38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಪಡಂಗಡಿ ಗ್ರಾ.ಪಂ ವ್ಯಾಪ್ತಿಯ ಹಲ್ಲಂದೋಡಿ ಪರಿಸರದಲ್ಲಿ ಸರಕಾರಿ ಭೂಮಿ ಅತಿಕ್ರಮಣ ಆರೋಪ: ನ್ಯಾಯಕ್ಕಾಗಿ ಹಲ್ಲಂದೋಡಿ ಸಂತೋಷ್ ಶೆಟ್ಟಿಯವರಿಂದ ಗ್ರಾಮಕರಣಿಕರ ಕಚೇರಿ ಎದುರು ಧರಣಿ

ಬೆಳ್ತಂಗಡಿ: ಪಡಂಗಡಿ ಗ್ರಾ.ಪಂ ವ್ಯಾಪ್ತಿಯ ಹಲ್ಲಂದೋಡಿ ಪರಿಸರದಲ್ಲಿ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಯೋವ೯ರು ಅತಿಕ್ರಮಣ ಮಾಡಿ, ಕೃಷಿ ಕೆಲಸ ಮಾಡುತ್ತಿದ್ದು ಇದರಿಂದ ರಸ್ತೆಗೆ ಕಲ್ಲು ಮಣ್ಣು ಬಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಹಲ್ಲಂದೋಡಿ ಸಂತೋಷ್ ಶೆಟ್ಟಿ ಪಡಂಗಡಿ ಗ್ರಾಮಕರಣೀಕರ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ.

ಕಳೆದ ಕೆಲ ಸಮಯದಿಂದ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿ ಈ ಭಾಗದಲ್ಲಿ ಹಿಟಾಚಿಯಲ್ಲಿ ಕೆಲಸ ನಡೆಸುತ್ತಿದ್ದಾರೆ. ಇದರಿಂದ ರಸ್ತೆಗೆ ಮಣ್ಣು ಕಲ್ಲುಗಳು ಬಿದ್ದು ಕೆಲವು ಅಪಘಾತಗಳು ಸಂಭವಿಸಿದೆ. ಇದರ ಬಗ್ಗೆ ಕೇಳಿದರೆ ನಮ್ಮ ಮೇಲೆಯೆ ಪ್ರಕರಣ ದಾಖಲಿಸುತ್ತಾರೆ. ನನಗೆ ನ್ಯಾಯ ದೊರೆಯುವವರೆಗೆ ನಾನು ಧರಣಿಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಸಂತೋಷ್ ಶೆಟ್ಟಿ ಹಲ್ಲಂದೋಡಿ ತಿಳಿಸಿದ್ದಾರೆ.

Related posts

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮಾದರಿ ಸ್ಪರ್ಧೆ

Suddi Udaya

ಮೇ 1 : ಧರ್ಮಸ್ಥಳದಲ್ಲಿ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: ಚಲನಚಿತ್ರ ನಟ ದೊಡ್ಡಣ್ಣ ಭಾಗಿ

Suddi Udaya

ಬೆಳ್ತಂಗಡಿ :ಸ್ಕ್ರೀನ್ ಪ್ರಿಂಟ್ ಮಾಲಕ ಬಿ.ಕೆ. ಹರಿಪ್ರಸಾದ್ ಆಚಾರ್ಯ ಹೃದಯಾಘಾತದಿಂದ ನಿಧನ

Suddi Udaya

ಲಾಯಿಲ: ಗುಡ್ಡ ಜರಿದು ರಸ್ತೆ ಸಂಪರ್ಕ ಕಡಿತ

Suddi Udaya

ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ ಪ್ರಾರಂಭೋತ್ಸವ

Suddi Udaya

ಕಳಿಯ ಗ್ರಾಮದ ಕೊಜಪ್ಪಾಡಿ ಮನೆಯ ಯಜ್ಞೇಶ್ ಪೂಜಾರಿಯವರ ಕಾಲಿನ ಶಸ್ತ್ರಚಿಕಿತ್ಸೆಗೆ ನೆರವಾಗಿ

Suddi Udaya
error: Content is protected !!