ಬೆಳ್ತಂಗಡಿ : ಗೇರುಕಟ್ಟೆ ಕಳಿಯ ಗ್ರಾಮದ ಬದಿನಡೆಗೆ ಕಳಿಯ ಬೀಡಿನಿಂದ ಬದಿನಡೆಗೆ ಮತ್ತು ಮಂಜಲಡ್ಕ ಕ್ಷೇತ್ರಕ್ಕೆ ದೈವಗಳ ಭಂಡಾರವನ್ನು ಪಲ್ಲಕಿ ಮೂಲಕ ತರಲಾಯಿತು. ಬದಿನಡೆಯಲ್ಲಿ ದೈವಗಳಿಗೆ ನವಕ ಪ್ರಧಾನ, ಕಲಶಾಭಿಷೇಕ, ಪ್ರಸನ್ನ ಪೂಜೆ, ಚೆಂಡು, ವಿಶೇಷ ಹೂವಿನ ಪೂಜೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.
ರಾತ್ರಿ ಧರ್ಮ ದೈವಗಳಾದ ಉಳ್ಳಾಕುಲು- ಉಳ್ಳಾಲ್ತಿ, ರಕ್ತೇಶ್ವರಿ, ಮಹಿಷಂತ್ತಾಯ,ಅಂಗಣ ಪಂಜುರ್ಲಿ ದೈವಗಳ ನೇಮೋತ್ಸವ ಡಿ.22 ರಂದು ರಾತ್ರಿ ನಡೆಯಿತು. ಡಿ.23 ರಂದು ಮಂಜಲಡ್ಕದಲ್ಲಿ ನವಕಪ್ರಧಾನ ,ಪ್ರಸನ್ನ ಪೂಜೆ,ಮಧ್ಯಾಹ್ನ ಅನ್ನಸಂತರ್ಪಣೆ. ವಿಶೇಷ ಸಂಕ್ರಾಂತಿ ಪೂಜೆ, ಮಧ್ಯಾಹ್ನ ಹಾಗೂ ರಾತ್ರಿಅನ್ನಸಂತರ್ಪಣೆ.ಸಂಜೆ 7 ರಿಂದ ಕೊಡಮಣಿತ್ತಾಯ ದೈವದ ನೇಮೋತ್ಸವ.ರಾತ್ರಿ 11 ಗಂಟೆಗೆ ವ್ಯಾಘ್ರ ಚಾಮುಂಡಿ, ಕಲ್ಕುಡ-ಕಲ್ಲುರ್ಟಿ,ಕಾಳಮ್ಮ ದೈವಗಳಿಗೆ ನೇಮೋತ್ಸವ ಜರುಗಿತು.
ಡಿ.24 ರಂದು ಬೆಳಿಗ್ಗೆ 6 ಕ್ಕೆ ಧ್ವಜಾವರೋಹಣದ ನಂತರ ಬದಿನಡೆ- ಮಂಜಲಡ್ಕ ಕ್ಷೇತ್ರದಿಂದ ದೈವಗಳ ಭಂಢಾರ ಕಳಿಯ ಬೀಡು ಮನೆಗೆ ನಿರ್ಗಮನದ ಹಾಗೂ ಸಂಪ್ರೋಕ್ಷಣೆ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿ ವೇ.ಮೂ. ಕುಂಟಿನಿ ರಾಘವೇಂದ್ರ ಭಾಂಗಿಣ್ಣಾಯರು, ಕೊಯ್ಯೂರು ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಅಶೋಕ್ ಭಟ್, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸುರೇಂದ್ರ ಕುಮಾರ್ ಜೈನ್ ಕಳಿಯ ಬೀಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುವರ್ಣೇಂದ್ರ ಜೈನ್ ಕಳಿಯ ಬೀಡು, ನಡಗುತ್ತು ಧನಂಜಯ ಅಜ್ರಿ, ನಾಲೂರು ಗುತ್ತು ಶಂಕರ ಯಾನೆ ರತ್ನಾಕರ ಕೊಂಡೆ,ಬೊಳಿಯಂಜಿ ಮುನಿರಾಜ ಅಜ್ರಿ, ಕಳಿಯಬೀಡು ಸಹೋದರರು, ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು,ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಕೂಸಪ್ಪ ಗೌಡ ಹೀರ್ಯ,ಉದ್ಯಮಿ ವೆಂಕಟರಮಣ ಪೈ ಗೇರುಕಟ್ಟೆ, ಹರಿಪ್ರಸಾದ್ ಭಟ್ ಕುಂಟಿನಿ, ಬದಿನಡೆ- ಮಂಜಲಡ್ಕ ಜಾತ್ರಾ ಮಹೋತ್ಸವ ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ,ಗೌರವ ಸಲಹೆಗಾರ ಸುರೇಶ್ ಕುಮಾರ್ ಆರ್.ಎನ್, ಕೃಷ ಕೆ, ದಿವಾಕರ ಆಚಾರ್ಯ, ನಾಳ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಜಿ, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮೆದಿನ,ಉಪಾಧ್ಯಕ್ಷೆ ಇಂದಿರಾ ಬಿ ಶೆಟ್ಟಿ, ಸದಸ್ಯರಾದ ಯಶೋಧರ ಶೆಟ್ಟಿ ಕೆ.ಮಾಣಿಕ್ಯ, ಸುಧಾಕರ ಮಜಲು, ವಿಜಯ ಕುಮಾರ್ ಕೆ.,ಶ್ರೀಮತಿ ಸುಭಾಷಿಣಿ ಕೆ, ಕುಸುಮ ಎನ್ .ಬಂಗೇರ, ಸತೀಶ್ ಕುಮಾರ್ ಆರ್.ಎನ್., ಕಳಿಯ ಸಿ.ಎ.ಬ್ಯಾಂಕ್ ನೂತನ ನಿರ್ದೇಶಕರಾದ ಕೇಶವ ಪೂಜಾರಿ ಕುಳಾಯಿ, ಡಾ.ಅನಂತ್ ಭಟ್ ,ತುಕಾರಾಮ ಪೂಜಾರಿ, ಉದಿತ್ ಕುಮಾರ್ ಬರಾಯ,ಗೇರುಕಟ್ಟೆ ಹಾ.ಉ.ಸ.ಸಂ.ಅಧ್ಯಕ್ಷ ಜನಾರ್ಧನ ಗೌಡ ಕೆ., ಸ್ಥಳೀಯರಾದ ಜಯರಾಮ ರೈ, ಉಪನ್ಯಾಸಕ ಕೇಶವ ಬಂಗೇರ ಬಿ,ಲಿಂಗಪ್ಪ ಗೌಡ ದರ್ಖಾಸು,ರಾಜೇಶ್ ಪೆಂರ್ಬುಡ,ತುಕರಾಮ ಪೂಜಾರಿ,ಶರತ್ ಕುಮಾರ್, ರಾಜು ಶೆಟ್ಟಿ ಮೆದಿನ, ಜಯಪ್ರಕಾಶ್ ಶೆಟ್ಟಿ ಕೊರಂಜ,ರಾಘವ ಹೆಚ್, ಕರುಣಾಕರ ಶೆಟ್ಟಿ ಕೆ, ಡಾಕಯ್ಯ ಗೌಡ ಹಿರ್ಯ, ಪುರಂದರ ಗೇರುಕಟ್ಟೆ, ಪುರಂದರ ಶೆಟ್ಟಿ ಪದ್ಮನಾಭ,ಸಂಜೀವ ಬಂಗೇರ, ವಿವಿಧ ಸಮಿತಿ ಸ್ವಯಂ ಸೇವಕರು, ಸಂಘ,ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಕ್ತಾದಿಗಳು ಭಾಗವಹಿಸಿದ್ದರು.