29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ನಂದಿನಿ ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಂಡಾಜೆ ಕಾರ್ಯಕ್ಷೇತ್ರದ ನಂದಿನಿ ಜ್ಞಾನವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ಮುಂಡಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಜನಜಾಗೃತಿ ವೇದಿಕೆಯ ಸದಸ್ಯರಾದ ನಾಮದೇವ್ ರವರು ಮಹಿಳೆ ಕುಟುಂಬದ ಶಕ್ತಿ ಎಲ್ಲರ ಬದುಕಿನಲ್ಲಿ ಮಹಿಳೆ ಪ್ರಮುಖ ಸ್ಥಾನ ಪಡೆದಿದ್ದು ಜ್ಞಾನ ವಿಕಾಸ ಕೇಂದ್ರದ ಮೂಲಕ ಬಹಳಷ್ಟು ಮಾಹಿತಿಯನ್ನು ಪಡೆದುಕೊಂಡು ಪ್ರಬುದ್ಧರಾಗಲು ಮಾತೃಶ್ರೀ ಹೇಮಾವತಿ ಅಮ್ಮನವರು ಹಮ್ಮಿಕೊಂಡ ಈ ಕಾರ್ಯಕ್ರಮದಿಂದ ಸಾಧ್ಯವಾಗಿದೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರಂಜಿನಿ ಮಾತನಾಡುತ್ತಾ ಯಾವುದೇ ಒಂದು ವೇದಿಕೆಯು ಸಿಕ್ಕಾಗ ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಜ್ಞಾನವಿಕಾಸ ಕೇಂದ್ರವು ಪ್ರತಿಭೆಗಳನ್ನು ಹೊರ ಹಾಕಲು ಮಹಿಳೆಯರಿಗೆ ಒಂದು ಉತ್ತಮ ವೇದಿಕೆಯಾಗಿದೆ. ಮಾತೃಶ್ರೀ ಹೇಮಾವತಿ ಅಮ್ಮನವರು ಹಮ್ಮಿಕೊಂಡ ಈ ಜ್ಞಾನ ವಿಕಾಸ ಕಾರ್ಯಕ್ರಮದಿಂದ ಅದೆಷ್ಟು ಮಹಿಳೆಯರಿಗೆ ವಿವಿಧ ಮಾಹಿತಿಗಳನ್ನು ಪಡೆಯಲು ಅವಕಾಶ ಸಿಕ್ಕಿದೆ ಎಂದರು.

ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿಯವರಾದ ಮಧುರಾರವರು ಜ್ಞಾನವಿಕಾಸ ಕಾರ್ಯಕ್ರಮದ ದ್ಯೇಯೋದ್ದೇಶಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಶ್ರೀಮತಿ ಲೀಲಾವತಿ ವಹಿಸಿದ್ದರು. ಸೇವಾಪ್ರತಿನಿಧಿ ಸರಿತಾ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಗುಲಾಬಿಯವರು ಸ್ವಾಗತಿಸಿ, ಲೀಲಾವತಿ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

Related posts

ಉಜಿರೆ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಯುಗಾದಿ ಹಾಗೂ ರಂಝಾನ್ ಹಬ್ಬದ ಪ್ರಯುಕ್ತ ವಿಶೇಷ ಆಫರ್: ಪ್ರತಿ ಖರೀದಿ ಮೇಲೆ ಶಾಪಿಂಗ್ ವೊಚರ್

Suddi Udaya

ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರದ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಬೆಳ್ತಂಗಡಿಯ ರಾಮ ಕ್ಷತ್ರಿಯ ಸಂಘದಿಂದ ರಾಮೋತ್ಸವ

Suddi Udaya

ಬೆಳ್ತಂಗಡಿಯಲ್ಲಿ ಅಗ್ನಿ ಅನಾಹುತಗಳ ತಡೆಗಟ್ಟುವ ಕುರಿತು ಅಗ್ನಿಶಾಮಕ ದಳದಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya

ಹೇರಾಜೆ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ವಾರ್ಷಿಕೋತ್ಸವದಲ್ಲಿ ಪದ್ಮರಾಜ್ ಆರ್. ಪೂಜಾರಿ ಭಾಗಿ

Suddi Udaya

ಬೆಳ್ತಂಗಡಿ ಬಂಟರ ಸಂಘದ ಮಡಂತ್ಯಾರು ವಲಯದ ಸಭೆ :ಗ್ರಾಮ ಸಮಿತಿ ರಚನೆ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮ

Suddi Udaya
error: Content is protected !!