September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಂಡಾಜೆ : ಸಾಮೂಹಿಕ ಶ್ರೀ ಶನೈಚ್ಚರ ಪೂಜೆ ಹಾಗೂ ಕೀರ್ತನಾ ಕಲೋತ್ಸವ -2024

ಮುಂಡಾಜೆ : ಇಲ್ಲಿಯ 6ನೇ ವರ್ಷದ ಸಾಮೂಹಿಕ ನವಗ್ರಹ ಸಹಿತ ಶ್ರೀ ಶನೈಚ್ಚರ ಪೂಜೆ ಹಾಗೂ ಕೀರ್ತನಾ ಕಲೋತ್ಸವ -2024 ಜ.06 ರಂದು ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಕೀರ್ತನಾ ಕಲಾ ತಂಡದ ಅಧ್ಯಕ್ಷ ಸದಾನಂದ ಬಿ. ಮುಂಡಾಜೆ ಪ್ರಾಸ್ತವಿಕವಾಗಿ ಮಾತನಾಡಿ ಕೀರ್ತನಾ ಕಲಾ ತಂಡವು ರಾಜ್ಯ ರಾಷ್ಟ ಮಟ್ಟದಲ್ಲಿ ತೊಡಗಿಸಿಕೊಂಡ ವಿಚಾರವನ್ನು ವ್ಯಕ್ತಪಡಿಸಿಕೊಂಡರು. ಗೌರವ ಉಪಸ್ಥಿತಿ ವಹಿಸಿದ್ದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಕಲಾ ಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಗೈದ ಸತ್ಯ ನಾರಾಯಣ ಭಟ್, ಬಾಬು ಪೂಜಾರಿ ಕೂಳೂರು, ಚಂದ್ರಶೇಖರ ಗೌಡ ಸಾಲ್ಪಿಲ, ಆನಂದ ನಲ್ಕೆ, ಕು. ಮೌಲ್ಯ ನಾಯಕ್, ಕು. ದಿವ್ಯಶ್ರೀ ಕೆ. ಶೆಟ್ಟಿ ಯವರಿಗೆ ಅಭಿನಂದಿಸಲಾಯಿತು.ಸಭೆಯಲ್ಲಿ ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಕೂಳೂರು, ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಆಡಳಿತ ಮೊಕ್ತೇಸರರು ಕಜೆ ವೆಂಕಟೇಶ್ವರ ಭಟ್ ಉಪಸ್ಥಿತರಿದ್ದರು.

ಸಭೆಯ ಬಳಿಕ ಕೀರ್ತನಾ ಕಲಾ ತಂಡದಿಂದ ವಿದ್ಯುನ್ಮತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಹಾಗೂ ಕಲಾ ಕಲರವ ನಡೆಯಿತು.ನಾರಾಯಣ ಶೆಟ್ಟಿ ಪ್ರಾರ್ಥಿಸಿ, ಸದಾನಂದ ಬಿ. ಮುಂಡಾಜೆ ಸ್ವಾಗತಿಸಿದರು, ಕಾರ್ಯದರ್ಶಿ ಉಮೇಶ್ ಆಚಾರ್ ಧನ್ಯವಾದ ವಿತ್ತರು.

Related posts

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಗೆ ಶೈಕ್ಷಣಿಕ ಪ್ರಗತಿ ಪರಿಶೀಲನಾ ತಂಡದ ಸದಸ್ಯರು ಭೇಟಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ

Suddi Udaya

ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪ್ರಕರಣ: ಚಿಕಿತ್ಸೆ ಫಲಿಸದೆ ಕಾಲೇಜು ವಿದ್ಯಾರ್ಥಿ ಸಾವು

Suddi Udaya

ವಾಲಿಬಾಲ್ ಪಂದ್ಯಾಟ : ಬೆಳ್ತಂಗಡಿ ಶ್ರೀ ಗುರುದೇವ ಪದವಿ ಕಾಲೇಜಿನ ವಿದ್ಯಾರ್ಥಿ ನಿಸಾರ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Suddi Udaya

” ವಿಂಶತಿ” ಸಂಭ್ರಮದ ಆಚರಣೆ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ರಾಜ್ಯಪಠ್ಯಕ್ರಮ) ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನಗಳು

Suddi Udaya

ಮಿತ್ತಬಾಗಿಲು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!