April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗಮಕ ಸಮ್ಮೇಳನ ಡಾ. ಹೆಗ್ಗಡೆಯವರಿಂದ ಆಮಂತ್ರಣ ಬಿಡುಗಡೆ

ಧರ್ಮಸ್ಥಳ: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಜ.20 ಶನಿವಾರದಂದು, ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಜರಗಲಿರುವ, ತಾಲೂಕು ಗಮಕ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಅನಾವರಣಗೊಳಿಸಿದರು. ಬಳಿಕ ಮಾತನಾಡುತ್ತಾ, ಗಮಕ ಚಟುವಟಿಕೆಗಳು ತಾಲೂಕಿನಲ್ಲಿ ನಿರಂತರವಾಗಿ ನಡೆಯಲಿ ಎಂದು ಆಶಿಸುತ್ತಾ ಸಮ್ಮೇಳನವು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ದ ಕ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯ, ಸಮ್ಮೇಳನದ ಸರ್ವಾಧ್ಯಕ್ಷರಾದ ಜಯರಾಮ ಕುದ್ರೆತ್ತಾಯ, ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ರಾಮಕೃಷ್ಣ ಭಟ್ ಉಜಿರೆ, ಸಮ್ಮೇಳನದ ಸಂಯೋಜಕರಾದ ರಾಮಕೃಷ್ಣ ಭಟ್ ಬೆಳಾಲು, ಬೆಳಾಲು ಪ್ರೌಢಶಾಲೆಯ ಪೋಷಕ ಸಂಘದ ಅಧ್ಯಕ್ಷರಾದ ಶೇಖರ ಗೌಡ ಕೊಲ್ಲಿಮಾರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ ಕನಿಕ್ಕಿಲ ಮತ್ತು ಧನುಷ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ರವರಿಗೆ ಆಮಂತ್ರಣ ನೀಡಿ ಅವರಿಂದ ಸಮ್ಮೇಳನದ ಯಶಸ್ಸಿಗೆ ಮಾರ್ಗದರ್ಶನವನ್ನು ಪಡೆಯಲಾಯಿತು.

Related posts

ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷದ ಉಸ್ತುವಾರಿಯಾಗಿ ರಕ್ಷಿತ್ ಶಿವರಾಂ ನೇಮಕ

Suddi Udaya

ಬೆಳ್ತಂಗಡಿ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಹಾಗೂ ಕ್ರೀಡಾ ಶಿಬಿರ ಉದ್ಘಾಟನೆ

Suddi Udaya

ಅರಸಿನಮಕ್ಕಿ ಧ.ಗ್ರಾ. ಯೋಜನೆಯ ಎ ಮತ್ತು ಬಿ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಬೆನಕ ಆಸ್ಪತ್ರೆಯ ವಿಸ್ತೃತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

Suddi Udaya

ಮಾ.29: ಬೆಳ್ತಂಗಡಿ ಲಯನ್ಸ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ “ಮೆಗಾ ANTI – DRUG ವಾಕಥಾನ್”

Suddi Udaya

ಶಿಬಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ವಿನೂತನ ಯೋಜನೆ: ಕ್ಷೇತ್ರದಿಂದ ಹೊರಗಿದ್ದರೂ ಪ್ರತಿದಿನದ ಪೂಜೆಯನ್ನು ಯೂಟ್ಯೂಬ್ ಮೂಲಕ ನೇರವಾಗಿ ನೋಡುವ ಅವಕಾಶ

Suddi Udaya
error: Content is protected !!