ಬೆಳ್ತಂಗಡಿ : ಜ 14ರಂದು ಶುಕ್ರವಾರ ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವ ಸಿದ್ಧತಾ ದೃಷ್ಟಿಯಿಂದ ಪೋಷಕರ ಸಭೆಯನ್ನು ಆಯೋಜಿಸಲಾಯಿತು. ಸಭೆಯಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಮೋಹನ ಬಾಬು ಡಿ. ಇವರು ಶಾಲಾ ವ್ಯವಸ್ಥೆಗಳು, ಶೈಕ್ಷಣಿಕ ಯೋಜನೆಗಳು, ಪರೀಕ್ಷಾ ಫಲಿತಾಂಶ ಸುಧಾರಣೆಗೆ ಹಮ್ಮಿಕೊಂಡಿರುವ ವಿಶೇಷ ತರಗತಿಗಳು, ಮತ್ತು ಪೋಷಕರ ಜವಾಬ್ದಾರಿಯ ಬಗ್ಗೆ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪೋಷಕರನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿ ಮುಂಬರುವ ವಾರ್ಷಿಕ ಪರೀಕ್ಷೆಗೆ ತಮ್ಮ ಮಕ್ಕಳಿಗೆ ತಾವೇ ಗುಂಪಿನಲ್ಲಿ ಚರ್ಚಿಸಿ ನಿರ್ಣಯಿಸಿದಂತೆ, ದೈನಂದಿನ ಓದು, ಸಮಯ ಪಾಲನೆ, ಶಿಕ್ಷಕರು ನೀಡಿದ ಮನೆಗೆಲಸ ಪೂರ್ಣಗೊಳಿಸಿದ ಬಗ್ಗೆ, ವಿಚಾರಣೆ, ಟಿ.ವಿ. ಮೊಬೈಲ್ ಬಳಸದಿರುವ ಬಗ್ಗೆ ಅರಿವು ಮೂಡಿಸಲಾಯಿತು.
ಪೋಷಕರು ತಮ್ಮ ಮಕ್ಕಳೊಂದಿಗೆ ಪ್ರತಿದಿನ ಕಲಿಕೆಗೆ ಸಂಬಂಧಿಸಿದ ಕನಿಷ್ಟ ಒಂದು ಗಂಟೆ ಜೊತೆಗಿದ್ದು ಸೂಕ್ತ ಸಲಹೆ ಸೂಚನೆ ನೀಡುವುದು, ಮಕ್ಕಳು ವಿಷಯ ಶಿಕ್ಷಕರ ಭೇಟಿಯ ಮೂಲಕ ಸೂಕ್ತ ಮಾರ್ಗದರ್ಶನ ಪಡೆಯುವ ಬಗ್ಗೆ ಪೋಷಕರೇ ತಮ್ಮ ಮಕ್ಕಳಿಗೆ, ಶಿಕ್ಷಕರಾಗಿ ಬೋಧನೆ
ಮಾಡಿದ್ದು ವಿಶೇಷವಾಗಿತ್ತು. ಶಾಲಾ ಶಿಕ್ಷಕ ವೃಂದ ಪ್ರತಿ ತಂಡದೊಂದಿಗಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು.
ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಸುಧಾಕರ್, ಸಮಿತಿಯ ಸದಸ್ಯರಾದ ಧರಣೇಂದ್ರ ಜೈನ್, ಆನಂದ ಶೆಟ್ಟಿ, ಶ್ರೀಮತಿ ಪ್ರೇಮ, ಲಕ್ಷ್ಮಣ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕ ಶಿವಪುತ್ರ ಸುಣಗಾರ ಸ್ವಾಗತಿಸಿದರು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಹಾಗೂ ಶಾಲಾ ದೈಹಿಕ ಶಿಕ್ಷಕಿ ಶ್ರೀಮತಿ ಸುಜಯ್ ಬಿ. ವಂದಿಸಿದರು.