ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ಪ್ರತಿಭಾ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ

Suddi Udaya

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳ ದಲ್ಲಿ ಖಾವಂದರ ಅಧ್ಯಕ್ಷತೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ ವಿಜೃಂಭಣೆ ಯಿಂದ ಜರಗಿತು.


ನಿವೃತ್ತ ಶಿಕ್ಷಕರು ಹಾಗೂ ನಿಡ್ಲೆ ಸಂಪನ್ಮೂಲ ಅಧಿಕಾರಿಗಳ ಸಮ್ಮುಖದಲ್ಲಿ ಶಾಲಾ ಸಂಚಾಲಕರಾದ ಅನಂತಪದ್ಮನಾಭ ಭಟ್ ರವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು, ಪದ್ಮವಿಭೂಷಣ, ರಾಜರ್ಷಿ ಪುರಸ್ಕೃತ ರಾಜ್ಯಸಭಾ ಸದಸ್ಯರು ಪರಮಪೂಜ್ಯ ಖಾವಂದರು ನಿವೃತ್ತಿ ಹೊಂದಲಿರುವ ಮುಖ್ಯ ಶಿಕ್ಷಕರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಆಶೀರ್ವಚನ ನೀಡಿದರು.


ಶಾಲೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಶಿಕ್ಷೆ ಕೊಡದೆ ಮಕ್ಕಳನ್ನು ತಿದ್ದಿ, ತೀಡುವುದು ಬಹಳ ಕಷ್ಟದ ಕೆಲಸ, ಶಿಕ್ಷೆ ಕೊಡದೆ ಶಿಕ್ಷಣ ನೀಡಬೇಕು. ಮಕ್ಕಳ ಬಗ್ಗೆ ಪೋಷಕರು ಹೆಚ್ಚು ನಿಗಾ ವಹಿಸಬೇಕು ಶಿಕ್ಷಣದ ಬಗ್ಗೆ ಗೌರವ ಮೂಡಿಸುವ ಕೆಲಸ ಶಿಕ್ಷಕರಿಂದ ಆಗಬೇಕಾಗಿದೆ. ಆ ಕೆಲಸವನ್ನು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಚೆನ್ನಾಗಿ ನಿರ್ವಹಿಸಿದ್ದಾರೆ. ಈ ಸಂಸ್ಥೆಯು ಜಿಲ್ಲೆಯಲ್ಲಿ ಉತ್ತಮ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದೆ. ವಿಶೇಷವಾಗಿ ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕೆಂನ್ನುವುದು ನಮ್ಮ ಹಂಬಲದಂತೆ ಈ ಶಾಲೆಗೆ ವಿಶೇಷ ಗೌರವ ಕೊಡುತ್ತೇವೆ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕೆಲಸವೇ ಈ ಪ್ರತಿಭಾ ದಿನಾಚರಣೆ ಎಂದರು. ಇದೇ ಸಂದರ್ಭದಲ್ಲಿ ಮಕ್ಕಳಿಂದಲೇ ತಯಾರಿಸಲಾದ ವಾರ್ಷಿಕ ಸಂಚಿಕೆ ಭಾರತಿ ಹಸ್ತಾಪತ್ರಿಕೆಯನ್ನು ಅನಾವರಣ ಗೊಳಿಸಿದರು.

ವಾರ್ಷಿಕ ಪ್ರತಿಭಾ ದಿನಾಚರಣೆಯ ಪ್ರಯುಕ್ತ ಪೂರ್ವಹ್ನ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾರಕೇಸರಿ ಹಾಗೂ ಶ್ರೀ ಕ್ಷೇತ್ರ ಗ್ರಾಮಭಿವೃದ್ಧಿ ಬಿ. ಸಿ ಟ್ರಸ್ಟ್ ನ ಯೋಜನಾಧಿಕಾರಿ ವಸಂತ ರವರು ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.


ಸನ್ಮಾನಿತರ ಪರಿಚಯವನ್ನು ಶಿಕ್ಷಕಿ ಉಷಾ ಕುಮಾರಿ ವಾಚಿಸಿದರು.
ಸನ್ಮಾನ ಸ್ವೀಕರಿಸಿದ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ರಾವ್ ಪಡುವೆಟ್ನಾಯರು ತನ್ನ ವೃತ್ತಿ ಜೀವನದ ಅನುಭವ ಹಂಚಿಕೊಂಡರು. ಅಧ್ಯಾಪನಾ ಸೇವೆಯಿಂದ ತಾನು ಪಡೆದ ಸಂತೃಪ್ತಿ, ಮಕ್ಕಳ ಒಡನಾಟ ಪ್ರತಿಭಾ ಕೌಶಲ್ಯಗಳು ಸೇರಿದಂತೆ ತಾನು ಅನುಭವಿಸಿದ, ಪಡೆದ ಅನುಭವಗಳನ್ನು ಹಂಚಿಕೊಂಡರು. ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್, ಕ್ಷೇಮಪಾಲನ ಅಧಿಕಾರಿ ಬಿ ಸೋಮಶೇಖರ ಶೆಟ್ಟಿ. ಶಾಲೆಯ ಎಲ್ಲಾ ಶಿಕ್ಷಕರು ಈ ಸಂದರ್ಭ ಉಪಸ್ಥಿತರಿದ್ದರು.


ಶಾಲಾ ಸಂಚಾಲಕರಾದ ಅನಂತ ಪದ್ಮನಾಭ ಭಟ್ ಸ್ವಾಗತಿಸಿ, ಕಮಲತೇಜು ರಜಪೂತ ಧನ್ಯವಾದವಿತ್ತ ಈ ಕಾರ್ಯಕ್ರಮವನ್ನು ಶ್ರೀಜಾ ಎ ಹಾಗೂ ಪೂರ್ಣಿಮಾ ಜೋಷಿ ಯವರು ನಿರೂಪಿಸಿದರು.

Leave a Comment

error: Content is protected !!