ಬಂದಾರು : ಗ್ರಾಮ ಪಂಚಾಯತ್ ಬಂದಾರು ಹಾಗೂ ಅಮೂಲ್ಯ ಎಚ್.ಪಿ ಗ್ಯಾಸ್ ಎಜೆನ್ಸಿ ಉಪ್ಪಿನಂಗಡಿ ಇದರ ಸಹಯೋಗದಲ್ಲಿ ಉಜ್ವಲ್ ಗ್ಯಾಸ್ ವಿತರಣೆ ಹಾಗೂ ಕೆ ವೈ ಸಿ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಮೈರೋಳ್ತಡ್ಕ ಶಾಲಾ ಮುಂಭಾಗ ಯಶಸ್ವಿ ಕಾಂಪ್ಲೆಕ್ಸ್ ಬಳಿ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬಂದಾರು ಮೊಗ್ರು ಗ್ರಾಮದ 19 ಜನ ಫಲಾನುಭವಿಗಳಿಗೆ ಉಜ್ವಲ್ ಗ್ಯಾಸ್ ವಿತರಣೆ ಮಾಡಿದರು. ಕೇಂದ್ರ ಸರ್ಕಾರದ ಸಾಧನೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಯವರು ಮಾಡಿರುವ ಸಾಧನೆ ಹಾಗೂ ಬಂದಾರು, ಮೊಗ್ರು ಗ್ರಾಮದಲ್ಲಿ ಆಗಿರುವಂತಹ ಅಭಿವೃದ್ಧಿ ಕಾಮಗಾರಿಯನ್ನು ಬಗ್ಗೆ ಉಲ್ಲೇಖ ಮಾಡಿದರು ಹಾಗೂ ಪೆರ್ಲ -ಬೈಪಾಡಿಯ ಮೈಪಾಲ ಎಂಬಲ್ಲಿ ಬಂದಾರು – ಕೊಕ್ಕಡದ ಗ್ರಾಮದ ಸಂಪರ್ಕ ಸೇತುವೆ ಕಾಮಗಾರಿ ಆರಂಭಗೊಂಡಿದೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ನೀಡಿದರು.
ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಕೀಲ ಉದಯ್ ಕುಮಾರ್ ಬಿ.ಕೆ ಯವರು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಯೋಜನೆಗಳ ಮಾಹಿತಿ ಹಾಗೂ ಮಹಿಳೆಯರಿಗೆ ಕಾನೂನು ಮಾಹಿತಿಯನ್ನು ಸವಿಸ್ತಾರವಾಗಿ ಪ್ರಾಸ್ತವಿಕವಾಗಿ ತಿಳಿಸಿದರು.
ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಇಂತಹ ಅನೇಕ ಸೌಲಭ್ಯಗಳನ್ನು ಗ್ರಾಮಸ್ತರು ಪಡೆದುಕೊಳ್ಳಬೇಕು. ಹಾಗೂ ಶಾಸಕ ಹರೀಶ್ ಪೂಂಜಾ ರವರು ಬಂದಾರು ಪಂಚಾಯತ್ ವ್ಯಾಪ್ತಿಯ ಹಲವಾರು ಕಾಮಗಾರಿಗೆ ಶ್ರಮಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿ ಇನ್ನೂ ಮುಂದೆಯೂ ಇನ್ನಷ್ಟು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪ್ಪಿನಂಗಡಿ ಅಮೂಲ್ಯ ಎಚ್. ಪಿ ಗ್ಯಾಸ್ ಮಾಲಿಕರಾದ ಚಂದಪ್ಪ ಮೂಲ್ಯ, ಪದ್ಮುಂಜ ಸಿ. ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಬರಮೇಲು, ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯರಾದ ಶ್ರೀಮತಿ ಪರಮೇಶ್ವರಿ ಕೆ ಗೌಡ, ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಗಂಗಾಧರ ಪೂಜಾರಿ ಮುಗೇರಡ್ಕ, ಸದಸ್ಯರಾದ ಶ್ರೀಮತಿ ಮಂಜುಶ್ರೀ ಊoತನಾಜೆ, ಶ್ರೀಮತಿ ಸುಚಿತ್ರ ಮುರ್ತಾಜೆ, ಚೇತನ್ ಪಾಲ್ತಿಮಾರ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ ಇವರು ಉಪಸ್ಥಿತರಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಎಚ್. ಪಿ ಗ್ಯಾಸ್ ಗ್ರಾಹಕರು ಕೆ.ವೈ. ಸಿ ಆಧಾರ್ ಬಯೋಮೆಟ್ರಿಕ್ ಸೌಲಭ್ಯ ಪಡೆದುಕೊಂಡರು.