April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜ.13: ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಕಡಿರುದ್ಯಾವರ ಶಾಖೆಯ ನೂತನ ಗೋದಾಮು, ಬ್ಯಾಂಕಿಂಗ್ ಕಛೇರಿ ಹಾಗೂ ಸಭಾಭವನ ಉದ್ಘಾಟನೆ

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಕಡಿರುದ್ಯಾವರ ಶಾಖೆಗೆ ಕೇಂದ್ರ ಸರಕಾರದ PACS AS MSC ಯೋಜನೆಯಡಿ ನಿರ್ಮಾಣವಾದ ನೂತನ ಗೋದಾಮು, ಬ್ಯಾಂಕಿಂಗ್ ಕಛೇರಿ ಹಾಗೂ ಸಭಾಭವನದ ಉದ್ಘಾಟನಾ ಸಮಾರಂಭವು ಜ.13 ರಂದು ಕಡಿರುದ್ಯಾವರ ಶಾಖಾ ವಠಾರದಲ್ಲಿ ಜರಗಲಿರುವುದು.


ನೂತನ ಕಟ್ಟಡದ ಉದ್ಘಾಟನೆಯನ್ನು ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ನೆರವೇರಿಸಲಿದ್ದಾರೆ. ಸಭಾ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್, ವಿಧಾನ ಪರಿಷತ್ ಶಾಸಕರುಗಳಾದ ಹರೀಶ್ ಕುಮಾರ್, ಪ್ರತಾಪ್‌ಸಿಂಹ ನಾಯಕ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರುಗಳಾದ ಬಿ. ನಿರಂಜನ್ ಬಾವಂತಬೆಟ್ಟು, ಶಶಿಕುಮಾರ್ ರೈ. ಬಿ., ಬೆಂಗಳೂರು ನಬಾರ್ಡ್ ಸಹಾಯಕ ಮಹಾಪ್ರಬಂಧಕಿ ಸಂಗೀತಾ ಕರ್ತಾ, ಮಂಗಳೂರು ಸಹಕಾರ ಸಂಘಗಳ ಉಪನಿಂಬಧಕ ರಮೇಶ್ ಹೆಚ್.ಎನ್., ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್, ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್, ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಬಿ.ವಿ. ಪ್ರತಿಮಾ, ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ ಗೌಡ, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ಅಧ್ಯಕ್ಷ ವಿನಯಚಂದ್ರ ಗೌಡ ವಿ., ಕಡಿರುದ್ಯಾವರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರವೀಣ ಗೌಡ, ಕಡಿರುದ್ಯಾವರ ಉದ್ದಾರ (ಕಟ್ಟಡ ನಿರ್ಮಿಸಲು ನಿವೇಶನ ನೀಡಿದವರು) ನಿವೃತ್ತ ಶಿಕ್ಷಕ ಜನಾರ್ದನ ಗೌಡ, ಕಡಿರುದ್ಯಾವರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಭಾಗವಹಿಸಲಿದ್ದಾರೆ.

Related posts

ಕೇಳ್ತಾಜೆ ಉಮರುಲ್ ಫಾರೂಕ್ ಜುಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಮದರಸದಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಬಂಗಾಡಿ ಫ್ರೆಂಡ್ಸ್ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಲಯ ಮಟ್ಟದ ಪುರುಷರ ಹಗ್ಗ ಜಗ್ಗಾಟ:

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya

ಪಡ್ಯಾರಬೆಟ್ಟು ಕ್ಷೇತ್ರಕ್ಕೆ ಬೇಟಿ ನೀಡಿದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ

Suddi Udaya

ಮಂಗಳೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ: ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಜಿಲ್ಲಾ ಪಂಚಾಯತ್ ,ಮತ್ತು ತಾಲೂಕು ಪಂಚಾಯತ್ ಉಸ್ತುವಾರಿಗಳ ನೇಮಕ

Suddi Udaya

ಬೆಳ್ತಂಗಡಿ ನೂತನ ನಿರೀಕ್ಷಣಾ ಮಂದಿರ ಲೋಕಾರ್ಪಣೆ

Suddi Udaya
error: Content is protected !!