ಶಿರ್ಲಾಲು: ಇತಿಹಾಸ ಪ್ರಸಿದ್ದ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇಗುಲದ ಬ್ರಹ್ಮಕಲಶೋತ್ಸವ ನಾಲ್ಕನೇ ದಿನದ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವ ದತ್ತ ಮಹಾ ಸಂಸ್ಥಾನಮ್‌ದ ಸಾದ್ವಿ ಶ್ರೀ ಮಾತಾನಂದಮಯಿರವರು ಆಶೀರ್ವಚನ ನೀಡಿದರು.
ಶಿರ್ಲಾಲು ಸಿಎ ಬ್ಯಾಂಕಿನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಹೆಚ್.ನಿತ್ಯಾನಂದ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್,,
ಹಿರಿಯರಾದ ವಿನಯಚ್ಚಂದ್ರ ಪುದ್ದರಬೈಲು,ರವಿಚಂದ್ರ ಬಂಗೇರ ಮುಳಿಬೆಟ್ಟು ಕರಂಬಾರು,ಬದ್ಯಾರು ಲೋಕನಾಥೇಶ್ವರ ದೇವಸ್ಥಾನದ ಅರ್ಚಕ ಸೂರ್ಯನಾರಾಯಣ ರಾವ್,ಶಿರ್ಲಾಲು ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಜಗನ್ನಾಥ್ ಆಂತ್ರಂಗೆ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಎಂ ಪಾರೆಂಕಿ,
ಸೇವಾ ಸಮಿತಿ ಅಧ್ಯಕ್ಷ ಆನಂದ ಸಾಲಿಯಾನ್ ಓಡಿಮಾರ್ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ರವಿರಾಜ್ ಸ್ವಾಗತಿಸಿ, ಸಿ.ಆರ್.ಪಿ ರಾಜೇಶ್ ನಿರೂಪಿಸಿದರು. ಪ್ರಸಾದ್ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಮಧ್ಯಾಹ್ನ ಅರುಣ್ ಆಚಾರ್ಯ ಸವಣಾಲು ಮತ್ತು ಬಳಗದವರಿಂದ ಭಕ್ತಿ ಗಾನಸುಧೆ, ಸಂಜೆ ಹುರುಂಬಿದೊಟ್ಟು ಅಂಗನವಾಡಿ ಪುಟಾಣಿಗಳ ಚಿಲಿಪಿಲಿ ಕಾರ್ಯಕ್ರಮಗಳು, ರಾತ್ರಿ ಶಿರ್ಲಾಲು ಸ.ಉ.ಹಿ.ಪ್ರಾ. ಶಾಲೆ ವಿದ್ಯಾರ್ಥಿಗಳಿಂದ ರೂಪಕ, ಹಾಸ್ಯಚಟಾಕಿ ಮತ್ತು ವೈವಿಧ್ಯಮಯ ನೃತ್ಯ ಕಲಾ ವೈಭವ, ಜಿಲ್ಲಾ ಮಟ್ಟವನ್ನು ಪ್ರತಿನಿಧಿಸಿದ ಸ್ಥಳೀಯ ವಿದ್ಯಾರ್ಥಿನಿ ಕು| ರಂಜಿತಾ ಬಿ ರವರಿಂದ ಯೋಗಾಸನ ಪ್ರದರ್ಶನ, ಶ್ರೀ ವಿಷ್ಣು ಕಲಾವಿದರು ಮದ್ದಡ್ಕ ಅಭಿನಯದ ತುಳು ಸಾಮಾಜಿಕ ಭಕ್ತಿ ಪ್ರಧಾನ ಹಾಸ್ಯಮಯ ನಾಟಕ ಬ್ರಹ್ಮದಂಡ ಪ್ರದರ್ಶನಗೊಂಡಿತು.
ವೈದಿಕ ಕಾರ್ಯಕ್ರಮ: ಬೆಳಿಗ್ಗೆ ಗಣಹೋಮ, ಚಂಡಿಕಾ ಹೋಮ, ಶ್ರೀ ಕ್ಷೇತ್ರದ ಮೂಲ ಸ್ಥಳ ಭೂತಲಾ ಗುಡ್ಡೆಯಲ್ಲಿ ಸಾಮೂಹಿಕ ಪ್ರಾರ್ಥನೆ, ಸಾಲಿಗ್ರಾಮಕ್ಕೆ ರುದ್ರಾಭಿಷೇಕ, ಬ್ರಹ್ಮಕಲಶ ಮಂಡಲ ರಚನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ ಕುಂಭೇರ ಕರ್ಕರಿ ಪೂಜೆ, ಪರಿಕಲಶ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಉಜಿರೆ ಮಲೆಬೆಟ್ಟು ಶ್ರೀ ಮಹಾಗಣಪತಿ ಮಕ್ಕಳ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.