ಬೆಳ್ತಂಗಡಿ: ಏಳು ಶಾಖೆಗಳನ್ನು ಒಳಗೊಂಡ ಎಸ್‌ಕೆಎಸ್‌ಎಸ್‌ಎಫ್ ಕಕ್ಕಿಂಜೆ ಕ್ಲಸ್ಟರ್ ಇದರ ದ್ವೈವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನಾ ಕಾರ್ಯಕ್ರಮ ಜ.9 ರಂದು ಚಾರ್ಮಾಡಿ ಜಲಾಲಿಯಾ ನಗರ ಮದ್ರಸದಲ್ಲಿ ನಡೆಯಿತು.
ಶಂಸುದ್ದೀನ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಹಫೀಝ್ ಚಿಬಿದ್ರೆ, ಪ್ರಧಾನ ಕಾರ್ಯದರ್ಶಿಯಾಗಿ ಸದಖತುಲ್ಲಾ ದಾರಿಮಿ ಕಕ್ಕಿಂಜೆ , ಕೋಶಾಧಿಕಾರಿಯಾಗಿ ರಫೀಕ್ ಹಾಜಿ ಅರೆಕ್ಕಲ್ ಸೋಮಂತಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ಬಾಸ್ ಇಸ್ಲಾಂಬಾದ್, ಉಪಾಧ್ಯಕ್ಷರಾಗಿ ಅಬ್ಬಾಸ್ ಜಲಾಲಿಯಾ ನಗರ, ರಶೀದ್ ಗಾಂಧಿ ನಗರ ಮತ್ತು ಝುಬೈರ್ ಫೈಝಿ ಕಕ್ಕಿಂಜೆ, ಜತೆ ಕಾರ್ಯದರ್ಶಿಗಳಾಗಿ ಸಿದ್ದೀಕ್ ಬೊಳ್ಮಿನಾರ್, ಶಂಸುದ್ದೀನ್ ಇಸ್ಲಾಂಬಾದ್ ಮತ್ತು ಆಸೀಫ್ ಸೋಮಂತಡ್ಕ ಇವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಯಾಸಿರ್ ಚಿಬಿದ್ರೆ, ನಝೀರ್ ಅಝ್ಹರಿ ಗಾಂಧಿನಗರ, ಶಕೀಲ್ ಅರೆಕ್ಕಲ್, ರಿಯಾಝ್ ಫೈಝಿ ಕಕ್ಕಿಂಜೆ, ಶಂಶುದ್ದೀನ್ ದಾರಿಮಿ ಸೋಮಂತಡ್ಕ, ರಹೀಂ ಮಖ್ದೂಮಿ ಬೊಳ್ಮಿನಾರ್, ಹಾರಿಸ್ ಗಾಂಧಿನಗರ, ರಫೀಕ್ ಜಲಾಲಿಯಾ ನಗರ ಮತ್ತು ಅಶ್ರಫ್ ಇಸ್ಲಾಂಬಾದ್ ಆಯ್ಕೆಯಾದರು.
ಎಸ್‌ಕೆಎಸ್‌ಎಸ್‌ಎಫ್ ಅಂಗ ಸಂಸ್ಥೆಯಾದ ಇಬಾದ್, ವಿಖಾಯ, ಸಹಚಾರಿ, ಟ್ರೆಂಡ್, ಸರ್ಗಾಲಯ, ಕ್ಯಾಂಪಸ್ ವಿಂಗ್ ಇದರ ಚೇರ್ಮನ್ ಮತ್ತು ಕನ್ವೀನರ್ ಗಳನ್ನು ಹಾಗೂ ವಲಯ ಕೌಸಿಲರ್ ಗಳನ್ನು ಆಯ್ಕೆ ಮಾಡಲಾಯಿತು.
ಸದಖತುಲ್ಲಾ ದಾರಿಮಿ ಕಕ್ಕಿಂಜೆ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ನಝೀರ್ ಅಝ್ಹರಿ ಬೊಳ್ಮಿನಾರ್ ದುವಾ ನೆರವೇರಿಸಿದರು.