ಗೇರುಕಟ್ಟೆ : ಕಳಿಯ ಗ್ರಾಮ ಬದಿನಡೆ ಸಮೀಪದ ಪುಂಡಿಕಲ್ ಕುಕ್ಕು ಅಶ್ವತಕಟ್ಟೆಯಲ್ಲಿ 15 ನೇ ವರ್ಷದ ಸಾರ್ವಜನಿಕ ಶ್ರೀ ಶನೀಶ್ವರ ಮಹಾ ಪೂಜೆ ಕುಂಟಿನಿ ರಾಘವೇಂದ್ರ ಭಾಂಗಿಣ್ಣಾಯರ ನೇತೃತ್ವದಲ್ಲಿ ವೈದಿಕ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಜ.6 ರಾತ್ರಿ ರಂದು ಜರಗಿತು.
ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಪ್ರಾಂಶುಪಾಲರಾದ ದಿವಾಕರ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಕೊಯ್ಯೂರು ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಆರ್ಚರಾದ ಅಶೋಕ್ ಕುಮಾರ್ ಭಾಂಗೀಣ್ಣಾಯರು ಹಾಗೂ ಕುಂಟಿನಿ ರಾಘವೇಂದ್ರ ಭಾಂಗೀಣ್ಣಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸ್ಥಳೀಯ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆ ಏರ್ಪಡಿಸಿದ್ದರು.ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಗೇರುಕಟ್ಟೆ ಮತ್ತು ಕುಂಟಿನಿ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಭಕ್ತರು ಆಗಮಿಸಿದರು. ದಿವಂಗತ ಕುಂಟಿನಿ ನರಸಿಂಹಮೂರ್ತಿ ಭಾಂಗೀಣ್ಣಾಯ ಹಾಗೂ ದಿವಂಗತ ಉಮೇಶ್ ಪೂಜಾರಿ ಯವರ ಚಿರಸ್ಮರಣೆ ಮಾಡಿದರು. ಊರ,ಪರಊರ ಹವ್ಯಾಸಿ ಅತಿಥಿ ಕಲಾವಿದರಿಂದ ಅಭಿಮನ್ಯು-ಕರ್ಣಾರ್ಜುನ- ರಕ್ತರಾತ್ರಿ ಯಕ್ಷಗಾನ ಬಯಲಾಟ ಜರುಗಿತು.
ಸಿಂಚನ ಮತ್ತು ಚಿನ್ಮಯಿ ಪ್ರಾರ್ಥನೆ ಮಾಡಿದರು. ಗಮಕ ಜಿಲಾಧ್ಯಕ್ಷ ಮೋಹನ್ ಕಲ್ಲೂರಾಯ ಸ್ವಾಗತಿಸಿದರು. ಶ್ರೀಮತಿ ಸುವರ್ಣ ಕುಮಾರಿ ಕುಂಟಿನಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಪದ್ಮಶ್ರೀ ಕುಂಟಿನಿ ವಂದಿಸಿದರು.