September 6, 2026
ಗ್ರಾಮಾಂತರ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕಲ್ಮಂಜ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಗುರುನಮನ ಕಾರ್ಯಕ್ರಮ

ಕಲ್ಮಂಜ: ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮದ ಗುರುನಮನ ಕಾರ್ಯಕ್ರಮವು ಜ.4ರಂದು ಜ್ಞಾನದೀಪ ಸಭಾಂಗಣದಲ್ಲಿ ಜರುಗಿತು.ಸಭಾಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಮಂಜುನಾಥ ಶೆಟ್ಟಿ ವಹಿಸಿದ್ದರು. ನಾವೂರ ಆರೋಗ್ಯ ಕ್ಲಿನಿಕ್ ನ ವೈದ್ಯಾಧಿಕಾರಿ ಡಾ. ಪ್ರದೀಪ್ ನಾವೂರ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಿದರು.

ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ಎಸ್.ಕೆ.ಡಿ.ಆರ್.ಡಿ.ಪಿ. ತಾಲೂಕು ಯೋಜನಾಧಿಕಾರಿ ಯಶೋಧರ, ಶತ ಮಾನೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಫೆರ್ನಾಂಡಿಸ್, ಹಿರಿಯ ವಿದ್ಯಾರ್ಥಿಗಳಾದ ಕೆಂಪಯ್ಯ ಮಡಿವಾಳ, ಕೊರಗಪ್ಪ ಗೌಡ, ವಿಜೆ ಪೌಲೋಸ್, ಶಾರದಾ ಭಂಡಾರ್ಕರ್, ಡೊಂಬಯ್ಯ ಟಿ., ಅಬ್ದುಲ್ ಅಜೀದ್, ಉಜಿರೆ ಮಂಜುಶ್ರೀ ಪ್ರಿಂಟರ್ಸ್ ಮ್ಯಾನೇಜರ್ ಶೇಖರ್ ಟಿ.ನಿಡಿಗಲ್ ಶ್ರೀ ಮಹಾ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗೇಶ್ ಪ್ರಭು, ಕಲ್ಲಾಡಿ ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ವಿ.ಜೆ ರೋಸ, ದೈಹಿಕ ಶಿಕ್ಷಣ ಶಿಕ್ಷಕ ಶೀನ ಅಕ್ಷಯನಗರ, ಉಜಿರೆ ಸಂತ ಅಂಥೋನಿ ಚರ್ಚ್ ಮಾಜಿ ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿಸ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಚಿದಾನಂದ ಮಂಟಮೆ ಉಪಸ್ಥಿತರಿದ್ದರು.

ಕಳೆದ ನೂರು ವರ್ಷಗಳ ಅವಧಿಯಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಗುರುವರೇಣ್ಯರುಗಳಾದ ಬಿ. ಬಾಬು ಗೌಡ ಬಾಜಿಮಾರ್‌, ರಘುಪತಿ ಭಟ್, ಗಿರೀಶ್ ಪ್ರಭು, ಯಶೋಧ, ಜಯ, ಶಾಂತಾ, ದಮಯಂತಿ, ಸೀತಾ ಆರ್ ಸೇಠ್ , ಇಶಾಕ್ ಸಾಹೇಬ್ ಸಿ, ಚಂಪಾವತಿ, ಶೀಲಾವತಿ ಕೆ., ಸುರೇಖಾ, ಮಂಜುಳಾ, ಶಿಲ್ಪಾ ಡಿ, ಐಶ್ವರ್ಯ, ನಮಿತಾ, ಜ್ಯೋತಿ ರವರುಗಳಿಗೆ ಗುರುನಮನ ಸಲ್ಲಿಸಲಾಯಿತು. ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಾಯ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಮೀದ್ ಬಿಎನ್ ಸ್ವಾಗತಿಸಿದರು.

Related posts

ಅರಸಿನಮಕ್ಕಿ ಗ್ರಾ.ಪಂ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪ.ಪಂಗಡಕ್ಕೆ ನೀರಿನ ಟ್ಯಾಂಕ್ ಮತ್ತು ವಿಶೇಷಚೇತನರಿಗೆ ವೀಲ್ ಚೇರ್ ವಿತರಣೆ

Suddi Udaya

ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿಯಲ್ಲಿ “ಧರ್ಮ ವಿಜಯ ಸಮಾವೇಶ”ದ ಸಿದ್ಧತೆ ಬಗ್ಗೆ ಗಣ್ಯರ ಸಮಾಲೋಚನಾ ಸಭೆ: ಸೆ.5 ಕ್ಕೆ ಧರ್ಮಸ್ಥಳದಲ್ಲಿ ಉಭಯ ಜಿಲ್ಲಾ ಧರ್ಮಕ್ಷೇತ್ರಗಳ ಮುಖ್ಯಸ್ಥರ ಸಮಾವೇಶ

Suddi Udaya

ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ 3 (2) ಅಡಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಶಾಸಕ ಹರೀಶ್ ಪೂಂಜರಿಂದ ಪ.ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕನಗವಲ್ಲಿ ರವರಿಗೆ ಮನವಿ

Suddi Udaya

ಸುಲ್ಕೇರಿ ಅಂಗನವಾಡಿ ಕೇಂದ್ರದಲ್ಲಿ ಪೋಷನ್ ಮಾಸಾಚರಣೆ ಕಾರ್ಯಕ್ರಮ

Suddi Udaya

ಕೊಕ್ಕಡ: ತಲೆಗೆ ಮರಬಿದ್ದು ಮಹಿಳೆಯ ಧಾರುಣ ಸಾವು:

Suddi Udaya
error: Content is protected !!