ಬೆಳ್ತಂಗಡಿ:ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನ.21 ಶನಿವಾರ ಪೂರ್ವಾಹ್ನ 6.45ರಿಂದ ನ.22 ಆದಿತ್ಯವಾರ ಪೂರ್ವಾಹ್ನ 7.30ರ ತನಕ ಕಾರ್ತಿಕ ಏಕಾಹ ಭಜನೆ ನಡೆಯಲಿದ್ದು, ನ.22 ಆದಿತ್ಯವಾರ ಪ್ರಾತಃಕಾಲ 4.30ರಿಂದ 6 ಗಂಟೆ ತನಕ ಸಹಸ್ರಾರು ಹಣತೆಗೆಗಳ ಪ್ರಜ್ವಲನೆಯೊಂದಿಗೆ ಶ್ರೀ ದೇವರ ವಿಶ್ವರೂಪ (ಸಹಸ್ರದೀಪ) ದರ್ಶನ ವಿಶೇಷ ಕಾರ್ಯಕ್ರಮವೂ ಜರುಗಲಿದೆ.
ಸಮಸ್ತ ಹಿಂದೂ ಬಾಂಧವರು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿ ಸ್ವತಃ ಹಣತೆಗಳಿಂದ ದೀಪ ಬೆಳಗಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಳದ ಆಡಳಿತ ಮೊಕ್ತೇಸರ ಶ್ರೀ ಮೂರ್ಜೆ ವಿವೇಕಾನಂದ ಪ್ರಭು ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.














