30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗೃಹಲಕ್ಷ್ಮೀ ಯೋಜನೆ: ಬ್ಯಾಂಕ್‌ಖಾತೆಗೆ ಆಧಾರ್ ಜೋಡಣೆ ಪರಿಶೀಲನೆ ; ಕೊಕ್ಕಡ ಗ್ರಾ.ಪಂದಲ್ಲಿ ನಡೆದ ಕಾರ್ಯಕ್ರಮದ ಮಾಹಿತಿ ನೀಡದಿರುವುದನ್ನು ವಿರೋಧಿಸಿ, ಪಂಚಾಯತು ಎದುರು ಅಧ್ಯಕ್ಷ-ಉಪಾಧ್ಯಕ್ಷ ಸದಸ್ಯರ ಪ್ರತಿಭಟನೆ

ನಿನ್ನೆ ಪಂಚಾಯತ್ ನಲ್ಲಿ ನಡೆದ ಕಾರ್ಯಕ್ರಮ


ಕೊಕ್ಕಡ: ಕೊಕ್ಕಡ ಗ್ರಾಮ ಪಂಚಾಯತ್‌ನಲ್ಲಿ ಡಿ.27ರಂದು ಗೃಹಲಕ್ಷೀ ಯೋಜನೆಗೆ ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಿಸುವ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಈ ಕಾರ್ಯಕ್ರಮದ ಬಗ್ಗೆ ಪಿಡಿಒ ನಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ, ಪಂಚಾಯತು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಗ್ರಾಮ ಪಂಚಾಯತು ಎದುರು ಪ್ರತಿಭಟನೆ ನಡೆಸುತ್ತಿರುವ ವಿದ್ಯಾಮಾನ ಕೊಕ್ಕಡದಲ್ಲಿ ನಡೆದಿದೆ.

ಸರಕಾರದ ಗ್ಯಾರಂಟಿ ಯೋಜನೆ ಗೃಹಲಕ್ಷ್ಮೀ ಯೋಜನೆ ಹಲವು ಮಂದಿ ಮಹಿಳೆಯರಿಗೆ ಬಾರದಿರುವ ಹಿನ್ನಲೆಯಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡದಿರುವ ವಿಷಯ ಕಂಡು ಬಂದ ಹಿನ್ನಲೆಯಲ್ಲಿ ಪ್ರತಿ ಪಂಚಾಯತದಲ್ಲಿ ಈ ಬಗ್ಗೆ ಪರಿಶೀಲನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಕೊಕ್ಕಡ ಗ್ರಾಮ ಪಂಚಾಯತದಲ್ಲಿ ನಿನ್ನೆ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಪಿಡಿಒ ಯಾವುದೇ ಮಾಹಿತಿ ನೀಡಿಲ್ಲ ಎಂದು ಪ್ರತಿಭಟನಾಗಾರರು ಆಕ್ರೋಶ ವ್ಯಕ್ತಪಡಿಸಿದರು.


ಸ್ಥಳಕ್ಕೆ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಅಥವಾ ತಾಲೂಕು ಪಂಚಾಯತ್ ಅಧಿಕಾರಿಗಳು ಬಂದು ಸಮಸ್ಯೆ ಆಲಿಸುವಂತೆ ಪ್ರತಿಭಟನಾಗಾರರು ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಪ್ರಭಾಕರ ಗೌಡ, ಸದಸ್ಯರಾದ ಯೋಗೀಶ್, ಪವಿತ್ರಾ ಕೆ., ವನಜಾಕ್ಷಿ, ಶರತ್, ಲತಾ, ಜಾನಕಿ, ಪುರುಷೋತ್ತಮ, ಪ್ರಮೀಳಾ, ವನಿತಾ ಮೊದಲಾದವರು ಪಂಚಾಯತು ಎದುರು ನೆಲದಲ್ಲಿ ಕುಳಿತು ಈ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.


