37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್.ಡಿ.ಎಂ. ಬಿ.ಎಡ್ , ಡಿ.ಇಎಲ್.ಇಡಿ ಹಾಗೂ ಶ್ರೀ ಧ.ಮಂ. ಮಹಿಳಾ ಐಟಿಐ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಕ್ರೀಡಾಕೂಟ

ಉಜಿರೆ: ಜೀವನದಲ್ಲಿ ಉತ್ಸಾಹ ಮತ್ತು ಯಶಸ್ಸನ್ನು ಕಾಣಲು ಪಠ್ಯ ಚಟುವಟಿಕೆಗಳ ಜೊತೆ ಜೊತೆಗೆ ಕ್ರೀಡೆಯಂತಹ ಪಠ್ಯೇತರ ಚಟುವಟಿಕೆ ಅತಿ ಅಗತ್ಯ ಎಂದು ಉಜಿರೆಯ ಮಂಜುಶ್ರೀ ಪ್ರಿಂಟಿಂಗ್ ಪ್ರೆಸ್ ಪ್ರಬಂಧಕ ಶೇಖರ್ ಟಿ. ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಎಸ್.ಡಿ.ಎಂ. ಬಿ.ಎಡ್.), ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆ (ಎಸ್.ಡಿ.ಎಂ. ಡಿ.ಇಎಲ್.ಇಡಿ.) ಹಾಗೂ ಶ್ರೀ ಧ.ಮಂ. ಮಹಿಳಾ ಐಟಿಐ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಲಾದ ಕ್ರೀಡಾಕೂಟವನ್ನು ಧ್ವಜಾರೋಹಣಗೈದು ಉದ್ಘಾಟಿಸಿ ಅವರು ಮಾತನಾಡಿದರು.

“ಬೆಳಗ್ಗೆ ಆಡುವುದರಿಂದ ಮೈ ಹಗುರವಾಗಿ ಉಲ್ಲಾಸ, ಉತ್ಸಾಹ ಸಿಗುತ್ತದೆ. ಜೀವನದಲ್ಲಿ ಸಂಭವಿಸಬಹುದಾದ ಅನೇಕ ಕಾಯಿಲೆಗಳನ್ನು ಬರದಂತೆ ತಡೆಯಲು ಕ್ರೀಡೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ. ಕ್ರೀಡಾಸ್ಪರ್ಧೆಗಳಲ್ಲಿ ಪ್ರಶಸ್ತಿಗಿಂತಲೂ ಭಾಗವಹಿಸುವುದು ಮುಖ್ಯ. ಗೆದ್ದವರನ್ನು ಅಭಿನಂದಿಸಿ ಮುಂದೆ ನಾವು ಗೆಲ್ಲುವುದಕ್ಕಾಗಿ ಪ್ರಯತ್ನ ಮುಂದುವರಿಸಬೇಕು” ಎಂದು ಅವರು ಸಲಹೆ ನೀಡಿದರು.

ಉಜಿರೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆ (ರಿ.)ಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ. ಸೋಮಶೇಖರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಉಜಿರೆಯ ಈ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ಅನೇಕ ಕ್ರೀಡಾ ಸಾಧಕರನ್ನು ತಯಾರು ಮಾಡಿದೆ. ವಿದ್ಯಾರ್ಥಿಗಳು ಇಲ್ಲಿಂದ ಸ್ಫೂರ್ತಿ ಪಡೆದು, ಸಾಧಕರಾಗಿ ಹೊರಹೊಮ್ಮಿ” ಎಂದು ಆಶಿಸಿದರು. .ಡಿ.ಎಂ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುದೀನ, ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಚಾರ್ಯ ಸ್ವಾಮಿ ಕೆ.ಎ. ಉಪಸ್ಥಿತರಿದ್ದರು. ಬಿ.ಎಡ್. ಪ್ರಶಿಕ್ಷಣಾರ್ಥಿಗಳಾದ ಕಾವ್ಯಶ್ರೀ ಪ್ರಮಾಣವಚನ ಬೋಧಿಸಿ, ಇಶ್ರತ್ ಕಾರ್ಯಕ್ರಮ ನಿರೂಪಿಸಿದರು. ಎಸ್ ಡಿ ಎಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಸಂತೋಷ್ ಸಲ್ದಾನ ಸ್ವಾಗತಿಸಿದರು. ಎಸ್ ಡಿ ಎಂ ಮಹಿಳಾ ಐಟಿಐ ಪ್ರಾಚಾರ್ಯ ವಿ. ಪ್ರಕಾಶ್ ಕಾಮತ್ ವಂದಿಸಿದರು.

Related posts

ಬೆಳ್ತಂಗಡಿ ಸಂತೆ ಮಾರುಕಟ್ಟೆಯ ವಿದ್ಯುತ್ ಕಂಬಕ್ಕೆ ಸುತ್ತುವರಿದ ಮರದ ಕೊಂಬೆಗಳ ತೆರವು

Suddi Udaya

ಕಸ್ತೂರಿ ರಂಗನ್ ವರದಿ ವಿರೋಧಿಸಿ ನೆರಿಯ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಮಾರುತಿ ಕಾರಿನಲ್ಲಿ 1.550 ಕೆ.ಜಿ. ಗಾಂಜಾ ಪತ್ತೆ: ಕೊಟ್ಟಿಗೆಹಾರದಲ್ಲಿ ಆರೋಪಿ ಬಂಧನ

Suddi Udaya

ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸುವರ್ಣ ರಂಗ ಸಮ್ಮಾನ್ , ಸಾಧನಾ ಭೂಷಣ – 2024

Suddi Udaya

ಕಳೆಂಜ ಕುಶಾಲಪ್ಪ ಗೌಡರ ಮನೆಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಬಗ್ಗೆ ಆರೋಪ: ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪತ್ರಿಕಾಗೋಷ್ಠಿ

Suddi Udaya

ಕಾಜೂರು: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ

Suddi Udaya
error: Content is protected !!