26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ

ಮುಂಡಾಜೆ: ಪ್ರೌಢಶಾಲೆ ಮುಂಡಾಜೆ ಇದರ 1989-90 ಸಾಲಿನ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮವು ಹಿರಿಯ ವಿದ್ಯಾರ್ಥಿ ಸಂಘ ಮುಂಡಾಜೆ ಇದರ ಸಹಭಾಗಿತ್ವದಲ್ಲಿ ಡಿ.24 ರಂದು ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆ ಇದರ ಸಭಾಂಗಣದಲ್ಲಿ ನಡೆಯಿತು.

ಹಿರಿಯ ವಿದ್ಯಾರ್ಥಿ ಮುರಳಿಧರ ನಾಯಕ್ ಇವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಯಿತು. ಆ ಸಾಲಿನ ವಿದ್ಯಾರ್ಥಿಗಳಾದ ಶೇಖರ ನಾಯ್ಕ, ಜಯಾನಂದ ಗೌಡ, ರಾಜೇಶ್ ಗೌಡ, ಚಂದ್ರಮೋಹನ ಮರಾಠ, ಪುರುಷೋತ್ತಮ ಶೆಟ್ಟಿ ಅಗರಿ, ಸುಜಯ ನಾಗೇಂದ್ರ ಅಡೂರ್, ಪ್ರದರ್ಶ ಪರಾಂಜಪೆ, ಭಾಸ್ಕರ ಗೌಡ ದೇವಸ್ಯ, ಮುರಳಿಧರ ನಾಯಕ್, ಟಾಗೂ‌ರ್ ನಾಥ್ ಶೆಟ್ಟಿ ಹುರ್ತಾಜೆ, ಪ್ರಸನ್ನ ಕೆ ಎಂ, ಸುಧೀರ್ ಪರಾಂಜಪೆ, ಜಯರಾಮ ಶೆಟ್ಟಿ ನೆಯಾಲ್, ಪ್ರಸನ್ನ ತಾಮನ್ಮರ್, ಜಲಜ ಚಾರ್ಮಾಡಿ, ಅನಿತಾ, ರಕ್ಷಾ,ಲತಾ, ಸಾವಿತ್ರಿ ಇವರುಗಳು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಾವು ಬೆಳೆದು ಬಂದ ದಾರಿ ಹಾಗೂ ಇನ್ನಿತರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕಜೆ ವೆಂಕಟೇಶ್ ಭಟ್, ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆ ಇದರ ಅಧ್ಯಕ್ಷರಾದ ವಿನಯ ಚಂದ್ರ, ಸದಸ್ಯರಾದ ನಾರಾಯಣ ಪಢಕೆ ಇವರು ಹಿರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

Related posts

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿ ಯೋಜನೆಯ‌ ಸಹಾಯಧನ ಹಸ್ತಾಂತರ

Suddi Udaya

ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿ

Suddi Udaya

ಮುಂಡಾಜೆ: ಅರಸುಮಜಲು ನಿವಾಸಿ ಗುರುವಪ್ಪ ಪೂಜಾರಿ ನಿಧನ

Suddi Udaya

ಮುಂಡಾಜೆಯ ದುಂಬೆಟ್ಟು ಪ್ರದೇಶದಲ್ಲಿ ಚಿರತೆ ಹಾವಳಿ

Suddi Udaya

ವೇಣೂರು -ಪೆರ್ಮುಡ “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾoಶ

Suddi Udaya

ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ರೀಡಾಕೂಟ

Suddi Udaya
error: Content is protected !!