ಪಂಚಾಯತು ನಿರ್ಣಯ ಅನುಷ್ಠಾನದಲ್ಲಿ ವಿಳಂಬ; ಕೊಕ್ಕಡ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ರದ್ದು

Suddi Udaya

Updated on:

ಕೊಕ್ಕಡ: ಇಲ್ಲಿಯ ಪಂಚಾಯತ್ ವ್ಯಾಪ್ತಿಯ ಎಲ್ಲಾ ಕಚ್ಚಾ ರಸ್ತೆಗಳ ದುರಸ್ತಿಗಾಗಿ ನವಂಬರ್ ತಿಂಗಳಿನಿಂದ ಪ್ರತಿ ತಿಂಗಳು ನಿರ್ಣಯ ಕೈಗೊಂಡರೂ, ಅನುಷ್ಠಾನವಾಗದಿರುವುದು ಮತ್ತು ಈ ಹಿಂದೆ ಪಂಚಾಯತ್ ಎದುರು ಪತ್ರಿಭಟನೆ ನಡೆದಾಗ ಸಭೆ ನಡೆಸುವುದಾಗಿ ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂಬ ವಿಷಯದಲ್ಲಿ ಚರ್ಚೆ ನಡೆದು ಪಂಚಾಯತದ ಸಾಮಾನ್ಯ ಸಭೆ ರದ್ದುಗೊಳಿಸಿದ ಘಟನೆ ಜ.17ರಂದು ಕೊಕ್ಕಡದಲ್ಲಿ ನಡೆದಿದೆ.


ಕೊಕ್ಕಡ ಗ್ರಾ.ಪಂ ಸಾಮಾನ್ಯ ಸಭೆಯು ಪಂಚಾಯತು ಅಧ್ಯಕ್ಷೆ ಬೇಬಿ ಅಧ್ಯಕ್ಷತೆಯಲ್ಲಿ ಜರುಗಿತು. ಉಪಾಧ್ಯಕ್ಷ ಪ್ರಭಾಕರ ಗೌಡ ಪಿಡಿಒ ದೀಪಕ್ ರಾಜ್, ಕಾರ್ಯದರ್ಶಿ ಭಾರತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಅಲಂಬಿಲ ಅವರು ಮಾತನಾಡಿ, ಕೊಕ್ಕಡ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಕಚ್ಚಾ ರಸ್ತೆಗಳ ದುರಸ್ತಿಗಾಗಿ ನವಂಬರ್ ತಿಂಗಳಿನಿಂದ ಪ್ರತಿ ತಿಂಗಳು ನಿರ್ಣಯ ಕೈಗೊಂಡರೂ, ಅಧಿಕಾರಿಗಳು ಅನುಷ್ಠಾನಗೊಳಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಹೀಗಾದರೆ ಸಾಮಾನ್ಯ ಸಭೆಯ ಜೌಚಿತ್ಯವೇನು ಎಂದು ಅಧ್ಯಕ್ಷರಲ್ಲಿ ಪ್ರಶ್ನಿಸಿದರು. ಈ ಸಂದರ್ಭ ಎಲ್ಲಾ ಸದಸ್ಯರು ಗ್ರಾಮದ ಕಚ್ಚಾ ರಸ್ತೆಗಳು ದುರಸ್ಥಿಗೊಳಿಸದೇ ಇನ್ನು ದಿನ ದೂಡುತಿದ್ದರೆ. ಜನರಿಗೆ ಸಂಚಾರಕ್ಕೆ ಅನಾನುಕೂಲವಾಗಿದೆ. ಬೇಸಗೆ ಮುಗಿದು ಇನ್ನು ಒಂದೆರಡು ತಿಂಗಳಲ್ಲಿ ಮತ್ತೆ ಮಳೆ ಮಳೆಗಾಲ ಆರಂಭವಾಗಲಿದೆ ಎಂದು ಅಭಿಪ್ರಾಯ ಪಟ್ಟು, ವಾರದೊಳಗೆ ಎಲ್ಲಾ ರಸ್ತೆ ದುರಸ್ಥಿ ಮಾಡಿಸಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಪಿಡಿಒ ದೀಪಕ್‌ರಾಜ್ ಅವರು ವಾರದೊಳಗೆ ಎಲ್ಲಾ ರಸ್ತೆಗಳ ದುರಸ್ತಿ ಸಾಧ್ಯ ಇಲ್ಲ ಎಂದು ತಿಳಿಸಿದರು. ಎಲ್ಲಾ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಈ ಕಾಮಗಾರಿಗಳು ಆಗದೆ ಸಾಮಾನ್ಯ ಸಭೆ ಯಾಕೆ, ಪ್ರತಿ ಸಾಮಾನ್ಯ ಸಭೆಯಲ್ಲಿ ಗ್ರಾಮದ ಅಭಿವೃದ್ಧಿ ನಿರ್ಣಯ ಕೈಗೊಂಡರೂ, ಅಧಿಕಾರಿಗಳು ಕ್ರಮ ಕೈಗೊಳ್ಳುವುದಿಲ್ಲ, ಕಳೆದ ಭಾರಿ ಪಿಡಿಒ ವಿರುದ್ದ ಪ್ರತಿಭಟನೆ ನಡೆದಾಗ ಇ.ಒ ಬದಲು ಬಂದ ಪ್ರಶಾಂತ್ ಬಳಂಜರವರು ಬಂದು ಸಭೆ ನಡೆಸುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿತ್ತು. ಆದರೆ ಸಭೆ ನಡೆಸಿಲ್ಲ ಎಂದು ತಿಳಿಸಿದರು. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದರೂ, ಕ್ರಮ ಜರುಗಿಸದಿರುವುದನ್ನು ವಿರೋಧಿಸಿ, ಇಂದಿನ ಸಾಮಾನ್ಯಸಭೆಯನ್ನು ರದ್ದುಗೊಳಿಸಲಾಯಿತು.

Leave a Comment

error: Content is protected !!