ಮಿತ್ತಬಾಗಿಲು: ಸಂಪೂರ್ಣ ಶಿಲಾಮಯ ದೇವಸ್ಥಾನವಾಗಿ ಕಂಗೊಳಿಸುತ್ತಿರುವ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿಯ ಸೊಬಗಿದೆ ಪ್ರಕೃತಿಯ ಪಶ್ಚಿಮ ಘಟ್ಟವೇ ಪ್ರಭಾವಳಿ ತೊಡಿಸಿದಂತೆ.ಈ ಕ್ಷೇತ್ರದ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಕಾರ್‍ಯಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದರು.
ಅವರು ಡಿ.25 ರಂದು ಕೊಲ್ಲಿ ದೇವಸ್ಥಾನದಲ್ಲಿ ರಕ್ತೇಶ್ವರಿ ದೈವದ ಕಟ್ಟೆಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ತೋಡ್ತಿಲಾಯ, ಯಶೋಧರ ಬಂಗೇರ, ವಾಸುದೇವ ರಾವ್ ಕಕ್ಕೆನೇಜಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ| ಬಿ.ಕೆ ಲೊಕೇಶ್ ರಾವ್, ಪ್ರದಾನ ಕಾರ್‍ಯದರ್ಶಿ ದಿನೇಶ್ ಗೌಡ, ಕೆ. ದಾಸಪ್ಪ ಗೌಡ, ವಿನಯ ಸೇನರಬೆಟ್ಟು, ಕೃಷ್ಣಪ್ಪ ಪೂಜಾರಿ ಕಿಲ್ಲೂರು ಮತ್ತಿತರರು ಉಪಸ್ಥಿತರಿದ್ದರು.