ತಣ್ಣೀರುಪಂತ ಗ್ರಾಮ ಪಂಚಾಯತ್ ಕರಾಯ ಗ್ರಾಮದ ಪೂಂಜಾಳ ಎಂಬಲ್ಲಿ ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕುಪ್ಪೆಟ್ಟಿ ನದಿಗೆ ಸೇರುವ ತೋಡಿನ ಹೂಳೆತ್ತುವ ಕಾಮಗಾರಿಯಲ್ಲಿ ತಣ್ಣೀರುಪಂತ ಗ್ರಾಮ ಪಂಚಾಯತ್ ಮಟ್ಟದ ಶ್ರೀ ಲಕ್ಷ್ಮೀ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಮತ್ತು ಅಲ್ಲಿನ ನಿವಾಸಿಗಳು ಭಾಗಿಯಾಗಿದ್ದಾರೆ ಈಗಾಗಲೇ 150ಮೀ ನಷ್ಟು ತೋಡಿನ ಹೂಳೆತ್ತಲಾಗಿದೆ.
ಶ್ರೀ ಲಕ್ಷ್ಮೀ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಪೂಂಜಾಳ ಇದರ ಸದಸ್ಯರುಗಳಾದ
ಸವಿತ, ಮೋಹಿನಿ, ಬಬಿತ,ಸುಂದರಿ, ಹೇಮಾವತಿ, ಭವಾನಿ,ಶ್ರೀಮತಿ, ಕಲಾವತಿ,ದೇವಕಿ, ದಯಾ,ಮಮತ, ಇಂದಿರಾ, ಧರ್ಣಮ್ಮ, ಕಮಲಾಕ್ಷಿ, ಗಿರಿಧರ, ಗಣೇಶ, ಕೃಷ್ಣಪ್ಪ,ಕೀರ್ತನ್, ಹರಿಪ್ರಸಾದ್, ಧರ್ಣಮ್ಮ, ಸುಂದರಿ, ಶ್ರೀಮತಿ, ವಿಜೇತ್ ಕುಮಾರ್ ಪಿ ಲೀಲಾವತಿ ತೋಡಿನ ಹೂಳೆತ್ತುವ ಕಾಮಗಾರಿಯಲ್ಲಿ ಭಾಗಿಯಾಗಿದ್ದಾರೆ.
ಕಾಮಗಾರಿ ನಡೆಯುತ್ತಿರುವ ವೇಳೆ ಪ್ರಭಾರ ಅಭಿವೃದ್ಧಿ ಅಧಿಕಾರಿ ಶ್ರವಣ್, ತಾಂತ್ರಿಕ ಸಹಾಯಕ ಅಭಿಯಂತರರು ಶರಣ್ ರೈ ಕಾಮಗಾರಿ ಪರಿಶೀಲಿಸಿದರು. ಈ ಸಂದರ್ಭ ತಾಲೂಕು ಐಇಸಿ ಸಂಯೋಜಕರು ವಿನಿಷ, ನರೇಗಾ ಸಿಬ್ಬಂದಿ ಪ್ರಸಾದ್ ಉಪಸ್ಥಿತರಿದ್ದರು.