April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ ಬೋಂಟ್ರೊಟ್ಟುಗುತ್ತು ದೈವಸ್ಥಾನಕ್ಕೆ ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ವಿಧಾನಪರಿಷತ್ ಶಾಸಕ ಕೆ.ಪ್ರತಾಪ ಸಿಂಹ ನಾಯಕರಿಂದ ಉಗ್ರಾಣದ ಉದ್ಘಾಟನೆ

ಬಳಂಜ:ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಕ್ಷೇತ್ರ ಬೋಂಟ್ರೊಟ್ಟು ಗುತ್ತುಗೆ ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಿದರು.

ಬಳಂಜ ಶ್ರೀ ದೈವ ಕೊಡಮಣಿತ್ತಾಯ ಆವರಣದಿಂದ ಬೊಂಟ್ರೋಟ್ಟು ಕ್ಷೇತ್ರಕ್ಕೆ ಮೆರವಣಿಗೆಯ ಮೂಲಕ ಹಸಿರಯವಾಣಿಯನ್ನು ತರಲಾಯಿತು.ಹೊರೆಕಾಣಿಕೆ ಮೆರವಣಿಗೆಗೆ ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕರಾದ ದೇಜಪ್ಪ ಪೂಜಾರಿ ಸುಧಾಮ,ದಿನೇಶ್ ಪಿ.ಕೆ ಚಾಲನೆ ನೀಡಿದರು.ಉಗ್ರಾಣ ಮುಹೂರ್ತವನ್ನು ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ ಸಿಂಹ ನಾಯಕ್ ನೇರವೇರಿಸಿ ಶುಭಕೋರಿದರು.ವೇದಿಕೆಯಲ್ಲಿ ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಹೊಳ್ಳ ಉಪಸ್ಥಿತರಿದ್ದರು. ಪ್ರತಾಪಸಿಂಹ ನಾಯಕ್ ಅವರನ್ನು ಬೊಂಟ್ರೋಟ್ಟು ಕ್ಷೇತ್ರದ ವತಿಯಿಂದ ಗೌರವಿಸಿ,ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಲಶಾಭಿಷೇಕ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ, ಕಾರ್ಯದರ್ಶಿ ಗಣೇಶ್ ಪೂಜಾರಿ,ಟ್ರಸ್ಟ್ ಅಧ್ಯಕ್ಷ ಹರೀಶ್ ಕೆ ಪೂಜಾರಿ ಬೈಲಬರಿ,ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್ ಬಳಂಜ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್.ಪ್ರಮುಖರಾದ ಕೃಷ್ಣಪ್ಪ ಪೂಜಾರಿ,ಸದಾನಂದ ಪೂಜಾರಿ,ಬಾಲಕೃಷ್ಣ ಪೂಜಾರಿ ಯೈಕುರಿ,ಬಳಂಜ ಗ್ರಾಪಂ ಉಪಾಧ್ಯಾಕ್ಷ ಯಶೋಧರ ಶೆಟ್ಟಿ,ಅಳದಂಗಡಿ ಸಿಎ ಬ್ಯಾಂಕ್ ಅನಿಲ್,ಅಖಿಲ್, ಅವಿನಾಶ್, ಸುಕೇಶ್,ಉದ್ಯಮಿ ಜಗದೀಶ್ ಪೆರಾಜೆ,ಶ್ಯಾಮ್ ಬಂಗೇರ ಪೆರಾಜೆ,ರವೀಂದ್ರ ಪೂಜಾರಿ ಹೇವ,ಹರೀಶ್ ರೈ ಬರಮೇಲು,ಆನಂದ ಶೆಟ್ಟಿ,ಅಶೋಕ್ ಮುಡಾಯಿಬೆಟ್ಟು,ರಮಾನಾಥ ಶೆಟ್ಟಿ ಪಂಬಾಜೆ,ಡೀಕಯ್ಯ ಕುಲಾಲ್, ಪ್ರವೀಣ್ ಪೂಜಾರಿ ಲಾಂತ್ಯಾರು,ಹರೀಶ್ ವೈ ಚಂದ್ರಮ,ದಿನೇಶ್ ಪೂಜಾರಿ ಅಂತರ,ಸುರೇಶ್ ಪೂಜಾರಿ ಹೇವ,ಪದ್ಮನಾಭ ಕುಲಾಲ್ ಬಳಂಜ, ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Related posts

ಪೆರಿಂಜೆ ನಿವಾಸಿ ರಾಘು ಪೂಜಾರಿ ನಿಧನ

Suddi Udaya

ಯೋಗಾಸನ ಸ್ಪರ್ಧೆ: ವಾಣಿ ಕಾಲೇಜಿನ ವಿದ್ಯಾರ್ಥಿ ಮೋಹಿತ್ ಏಷ್ಯನ್ ಗೇಮ್ಸ್ ಗೆ ಆಯ್ಕೆ

Suddi Udaya

ಕಾಪಿನಡ್ಕ: ಶಿವಗಿರಿ ಕೃಪಾದಲ್ಲಿ ಅಂಧರ ಗೀತಾ ಗಾಯನ ಕಾರ್ಯಕ್ರಮ

Suddi Udaya

ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ‘ಅಭಯೋದ ಸಿರಿ ಅಪ್ಪೆ ರಕ್ತೇಶ್ವರಿ’ ತುಳು ಭಕ್ತಿ ಗೀತೆ ಬಿಡುಗಡೆ

Suddi Udaya

ಉಜಿರೆಯಲ್ಲಿ ಸದಸ್ಯತ್ವ ನೊಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ

Suddi Udaya

ಪುಂಜಾಲಕಟ್ಟೆ ಸ.ಪ್ರ.ದ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಘದ ಉದ್ಘಾಟನೆ

Suddi Udaya
error: Content is protected !!