September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುತ್ರೊಟ್ಟು ಬಳಿ ಮಗುವಿಗೆ ದ್ವಿಚಕ್ರ ವಾಹನ ಢಿಕ್ಕಿ

ಬೆಳ್ತಂಗಡಿ: ನಡ ಗ್ರಾಮದ ಕುತ್ರೊಟ್ಟು ಎಂಬಲ್ಲಿ ದ್ವಿಚಕ್ರ ವಾಹನ ಮಗುವಿಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ಜ.14 ರಂದು ನಡೆದಿದೆ.

ನಡ ಗ್ರಾಮದ ಹೊಕ್ಕಿಲ ನಿವಾಸಿ ನಿರೀಕ್ಷಾ (8) ಗಾಯಗೊಂಡ ಬಾಲಕಿ.

ನಡ ಗ್ರಾಮದ ಹೊಕ್ಕಿಲ ನಿವಾಸಿ ವೇದಾವತಿ ಅವರು ನೀಡಿದ ದೂರಿನಂತೆ, ಅವರ ಅತ್ತಿಗೆ ನೀಲಾ ಹಾಗೂ ಪತಿಯ ಅಣ್ಣನ ಮಗು ನಿರೀಕ್ಷಾ (8) ಜತೆ ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಿಂದ ಅವರ ಮನೆ ಹೊಕ್ಕಿಲ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಕುತ್ರೊಟ್ಟು ಬಳಿ ದ್ವಿ ಚಕ್ರ ವಾಹನದ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಿರೀಕ್ಷಾಳಿಗೆ ಢಿಕ್ಕಿ ಹೊಡೆದಿದ್ದಾನೆ.

ಪರಿಣಾಮ ಅವಳು ಅಲ್ಲಿಯೇ ರಸ್ತೆಗೆ ಬಿದ್ದು ಬಲಬದಿಯ ಹಣೆಗೆ ಗುದ್ದಿದ ರಕ್ತಗಾಯ, ಬಲ ಕಾಲಿನ ಮೊಣಗಂಟಿಗೆ ತರಚಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಜ್ಯೋತಿ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Related posts

ವಾಲಿಬಾಲ್ ಪಂದ್ಯಾಟ: ಬಂದಾರು ಸ.ಉ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಪೆರಿಂಜೆ: ಗೀತಾ ನಿಧನ

Suddi Udaya

ಮಚ್ಚಿನ ಸಿ.ಎ. ಬ್ಯಾಂಕ್ ಚುನಾವಣೆ: ಸತತ ನಾಲ್ಕನೇ ಬಾರಿ ಅಧಿಕಾರ ಹಿಡಿದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು

Suddi Udaya

ದೇಗುಲದ ಪರಿಸರದಲ್ಲಿ ತಿರುಗಾಡುತ್ತಿದ್ದ ಒಂಟಿ ಮಹಿಳೆಯನ್ನು ಅವರ ಊರಿಗೆ ಕಳುಹಿಸಿ ಮಾನವೀಯತೆ ಮೆರೆದ ಪೋಲೀಸ್ ಇಲಾಖೆ ಹಾಗೂ ಸಮಾಜ ಸೇವಕ ರವಿ ಕಕ್ಕೆಪದವು

Suddi Udaya

ದ.ಕ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣಗೊಳಿಸಲು ಸದನದಲ್ಲಿ ಶಾಸಕ ಹರೀಶ್ ಪೂಂಜ ಒತ್ತಾಯ

Suddi Udaya

ದೆಹಲಿಯ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಸದಸ್ಯ ಧನ್ಯ ಕುಮಾರ್ ಜಿನ್ನಪ್ಪ ಗುಂಡೆ ಭೇಟಿ: ಅಲ್ಪಸಂಖ್ಯಾತ ಜೈನ ಧರ್ಮಿಯರ ಅಭಿವೃದ್ಧಿಯ ಬಗ್ಗೆ ಹಾಗೂ ಜೈನ ಅಭಿವೃದ್ಧಿ ನಿಗಮ ರಚಿಸುವ ಬಗ್ಗೆ ಚರ್ಚೆ

Suddi Udaya
error: Content is protected !!