ಯಾವುದೇ ಮಾಹಿತಿ ನೀಡಿಲ್ಲ:


ನಿನ್ನೆ ನಮ್ಮ ಪಂಚಾಯತದಲ್ಲಿ ನಡೆದ ಗೃಹಲಕ್ಷ್ಮೀ ಯೋಜನೆಗೆ ಆಧಾರ ಜೋಡಣೆ ಕಾರ್ಯಕ್ರಮದ ಬಗ್ಗೆ ಅಧ್ಯಕ್ಷಳಾಗಿರುವ ನನಗೆ, ಉಪಾಧ್ಯಕ್ಷರಿಗೆ, ಸದಸ್ಯರಿಗೆ ಯಾವುದೇ ಮಾಹಿತಿ ನೀಡಲ್ಲ, ಅದಕ್ಕಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಸರಕಾರದ ಯೋಜನೆ ಬಗ್ಗೆ ನಮಗೆ ಮಾಹಿತಿ ನೀಡಬೇಕು, ಜನರು ಕೇಳುವಾಗ ನಾವು ಏನೆಂದು ಉತ್ತರ ಕೊಡಬೇಕು, ಅದಕ್ಕಾಗಿ ಪಿಡಿಒ ವಿರುದ್ಧವಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ವಾಟ್ಸಪ್‌ನಲ್ಲಿ ನನಗೆ ಮಾಹಿತಿ ನೀಡಿದ್ದಾರೆ. ಉಳಿದವರಿಗೆ ಯಾರಿಗೂ ತಿಳಿಸಿಲ್ಲ. ಎಲ್ಲರಿಗೂ ಮಾಹಿತಿ ನೀಡಬೇಕು ಇನ್ನು ಮುಂದೆ ಹೀಗೆ ಆಗಬಾರದು.
-ಶ್ರೀಮತಿ ಬೇಬಿ ಅಧ್ಯಕ್ಷೆ

ನಾವು ಪಂಚಾಯತದಲ್ಲಿದ್ದು ಏನು ಪ್ರಯೋಜನ:

ಗ್ರಾ.ಪಂ ಅಧ್ಯಕ್ಷ- ಉಪಾಧ್ಯಕ್ಷ ಸದಸ್ಯರಿಗೆ ಗೊತಿಲ್ಲದೆ ಕಾರ್ಯಕ್ರಮ ಮಾಡಿದ್ದಾರೆ. ನಾವು ಪಂಚಾಯತದಲ್ಲಿ ಇದ್ದು ಏನು ಪ್ರಯೋಜನ, ಯಾರು ಯಾರನ್ನೋ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಿಸುತ್ತಾರೆ ಎಂದರೆ ನಾವು ಯಾಕೆ ಬೇಕು? ಈ ಯೋಜನೆ ಗ್ರಾಮದ ಪ್ರತಿಯೊಬ್ಬರಿಗೂ ಮುಟ್ಟಬೇಕು ಎಂಬುದು ನಮ್ಮ ಉದ್ದೇಶ ಇದೆ. ಆದರೆ ನಮಗೆ ಗೊತ್ತಿಲ್ಲದೆ ಕಾರ್ಯಕ್ರಮ ಮಾಡಿದರೆ ನಾವು ಹೇಗೆ ಜನರಿಗೆ ಮುಟ್ಟಿಸುವುದು, ಜನರು ನಮ್ಮನ್ನು ಕೇಳುತ್ತಾರೆ. ನಾವು ಏನು ಉತ್ತರ ಕೊಡಬೇಕು, ನಮಗೆ ಬಹಳಷ್ಟು ಬೇಸರವಾಗಿದೆ. ಮುಂದೆ ಈ ರೀತಿ ಆಗಬಾರದು.

