April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಫೆ.7-10: ಶಿಶಿಲ ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

ಶಿಶಿಲ: ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಫೆ.7ರಿಂದ 10 ರವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವವು ನಡೆಯಲಿದೆ.

ಫೆ.5 ರಂದು ಗೊನೆ ಮೂಹೂರ್ತ, ಫೆ.7 ರಂದು ಸ್ವಸ್ತಿ ಪುಣ್ಯಾಹ ವಾಚನ, ದೇವತಾ ಪ್ರಾರ್ಥನೆ, ಗಣಹೋಮ, ಕಲಶಾಭೀಷೇಕ ನಾಗತಂಬಿಲ, ಮಾಕಲಬ್ಬೆ ತಂಬಿಲ, ಬ್ರಹ್ಮಬೈದೇರುಗಳ ತಂಬಿಲ, ದೈವಗಳಿಗೆ ತಂಬಿಲ, ಬೆಳಿಗ್ಗೆ 10.30ಕ್ಕೆ ಹಸಿರುವಾಣಿ ಹೊರೆಕಾಣಿಕೆ (ಶಿಶಿಲ, ಶಿಬಾಜೆ, ಹತ್ಯಡ್ಕ ಗ್ರಾಮಸ್ಥರಿಂದ ) ನಡೆಯಲಿದೆ.

ಫೆ.8 ಬೆಳಿಗ್ಗೆ 6.00ಕ್ಕೆ ತೋರಣ ಮುಹೂರ್ತ, 8.00ಕ್ಕೆ ಧರ್ಮರಸು ಉಳ್ಳಾಕ್ಲು ಮತ್ತು ಪರಿವಾರ ದೈವಗಳ ನೇಮೊತ್ಸವ, ಮಧ್ಯಾಹ್ನ 12.00ಕ್ಕೆ ಕೊಡಮಂದಾಯ ನೇಮ, ಅನ್ನಸಂತರ್ಪಣೆ, ಮಧ್ಯಾಹ್ನ 1.30ಕ್ಕೆ ಕಲ್ಲಾಜೆಯಿಂದ ಪಿಲಿಕಲ್ತಾಯ ಭಂಡಾರ ಬರುವುದು, 2.30ಕ್ಕೆ ಶಿರಾಡಿ ದೈವ, ಪಂಜುರ್ಲಿ ದೈವಗಳ ಭಂಡಾರ ತೆಗೆಯುವುದು, ಸಂಜೆ 5.00ಕ್ಕೆ ಸತ್ಯ ಜಾವತೆ ನೇಮ, 6.30ಕ್ಕೆ ಕಲ್ಕುಡ ಕಲ್ಲರ್ಟಿ ನೇಮ, ರಾತ್ರಿ 8.30ಕ್ಕೆ ಲೆಕ್ಕೆಸಿರಿ ಬಾವನ ನೇಮ, ಪರಿವಾರ ದೈವಗಳ ನೇಮ, ರಾತ್ರಿ 10.30ಕ್ಕೆ ಪಿಲಿಕಲ್ತಾಯ ನೇಮ.

ಫೆ.9 ಉದಯತ್ಪೂರ್ವ ಗಂಟೆ 1.30ಕ್ಕೆ ಬಿರ್ಮೆರ್, ಶಿರಾಡಿ ದೈವಗಳ ಪರಿವಾರ ನೇಮ, ಬೆಳಿಗ್ಗೆ 8.00ಕ್ಕೆ ಪಂಜುರ್ಲಿ, ಮಾಲದ ಕೊರಗ ನೇಮ, ಬೆಳೀಗ್ಗೆ 10ಕ್ಕೆ ಬಚ್ಚನಾಯಕ ಹಾಗೂ ಗುಳಿಗ ನೇಮ, ಸಂಜೆ 5.00ಕ್ಕೆ ಬೈದೇರುಗಳ ಭಂಡಾರ ತೆಗೆಯುವುದು, ರಾತ್ರಿ 9.30ಕ್ಕೆ ಬೈದೇರುಗಳು ಗರಡಿ ಇಳಿಯುವುದು, ರಾತ್ರಿ 11.30ಕ್ಕೆ ದೇಯಿ ಬೈದಿತಿ ಉತ್ಸವ ಹಾಗೂ ಬೈದೇರುಗಳು ಭೇಟಿ ,

ಫೆ.10 ಉದಯತ್ಪೂರ್ವ 1.30ಕ್ಕೆ ಮಾನಿಬಾಲೆ ಗರಡಿ ಇಳಿಯುವುದು, ಪ್ರಾತಃಕಾಲ 4.30ಕ್ಕೆ ಸುರಿಯ ಹಾಕುವುದು ನಡೆಯಲಿದೆ.

ಫೆ.9 ಸಂಜೆ 7.00 ಕ್ಕೆ ಕೀರ್ತನಾ ಕಲಾತಂಡ ಮುಂಡಾಜೆ ಇವರಿಂದ ಭಕ್ತಿಗಾನ ಯಕ್ಷನೃತ್ಯ ನಡೆಯಲಿದೆ.

Related posts

ಜೂ.18-23: ಉಜಿರೆಯಲ್ಲಿ ಬೆಂಗಳೂರು ಜೀವನ ಕಲೆ ಪ್ರತಿಷ್ಠಾನ ಸಂಸ್ಥೆ ವತಿಯಿಂದ ‘ಆನಂದೋತ್ಸವ ಶಿಬಿರ’

Suddi Udaya

ಬೆಳ್ತಂಗಡಿ : ಹಳೇಕೋಟೆ ಬಳಿ ಪಿಕಪ್ ಗೆ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು ; ಮತ್ತೋರ್ವ ಗಂಭೀರ

Suddi Udaya

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Suddi Udaya

ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಯುವದಿನೋತ್ಸವ ಆಚರಣೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ನಾರಾವಿ ಮಹಾಶಕ್ತಿಕೇಂದ್ರದ ಸಭೆ

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್ ದಶಮಾನೋತ್ಸವಕ್ಕೆ ಉದ್ಯಮಿ ಶಶಿಧರ್ ಶೆಟ್ಟಿ ಬರೋಡರಿಂದ ರೂ.1 ಕೋಟಿ ದೇಣಿಗೆ

Suddi Udaya
error: Content is protected !!