25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕರಾಯ: ಭಗವಾನ್ ಶಿರಡಿ ಸಾಯಿ ಸತ್ಯ ಸಾಯಿ ಸೇವಾ ಕ್ಷೇತ್ರದಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆ

ಬೆಳ್ತಂಗಡಿ: ಚಿಕ್ಕಬಳ್ಳಾಪುರ ಮುದ್ದೇನಹಳ್ಳಿ ಶ್ರೀ ಸತ್ಯ ಸಾಯಿ ಸಂಸ್ಥೆಗಳ ಪದಾಧಿಕಾರಿ, ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಪರಮ ಭಕ್ತರಾದ ಸಂಜೀವ ಶೆಟ್ಟಿ ಕರಾಯ ಇವರ ಮನೆಯಲ್ಲಿ ಭಗವಾನ್ ಶಿರಡಿ ಸಾಯಿ ಸತ್ಯ ಸಾಯಿ ಸೇವಾ ಕ್ಷೇತ್ರ ಈ ಸಾಯಿ ನಗರ ಹಳೆಕೋಟೆ ಬೆಳ್ತಂಗಡಿ ಇಲ್ಲಿನ ಸದಸ್ಯರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು.

ಕಾರ್ಯಕ್ರಮದಲ್ಲಿ ಊರ ಪರಊರ ಸಾಯಿ ಭಕ್ತರು ಹಾಗೂ ಊರಿನ ಗಣ್ಯಾತೀತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಭಗವಾನ್ ಶಿರಡಿ ಸಾಯಿ ಸತ್ಯ ಸಾಯಿ ಸೇವಾ ಕ್ಷೇತ್ರ ಮತ್ತು ಸನಾತನ ಸಾರಥಿ ಸೇವಾ ಟ್ರಸ್ಟ್ ಬೆಳ್ತಂಗಡಿ ಇಲ್ಲಿನ ಅಧ್ಯಕ್ಷರಾದ ಸಿ ಎಚ್ ಪ್ರಭಾಕರ್ ಇವರ ನೇತೃತ್ವದಲ್ಲಿ ಸದಸ್ಯರೆಲ್ಲರೂ ಪಾಲ್ಗೊಂಡು ಸಹಕರಿಸಿದರು. ಪುರೋಹಿತರು ದೇವರ ಪ್ರಸಾದ ನೀಡಿ ಆಶೀರ್ವದಿಸಿದರು

Related posts

ಪಡಂಗಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಪದ್ಮುಂಜ ವಿ.ಹಿಂ.ಪ. ಘಟಕದ ವತಿಯಿಂದ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತ ಸ್ವಚ್ಛತಾ ಕಾರ್ಯ

Suddi Udaya

ರೆಖ್ಯ: ಬೋರ್‌ವೆಲ್ ವಿಷಯದಲ್ಲಿ ಮಾತುಕತೆ ,: ಹಲ್ಲೆ ಆರೋಪ ಪೊಲೀಸ್ ಠಾಣೆಗೆ ದೂರು

Suddi Udaya

ನಾಪತ್ತೆಯಾದ ಮಾಲಾಡಿ ನಿವಾಸಿ, ಬಂಟ್ವಾಳ ಅಮ್ಟಾಡಿ ಗ್ರಾ.ಪಂ. ಕಾರ್ಯದರ್ಶಿ ಲಕ್ಷ್ಮೀನಾರಾಯಣ; ನಾಲ್ಕು ದಿನಗಳ ಬಳಿಕ ಶವ ಪಟ್ರಮೆ ನದಿಯಲ್ಲಿ ಪತ್ತೆ: ಮೃತದೇಹವನ್ನು ಮೇಲೆತ್ತಿದ ಶೌರ್ಯ ವಿಪತ್ತು ನಿವ೯ಹಣಾ ತಂಡ

Suddi Udaya

ಫೆ.29-ಮಾ.2ರವರೆಗೆ ನಡೆಯಲಿರುವ ಆಗ್ನೆಯ ಏಷ್ಯಾ ಮಾಧ್ಯಮ ಅಧ್ಯಯನ ಸಮ್ಮೇಳನಕ್ಕೆ ಕೊಕ್ಕಡದ ಸಿಬಂತಿ ಪದ್ಮನಾಭ

Suddi Udaya

ಉಜಿರೆಯಲ್ಲಿ ಸ್ಕಿನ್ ಮತ್ತು ಹೇರ್ ಗೆ ಸಂಬಂಧಿಸಿದ ಕಾಸ್ಮೆಟಾಲಜಿ ಮತ್ತು ಟ್ರೈಕಾಲಜಿ ಕೇಂದ್ರದ ಉದ್ಘಾಟನೆ

Suddi Udaya
error: Content is protected !!