ್ಲಿ ಬಿಡುಗಡೆಯಾದ ತುಳುವಿನ ಮೊದಲ ಸಂಶೋಧನಾತ್ಮಕ ಸಾಕ್ಷ್ಯಚಿತ್ರ “ಪುರ್ಸ ಕಟ್ಟುನೆ: ಇನಿ-ಕೋಡೆ- ಎಲ್ಲೆ” ಆಯ್ಕೆಯಾಗಿದೆ. ವಿಕಿಪೀಡಿಯ ಫೌಂಡೇಶನ್ ತಯಾರಿಸಿದ ಈ ಸಾಕ್ಷ್ಯಚಿತ್ರದ ನಿರ್ಮಾಣವನ್ನು ಭರತೇಶ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ ಬದಿಕಾನ ಮಾಡಿದ್ದರು. ಡಾ.ಸುಂದರ ಕೇನಾಜೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ.
ತಾಲೂಕಿನ ಕೊಯ್ಯೂರು ಬಜಿಲ, ಬಂದಾರು ಬೈಪಾಡಿ ದಿಡುಪೆ, ಪುದುವೆಟ್ಟು, ಶಿರ್ಲಾಲು ಗಳಲ್ಲಿ ಚಿತ್ರೀಕರಣ ನಡೆದಿದೆ.

ಭಾರತದ ಬೇರೆಬೇರೆ ಭಾಷೆಗಳಿಂದ ಆಯ್ಕೆಯಾದ 70 ಸಾಕ್ಷ್ಯಚಿತ್ರ ಹಾಗೂ ಜಗತ್ತಿನ ಬೇರೆಬೇರೆ ದೇಶಗಳಿಂದ ಆಯ್ಕೆಯಾದ 310 ಚಲನ ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಅದರಲ್ಲಿ ತುಳು ಭಾಷೆಯ ಜಾನಪದ ವಿಭಾಗದಲ್ಲಿ ಈ ಸಾಕ್ಷ್ಯಚಿತ್ರವನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ತುಳು ಭಾಷೆಯ ಏಕೈಕ ಸಾಕ್ಷ್ಯಚಿತ್ರವಾಗಿ ಅಯ್ಕೆಯಾಗಿದೆ. ಮಧ್ಯಕಾಲೀನ ಕರ್ನಾಟಕದ ರಹಸ್ಯ ತಾಂತ್ರಿಕ ಪಂಥಗಳ ಪ್ರಭಾವದಿಂದ ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಭಾಗಗಳಲ್ಲಿ ಕಂಡುಬರುವ ಒಂದು ಮಹತ್ವದ ಕುಣಿತ “ಪುರ್ಸ ಕಟ್ಟುನ”. ಬೆಳ್ತಂಗಡಿ ತಾಲೂಕಿನ ಕುದುರೆಮುಖ ಘಟ್ಟದ ತಳಭಾಗದಲ್ಲಿ ಇಂದಿಗೂ ಪ್ರಚಲಿತವಿರುವ ಈ ಕುಣಿತವು ಸುಗ್ಗಿ ತಿಂಗಳ ಹುಣ್ಣಿಮೆಯ ಆಸುಪಾಸು ದಿನಗಳಲ್ಲಿ ನಡೆಯುತ್ತದೆ. ತುಳುಭಾಷೆಯನ್ನು ಮಾತನಾಡುವ ಹಲವು ಜನಾಂಗಗಳು ಒಟ್ಟು ಸೇರಿ ನಡೆಸುವ ಈ ಕುಣಿತವು ಮೂಲತಃ ಗೌಡ ಸಮುದಾಯದವರು ನಡೆಸುತ್ತಾ ಬಂದದ್ದಾಗಿದೆ. ಆಚರಣೆ, ಮನರಂಜನೆ, ನಂಬಿಕೆ, ವಿಡಂಬನೆ ಮತ್ತು ಸಮನ್ವಯದ ಭಾಗವಾಗಿ ನಡೆಯುವ ಈ ಕುಣಿತದ ಒಳತಿರುಳು ಇದರಲ್ಲಿದೆ. ಒಟ್ಟು 40 ನಿಮಿಷದ ಈ ಸಾಕ್ಷ್ಯಚಿತ್ರ ತುಳುನಾಡಿನಲ್ಲಿ ಪ್ರಚಲಿತವಿದ್ದ ತಾಂತ್ರಿಕ ಪಂಥ ಮತ್ತು ಜನಪದ ಕುಣಿತಕ್ಕೆ ಸಂಬಂಧಿಸಿದ್ದಾಗಿದೆ. ತುಳುನಾಡಿನ ಘಟನಾವಳಿ ಹಾಗೂ ವಿದ್ವಾಂಸರ ವಿಶ್ಲೇಷಣೆಯೊಂದಿಗೆ ಮೈಸೂರಿನ ಕನ್ನಡಿ ಕ್ರಿಯೇಷನ್ ತಯಾರಿಸಿದ ಈ ಸಾಕ್ಷ್ಯಚಿತ್ರ ಯೂಟ್ಯೂಬ್ ಮತ್ತು ವಿಕಿಮೀಡಿಯ ಕಾಮನ್ಸ್ ಮೂಲಕ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.

Related posts

ಉಜಿರೆ ವಲಯದ ಮಾಚಾರು ಪ್ರಗತಿ-ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ

Suddi Udaya

ಮುಂಡಾಜೆ: ವಿಶೇಷ ಚೇತನ ವಾರ್ಷಿಕ ದಿನಾಚರಣೆ ಅಂಗವಾಗಿ ಗ್ರಾಮೀಣ ಪುನರ್ವಸತಿ ಕಾರ್ಯ ವಿಭಾಗದ ವತಿಯಿಂದ ಸಮನ್ವಯ ಗ್ರಾಮ ಸಭೆ ಹಾಗೂ ವಿಕಲ ಚೇತನರಿಗೆ ಮಾಹಿತಿ ಕಾರ್ಯಾಗಾರ

Suddi Udaya

ಮೇ 26: ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಉಚಿತ ಚರ್ಮರೋಗ ತಪಾಸಣಾ ಶಿಬಿರ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ವನದುರ್ಗ ದೇವಿ ಕ್ಷೇತ್ರಕ್ಕೆ ಸೋಲಾರ್ ಅಳವಡಿಸಲು ಕೆನರಾ ಬ್ಯಾಂಕಿನಿಂದ ರೂ 2 ಲಕ್ಷ ಮಂಜೂರು

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ದಲ್ಲಿ ಬ್ರಹ್ಮಕಲಶದ ದಿನಾಚರಣೆ

Suddi Udaya
error: Content is protected !!