September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಡವು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಬೆಳ್ತಂಗಡಿ: ಬಡಗಕಜೆಕಾರು ಮಡವು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಜ.16ರಂದು ವಿಜೃಂಭಣೆಯಿಂದ ನಡೆಯಿತು.


ಜ.16 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹವಾಚನ, ಗಣಹೋಮ, ಕಲಶಾರಾಧನೆ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಬಳ್ಳಮಂಜ ಅನಂತೇಶ್ವರ ಭಗಿನಿ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ನಾಗಸನ್ನಿಧಿಯಲ್ಲಿ ಆಶ್ಲೇಷಾ ಬಲಿ, ತುಲಾಭಾರ ಸೇವೆ, ಮಹಾಪೂಜೆ ಮಧ್ಯಾಹ್ನ ಶ್ರೀ ದೇವರ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.


ಸಂಜೆ ದೈವಗಳಿಗೆ ಪರ್ವ, ಶ್ರೀ ದುರ್ಗಾ ಪೂಜೆ, ಕಿನ್ನಿದಾರು ಬಿಲ್ಲವ ಮಹಿಳಾ ಭಜನಾ ಮಂಡಳಿ, ಕುತ್ತಿಲ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.


ರಾತ್ರಿ ದೇವರಿಗೆ ರಂಗಪೂಜೆ, ದೇವರ ಉತ್ಸವ, ದರ್ಶನ ಬಲಿ, ಪಂಜುರ್ಲಿ ದೈವದ ಗಗ್ಗರ ಸೇವೆ ನಡೆಯಿತು.
ಜ.17ರಂದು ಬೆಳಿಗ್ಗೆ ಸಂಪ್ರೋಕ್ಷಣೆ ಮಂತ್ರಾಕ್ಷತೆ ನಡೆಯಿತು.

Related posts

ಅ. 29: ಅಳದಂಗಡಿ ಪ್ರಾ.ಕೃ.ಪ.ಸ. ಸಂಘ ನವೀಕೃತಗೊಂಡ ಪೆರೋಡಿತ್ತಾಯಕಟ್ಟೆ ಶಾಖೆಯ ಉದ್ಘಾಟನೆ ಹಾಗೂ ಬೃಹತ್ ರಕ್ತದಾನ ಶಿಬಿರ

Suddi Udaya

ಲಾಯಿಲ ಬಂಟರ ಗ್ರಾಮ ಸಮಿತಿ ವತಿಯಿಂದ ಆಟಿದ ಗಮ್ಮತ್ ಹಾಗೂ ವಿವಿಧ ಕ್ರೀಡಾಕೂಟ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಹೈನುಗಾರಿಕೆ ತರಬೇತಿಯ ಸಮಾರೋಪ

Suddi Udaya

ಧರ್ಮಸ್ಥಳ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ: ತೋರಣಮುಹೂರ್ತ, ಕ್ಷೇತ್ರಪಾಲ ಪ್ರತಿಷ್ಠೆ

Suddi Udaya

ಬೆಳ್ತಂಗಡಿ ಪ.ಪಂ. ನಲ್ಲಿ ಪೌರ ಕಾರ್ಮಿಕರ ದಿನಾಚರಣೆ

Suddi Udaya

ನಾವೂರು ನವೋದಯ ಯುವಕ ಮಂಡಲ ವತಿಯಿಂದ “ಆಟಿ ಸುಗಿಪು”; ಸಾಂಪ್ರದಾಯಿಕ ಆಟಿ ಕಷಾಯ ಹಾಗೂ ತಜೆಂಕ್ ದೋಸೆ ವಿತರಣೆ

Suddi Udaya
error: Content is protected !!