ಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ 2023 ನೇ ವರ್ಷದ ಕೊನೆಯ ಕಾರ್ಯಕ್ರಮ ಗ್ರಾಟಿಟ್ಯೂಡ್ ಹಮ್ಮಿಕೊಳ್ಳಲಾಯಿತು
ಜೆಸಿ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷರಾಗಿ ಶಂಕರ್ ರಾವ್ ಮತ್ತು ತಂಡ ಚುಕ್ಕಾಣಿ ಹಿಡಿದು ವರ್ಷದುದ್ದಕ್ಕೂ ವಿಭಿನ್ನ ಕಾರ್ಯಕ್ರಮಗಳೊಂದಿಗೆ ವಲಯ ಮತ್ತು ರಾಷ್ಟ್ರೀಯ ಮಟ್ಟದಿಂದ 40ಕ್ಕೂ ಮಿಕ್ಕಿದ ಪ್ರಶಸ್ತಿ ಮನ್ನಣೆಗೆ ಪಾತ್ರವಾಯಿತು.
ಜೆಸಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಉಜಿರೆ ಇಲ್ಲಿನ ಚೀಫ್ ಅಸೋಸಿಯೇಟ್ ವಾಸುದೇವ ಸೋಮಯಾಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅಧ್ಯಕ್ಷರು ಮತ್ತು ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಗೌರವ ಉಪಸ್ಥಿತಿಯಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಭಾಗವಹಿಸಿದ್ದರು.
ಘಟಕಾಧ್ಯಕ್ಷ ಶಂಕರ್ ರಾವ್ ತನ್ನ ಜೊತೆ ಒಂದು ವರ್ಷ ಸಹಕರಿಸಿದ ನಿಕಟಪೂರ್ವ ಅಧ್ಯಕ್ಷರಾದ ಪ್ರಸಾದ್ ಬಿ. ಎಸ್, ಕಾರ್ಯದರ್ಶಿ ಸುಧೀರ್ ಕೆ. ಎನ್, ಮಹಿಳಾ ವಿಭಾಗದ ಸಂಯೋಜಕಿ ಮಮಿತ ಸುಧೀರ್ ಹಾಗೂ ಜೂನಿಯರ್ ಜೆಸಿ ಅಧ್ಯಕ್ಷ ರಾಮ ಕೃಷ್ಣ ಶರ್ಮಾರನ್ನು ಗೌರವಿಸಿದರು,
ವರ್ಷಪೂರ್ತಿ ಸರ್ವರೀತಿಯಲ್ಲೂ ಸಹಕರಿಸಿದ ಪೂರ್ವಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು ಮತ್ತು ಜೂನಿಯರ್ ಜೆಸಿ ಸದಸ್ಯರುಗಳಿಗೆ ನೆನಪಿನ ಕಾಣಿಕೆ ನೀಡಿ ಸಂತಸ ವ್ಯಕ್ತ ಪಡಿಸಿದರು.
2024ನೇ ಸಾಲಿನ ಅಧ್ಯಕ್ಷರಾಗಿ ಮೈಟ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ರಂಜಿತ್ ಎಚ್. ಡಿ ಯವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು.
ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಶಂಕರ್ ರಾವ್ ವಲಯ ಉಪಾಧ್ಯಕ್ಷರಾಗಿ ಚುನಾಯಿತ ಗೊಂಡ ಸಂತಸದಲ್ಲಿ
ಜೂನಿಯರ್ ಜೆಸಿ ತಂಡವೂ ಗೌರವಿಸಿತು.
ಸದಸ್ಯ ಅನುದೀಪ್ ಜೈನ್ ವೇದಿಕೆ ಆಹ್ವಾನ ನಡೆಸಿಕೊಟ್ಟರು, ಜೆಸಿ ವಾಣಿಯನ್ನು ಜೂನಿಯರ್ ಜೆಸಿ ಸದಸ್ಯೆ ಕನ್ನಿಕಾ ವಾಚಿಸಿದರು,