April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಜ.24: ನಾಲ್ಕೂರುನಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಸೇವಾ ಬಯಲಾಟ

ಬಳಂಜ: ಇಲ್ಲಿಯ ನಾಲ್ಕೂರು ಬಾಕಿಮಾರು ಗದ್ದೆ ಕುರೆಲ್ಯ ಗುತ್ತುವಿನಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಸೇವಾ ಬಯಲಾಟ ಜ.24 ರಂದು ನಡೆಯಲಿದೆ.

ಬರೆಮೇಲು ಜಯಂತ ಭಟ್ ಇವರ ಮನೆಯಿಂದ ಶ್ರೀದೇವರ ವೈಭವೋಪೇತ ಮೆರವಣಿಗೆ ಹೊರಟು, ಕುರೆಲ್ಯ ಗುತ್ತು ಬಾಕಿಮಾರು ಗದ್ದೆಯಲ್ಲಿ ಚೌಕಿ ಪೂಜೆ ಸಂಜೆ 5.30 ರಿಂದ ಶ್ರೀ ಕಟೀಲು ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಸೇವಾ ಬಯಲಾಟ ನಡೆಯಲಿದೆ.

ನಂತರ ರಾತ್ರಿ 8.30 ಕ್ಕೆ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಯಕ್ಷಗಾನ ಕಲಾವಿದ ರಾಜ್ಯ ಪ್ರಶಸ್ತಿ ವಿಜೇತ ಕೊರಗಪ್ಪ ಶೆಟ್ಟಿ ಅರ್ವ, ಯಕ್ಷಗಾನ ಕಲಾವಿದ ಶ್ರೀಧರ ಭಟ್ ನಾಲ್ಕೂರು ಇವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ನೋಣಯ್ಯ ಶೆಟ್ಟಿ,ರವೀಂದ್ರ ಶೆಟ್ಟಿ ಬಳಂಜ ತಿಳಿಸಿದ್ದಾರೆ.

Related posts

ಮೂರನೆ ಭಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕಾರ: ಕುವೆಟ್ಟು ಬಿಜೆಪಿ ಕಾರ್ಯಕರ್ತರಿಂದ ಚಾ-ತಿಂಡಿ, ಸ್ವೀಟ್ ಹಂಚಿ, ಸುಡುಮದ್ದು ಪ್ರದರ್ಶನ ಮೂಲಕ ಸಂಭ್ರಮ

Suddi Udaya

ಕನಾ೯ಟಕ ಯಕ್ಷಗಾನ ಅಕಾಡೆಮಿ ನೂತನ ಸದಸ್ಯರ ನೇಮಕ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಸನ್: ಅತ್ಯುತ್ತಮ ವಲಯ ಪ್ರಶಸ್ತಿಯಲ್ಲಿ ಬೆಳ್ತಂಗಡಿ ವಲಯ ತೃತೀಯ ಸ್ಥಾನ

Suddi Udaya

ಸುಲ್ಕೇರಿ ಭಗವಾನ್ ಶ್ರೀ ನೇಮಿನಾಥ ಸ್ವಾಮೀ ಬಸದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ಮಡಂತ್ಯಾರು: ಎಲೆಕ್ಟ್ರಿಕಲ್ ಉದಯ ಹೃದಯಾಘಾತದಿಂದ ನಿಧನ

Suddi Udaya

ಲಾಯಿಲ: ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶ

Suddi Udaya
error: Content is protected !!