
ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಕ್ತರ ಗಮನ ಸೆಳೆದ ಪವರ್ ಆನ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ರಚಿಸಿದ ಶ್ರೀ ಮಹಾಲಿಂಗೇಶ್ವರ ದೇವರ ಸೆಲ್ಪಿ ಪ್ಯೊಂಟ್ ಹಾಗೂ ಪವರ್ ಆನ್ ಲಕ್ಕಿ ಸ್ಟಾರ್ ಮಳಿಗೆಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭ ಕೋರಿದರು.

ಶಿರ್ಲಾಲು ಬ್ರಹ್ಮಕಲಶೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದು ಭಕ್ತರು ಸೆಲ್ಪಿ ಪಡೆಯುತ್ತ ದೇಗುಲದ ವ್ಯವಸ್ಥೆ ಹಾಗೂ ಪವರ್ ಅಸನ್ ಸಂಸ್ಥೆಯ ಬಗ್ಗೆ ಹರ್ಷ ವ್ಯಕ್ತ ಪಡುತ್ತಿದ್ದಾರೆ.
ಲಕ್ಕಿ ಸ್ಟಾರ್ ಯೋಜನೆಗೆ ಶಿರ್ಲಾಲು ಬ್ರಹ್ಮಕಲಶೋತ್ಸವದ ಮಳಿಗೆಯಲ್ಲಿ ಸೇರ್ಪಡೆಯಾದರೆ ವಿಶೇಷ ಬಹುಮಾನ ಹಾಗೂ ಬ್ರಹ್ಮಕಲಶೋತ್ಸವದ ಕೊನೆಯ ದಿನ ಕೂಪನ್ ಬಿಡುಗಡೆಯಲ್ಲಿ ಅದೃಷ್ಟಶಾಲಿಗೆ ಪ್ರಿಡ್ಜ್ ಸಿಗಲಿದೆ.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಎಂ ಪಾರೆಂಕಿ,ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ,ಸೇವಾ ಸಮಿತಿ ಅದ್ಯಕ್ಷ ಆನಂದ ಸಾಲಿಯಾನ್ ಒಡಿಮಾರ್, ತಾಪಂ ಮಾಜಿ ಸದಸ್ಯ ಸುಧೀರ್ ಆರ್ ಸುವರ್ಣ,ಶಿರ್ಲಾಲು ಗ್ರಾ.ಪಂ ಮಾಜಿ ಅಧ್ಯಕ್ಷೆ ಗುಣಮ್ಮ ಜೈನ್, ಬೆಂಗಳೂರು ಎಇಇ ಸಂದೀಪ್ ಜೈನ್ ಶಿರ್ಲಾಲು ಉಪಸ್ಥಿತರಿದ್ದರು.