April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇವರ ವತಿಯಿಂದ ಬಟ್ಟೆಯ ಕಸೂತಿ ತಯಾರಿಕೆ ಸ್ವ ಉದ್ಯೋಗ ತರಬೇತಿ ಉದ್ಘಾಟನೆ

ಉಜಿರೆ : ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ನೇತೃತ್ವದಲ್ಲಿ, ಬ್ಯಾಂಕ್ ಆಫ್ ಬರೋಡ ಉಜಿರೆ ಶಾಖೆ ಹಾಗೂ ಕರ್ನಾಟಕ ರಾಜ್ಯ ಟೈಲರ್ ಒಕ್ಕೂಟ ಉಜಿರೆ ವಲಯ ಇವರ ಸಹಕಾರದಲ್ಲಿ10 ದಿನಗಳ ಬಟ್ಟೆ ಕಸೂತಿ ತಯಾರಿಕೆಯ (ಆರಿ ವರ್ಕ್ )ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಉಜಿರೆ ಯ ಚಿತ್ತಾರ ಟೈಲರಿಂಗ್ ಸಭಾಂಗಣದಲ್ಲಿ ನಡೆಯಿತು.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇಲ್ಲಿಯ ಮುಖ್ಯ ಕಾರ್ಯನಿರ್ವಹನಾಧಿಕಾರಿ ಸಚಿನ್ ಹೆಗ್ಡೆ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. “ಗ್ರಾಮೀಣ ಪ್ರದೇಶದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಕಾರ್ಯಕ್ರಮ ಆಯೋಜಿಸಿದ್ದು ಗ್ರಾಮೀಣ ಮಹಿಳೆಯರು ಸ್ವ ಉದ್ಯೋಗ ಮಾಡಲು ಸಹಕಾರಿ, ಮಹಿಳೆಯರು ತರಬೇತಿ ಪಡೆದು ಬ್ಯಾಂಕ್ ಸಾಲ ಸೌಲಭ್ಯ ಪಡೆದು ಯಶಸ್ವೀಯಾಗಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕಾರದ ಜೀವನ್ ಕೊಲ್ಯ, ಉಜಿರೆ ಪಂಚಾಯತ್ ಉಪಾಧ್ಯಕ್ಷರಾದ ರವಿ ಬರೆಮೇಲು , ರಾಜ್ಯ ಟೈಲರ್ ಒಕ್ಕೂಟದ ಕ್ಷೇತ್ರ ಸಮಿತಿ ಅಧ್ಯಕ್ಷರಾದ ವೇದಾವತಿ ಜನಾರ್ಧನ್, ವಲಯ ಅಧ್ಯಕ್ಷರಾದ ರೂಪ ಜಗದೀಶ್, ವಲಯ ಕಾರ್ಯದರ್ಶಿ ಜೀನತ್, ಕ್ಷೇತ್ರ ಕಾರ್ಯದರ್ಶಿ ನಾಗೇಶ್, ತರಬೇತುದಾರರಾದ ಶ್ರೀಮತಿ ಸುಮನ ಉಪಸ್ಥಿತರಿದ್ದರು.

ಜಯ ಚಿದಾನಂದ್ ಕಾರ್ಯಕ್ರಮ ನಿರೂಪಿಸಿ, ಉಜಿರೆ ಗ್ರಾಮ ವ್ಯಾಪ್ತಿಯ ಸುತ್ತ ಮುತ್ತ ಊರಿನ ಸುಮಾರು 28 ಮಹಿಳೆಯರು ಈ 10 ದಿವಸದ ತರಬೇತಿ ಪಡೆಯಲಿದ್ದಾರೆ.

Related posts

ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ: ಮುಂಡಾಜೆ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಕಾರ್ಯಕ್ರಮ

Suddi Udaya

ವೇಣೂರು: ಬಜಿರೆ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya

ಮುಂಡಾಜೆ ಪಿಯು ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ರಸ್ತೆ ದುರಸ್ತಿ

Suddi Udaya

ತಣ್ಣೀರುಪಂತ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ಬಿ. ನಿರಂಜನ್ ಮತ್ತು ಉಪಾಧ್ಯಕ್ಷರಾಗಿ ಪಿ. ಜಯರಾಜ್ ಹೆಗ್ಡೆ ಆಯ್ಕೆ

Suddi Udaya

ಚಂದ್ರಯಾನ -3 ಯಶಸ್ವಿ ಸಂಭ್ರಮಿಸಿದ ಬೆಳ್ತಂಗಡಿ ಎಸ್ ಡಿಎಮ್ ಸ್ಕೌಟ್ ಗೈಡ್ಸ್ ನ ವಿದ್ಯಾರ್ಥಿಗಳು

Suddi Udaya
error: Content is protected !!