25 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುಲ್ಕೇರಿಯಲ್ಲಿ ಭಗವಾನ್ 1008 ಶ್ರೀ ನೇಮಿನಾಥ ಸ್ವಾಮಿ ಬಸದಿ ಧಾಮ ಸಂಪ್ರೋಕ್ಷಣ ಮಹೋತ್ಸವ

ಸುಲ್ಕೇರಿ : ಭಗವಾನ್ 1008 ಶ್ರೀ ನೇಮಿನಾಥ ಸ್ವಾಮಿ ಬಸದಿಯ ಪುನಃ ಪ್ರತಿಷ್ಠಾ ಮಹೋತ್ಸವವು ವಿವಿಧ ಧಾರ್ಮಿಕ ವಿಧಿ – ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದೆ.ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ವಹಿಸಿ ಮಾತನಾಡಿ ಧಾನ ಧರ್ಮ ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ.

ಸುಲ್ಕೇರಿ ಬಸದಿಯ ಕೆಲಸ ಎಲ್ಲ ಶ್ರಾವಕ ಬಂಧುಗಳ ತ್ಯಾಗದ ಫಲದಿಂದ ಬಹುವೇಗವಾಗಿ ನಿರ್ಮಾಣಗೊಂಡಿದೆ ಎಂದರು.ವೇದಿಕೆಯಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು,ಶ್ರೀ ಕ್ಷೇತ್ರ ಪಡ್ದ್ಯಾರಬೆಟ್ಟ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ್ ಕುಮಾರ್,ವಿಧಾನ ಪರಿಷತ್ ಶಾಸಕರಾದ ಕೆ. ಪ್ರತಾಪಸಿಂಹ ನಾಯಕ್,ಮೂಡಬಿದ್ರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್, ಅಳದಂಗಡಿಯ ಪದ್ಮಾಂಭ ನಾಗಕುಮಾರ್ ಜೈನ್,ಸುಲ್ಕೇರಿ‌‌ ಶ್ರೀ ನೇಮಿನಾಥ ಬಸದಿಯ ಆಡಳಿತ ಮೊಕ್ತೇಸರ ರವಿರಾಜ್ ಹೆಗ್ಡೆ,ತುಮಕೂರು ಉದ್ಯಮಿ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.ಸುಲ್ಕೇರಿ ಬಸದಿ,ಗ್ರಾಮಾಭಿವೃದ್ದಿ ಯೋಜನೆಯ ಪರವಾಗಿ ಡಾ.ಹೆಗ್ಗಡೆಯವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ‌ ವಾಸ್ತು ತಜ್ಞ ಡಾ.ಪಾದೂರು ಸುದರ್ಶನ ಕುಮಾರ ಇಂದ್ರ ಹಾಗೂ ನಿರ್ಮಲ್ ಕುಮಾರ್ ಜೈನ್ ಮೂಡಬಿದ್ರೆ ಇವರನ್ನು ಸನ್ಮಾನಿಸಲಾಯಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ‌.ಪದ್ಮಪ್ರಸಾದ ಅಜಿಲರು ಸ್ವಾಗತಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಅಕ್ಷಯ್ ಕುಮಾರ್ ಜೈನ್ ವಂದಿಸಿದರು.

ಪ್ರತೀ ದಿನದ ಸಂಗೀತ ಪೂಜಾಷ್ಟಕವನ್ನು ಜಿನಗಾನ ವಿಶಾರದೆ ಶ್ರೀಮತಿ ಜಯಶ್ರೀ ಧರಣೇಂದ್ರ ಜೈನ್ ಹೊರನಾಡು ಮತ್ತು ತಂಡದವರು ನಡೆಸುತ್ತಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ, ಝಿ ಕನ್ನಡ, ಕಲರ್ಸ್ ಕನ್ನಡ ರಿಯಾಲಿಟಿ ಶೋಗಳನ್ನು ನೀಡಿರುವ ಜ್ಞಾನ ಐತಾಳ್ ನೇತೃತ್ವದ “ಹೆಜ್ಜೆನಾದ” ಮಂಗಳೂರು ತಂಡದವರಿಂದ ನೃತ್ಯ-ಸಂಗೀತ ವೈಭವ ನಡೆಯಿತು‌.

Related posts

ಲಾಯಿಲ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ವಾರ್ಷಿಕ ಸಭೆ: ಸಮಿತಿ ರಚನೆ

Suddi Udaya

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾದಿಂದ ಬೈಕ್ ಜಾಥದ ಮೂಲಕ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ನಾರಾವಿ: ಹಿರ್ತೋಟ್ಟು ಮೀನಗುಂಡಿಗೆ ವಿಷ: ಅಪಾರ ಪ್ರಮಾಣದ ಮೀನುಗಳ ಸಾವು

Suddi Udaya

ನಾರಾವಿ ಸಂತ ಅಂತೋನಿ ಪ.ಪೂ. ಕಾಲೇಜಿನಲ್ಲಿ ನಶಾಮುಕ್ತ ಭಾರತ -ಪ್ರತಿಜ್ಞಾ ಸ್ವೀಕಾರ

Suddi Udaya

ಬೆಳ್ತಂಗಡಿ: ಮಹಿಳಾ ವೃಂದದಲ್ಲಿ ಝೇಂಕಾರ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ಶಿಶಿಲ: ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಚಾಮುಂಡೇಶ್ವರಿ ಅಮ್ಮನವರಿಗೆ ಬ್ರಹ್ಮಕಲಶಾಭಿಷೇಕ

Suddi Udaya
error: Content is protected !!