ಬೆಳ್ತಂಗಡಿ: 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಹಾಜಿ ಹಸನಬ್ಬ ಚಾರ್ಮಾಡಿಯವರ ಕುಟುಂಬದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಂಬುಲೆನ್ಸ್ ಸೇವೆಯನ್ನು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರು ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿದರು.
ಹಸನಬ್ಬ ರವರಿಗೆ ಪ್ರಶಸ್ತಿ ಜೊತೆಗೆ ಸರಕಾರದಿಂದ ಸಿಕ್ಕಿದ ಗೌರವ ಧನ 5 ಲಕ್ಷಕ್ಕೆ 3 ಲಕ್ಷ ರೂಪಾಯಿ ಟ್ರಸ್ಟ್ ನಿಂದ ಸೇರಿಸಿ ಸಾರ್ವಜನಿಕರ ತುರ್ತು ಉಚಿತ ಸೇವೆಗೆ ಈ ಅಂಬುಲೆನ್ಸ್ ನ್ನು ಒದಗಿಸಿದರು. ಈ ಸೇವೆಯನ್ನು ಗುರುತಿಸಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ತಮ್ಮ ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ಟ್ರಸ್ಟ್ ಗೆ ನೀಡಿದರು.
ಕಾರ್ಯಕ್ರಮದಲ್ಲಿ ಎಲ್.ಎಲ್. ಸಿ ಗಳಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು, ಜಿ .ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು , ಶಿವಪ್ರಸಾದ್ ಅಜಿಲ, ಯು.ಕೆ. ಮೋನು ಹಾಜಿ ಕಣಚೂರು, ರಕ್ಷಿತ್ ಶಿವರಾಮ್ ಬೆಳ್ತಂಗಡಿ, ಶಾಹುಲ್ ಹಮೀದ್ ಕೆ.ಕೆ, ಮಹಮ್ಮದ್ ಬಪ್ಪಳಿಗೆ, ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.