ಪ್ರಭಾಕರ ಗೌಡ ಗ್ರಾ.ಪಂ ಉಪಾಧ್ಯಕ್ಷ

ಸರಕಾರದ ಬ್ಯಾನರ್‌ನಡಿ ಕಾಂಗ್ರೆಸ್ ಕಾರ್ಯಕರ್ತನನ್ನು ಕುಳ್ಳಿರಿಸಿ ಕಾರ್ಯಕ್ರಮ

ಕರ್ನಾಟಕ ಸರಕಾರ ಘೋಷಣೆ ಮಾಡಿರುವ ಗೃಹಲಕ್ಷ್ಮೀ ಯೋಜನೆಯ ಆಧಾರ್ ಕಾರ್ಡ್ ಜೋಡಣೆಯ ಪ್ರಕ್ರಿಯೆ ಡಿ.27 ರಂದು ನಮ್ಮ ಪಂಚಾಯತದಲ್ಲಿ ನಡೆದಿದೆ. ಅಧ್ಯಕ್ಷ ಉಪಾಧ್ಯಕ್ಷ ಸೇರಿ ಯಾವುದೇ ಸದಸ್ಯರಿಗೆ ಪಿಡಿಒ ಮಾಹಿತಿ ಕೊಡದೆ ಸರಕಾರದ ಬ್ಯಾನರ್‌ನಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಅಲ್ಲಿ ಕೂರಿಸಿಕೊಂಡು ಕಾರ್ಯಕ್ರಮವನ್ನು ಮಾಡಿದ್ದಾರೆ. ಕಾರ್ಯಕ್ರಮ ಮಾಡುವುದು ಒಳ್ಳೆಯದೆ, ನಾವು ವಿರೋಧಿಗಳಲ್ಲ, ಗೃಹಲಕ್ಷ್ಮೀ ಯೋಜನೆಯನ್ನು ಪ್ರತಿಮನೆಗೆ ಮುಟ್ಟಿಸುವ ಜಬಾಬ್ದಾರಿ ನಮಗೂ ಇದೆ. ನಾವು ಕೂಡಾ ಜನಪ್ರತಿನಿಧಿಗಳು, ಇಷ್ಟರವರೆಗೆ ಸರಕಾರದ ಯೋಜನೆಗಳ ಮಾಹಿತಿ ನಿರಂತರವಾಗಿ ಕೊಡುತ್ತಿದ್ದರು. ಆದರೆ ನಿನ್ನೆಯ ಕಾರ್ಯಕ್ರಮಕ್ಕೆ ಇವರು ಸರಿಯಾದ ಮಾಹಿತಿ ಕೊಡದೆ ನಮ್ಮ ಜವಾಬ್ದಾರಿಗೆ ತೊಡಕನ್ನು ಮಾಡಿದ್ದಾರೆ. ಇದಕ್ಕೆ ಪಿಡಿಒ ಕಾರಣಕರ್ತರು, ಸರಕಾರ ಆದೇಶ ಮಾಡಿದ್ದರೂ, ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳದೆ ಜನಪ್ರತಿನಿಧಿಗಳಿಗೆ ಮಾಹಿತಿ ಕೊಡದೆ ಇರುವುದು ಇದರ ಉದ್ದೇಶ ಕಾಂಗ್ರೆಸ್ ಕಡೆಯವರ ಪಿತೂರಿ ಎಂದು ಭಾವಿಸಬೇಕಾಗುತ್ತದೆ. ಪಿಡಿಒ ನಮಗೆ ಮಾಹಿತಿ ನೀಡದೆ ನಮ್ಮ ಹಕ್ಕನ್ನು ಚ್ಯುತಿ ಮಾಡಿರುವುದಕ್ಕೆ ನಾವು ಪ್ರತಿಭಟನೆ ಮಾಡುತ್ತಿದ್ದೇವೆ.
-ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಅಲಂಬಿಲ

Related posts

ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ ಗ್ರಾಮಗಳಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸುದ್ದಿ ಉದಯ ಪತ್ರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಖ್ಯಾತ ಚಿತ್ರನಟ ರಮೇಶ್ ಅರವಿಂದ

Suddi Udaya

ಅರಸಿನಮಕ್ಕಿ: 20ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ

Suddi Udaya

ಎ.22-ಮೇ.20: ಮುಳಿಯ ಮಳಿಗೆಗಳಲ್ಲಿ ‘ಮುಳಿಯ ಚಿನ್ನೋತ್ಸವ ಸಂಭ್ರಮ’ ಗ್ರಾಹಕರ ನೆಚ್ಚಿನ ಚಿನ್ನಾಭರಣಗಳನ್ನು ಆಕರ್ಷಕ ಬೆಲೆಗೆ ಖರೀದಿಸಲು ಸುವರ್ಣವಕಾಶ

Suddi Udaya

ನಾವೂರು: ಕೈಕಂಬ ಸೇತುವೆಯಲ್ಲಿ ಘನ ವಾಹನ ಸಂಚಾರಿಸದಂತೆ ಮರದ ತಡೆಗೋಡೆ ನಿರ್ಮಾಣ

Suddi Udaya

ಡಿ.27-28 ರಂದು ನಡೆಯಬೇಕಾಗಿದ್ದ ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ ರದ್ದು

Suddi Udaya
error: Content is protected !!