ಬೆಳ್ತಂಗಡಿ: ಮಹಾ ಯೋಗಿ ವೇಮನ ಅವರು ಮೂಲತಃ ಆಂಧ್ರಪ್ರದೇಶದ ರೆಡ್ಡಿ ಜನಾಂಗದವರು. ಕರ್ನಾಟಕದಲ್ಲಿ ರೆಡ್ಡಿ ಜನಾಂಗ ಹಾಸುಹೊಕ್ಕಾಗಿದೆ. ವೇಮ ಎಂಬುದು ಕಾವ್ಯ ನಾಮ. ಅದ್ಭುತ ತ್ರಿಪದಿಗಳನ್ನು ರಚಿಸಿದ್ದಾರೆ. ವೇಮನ ತೆಲುಗು ಕವಿಯಾದರೂ ಅವರು ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ದೇಶಾಭಿಮಾನ ಬೆಳೆಸಿಕೊಂಡು, ಮುಂದಿನ ಜನಾಂಗಕ್ಕೆ ಸಂತರ ಬಗ್ಗೆ ತಿಳಿಸಬೇಕು ಎಂದು ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ ಹೇಳಿದರು.
ಅವರು ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಜ.19ರಂದು ನಡೆದ ಮಹಾ ಯೋಗಿ ವೇಮನ ಜಯಂತಿ ಆಚರಣೆಯಲ್ಲಿ ಮಾತನಾಡಿದರು.
ತಹಶೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆ ವಹಿಸಿದ್ದರು. ಉಪ ತಹಶೀಲ್ದಾರ್ ರವಿಕುಮಾರ್, ದಯಾನಂದ್ ಹೆಗ್ಡೆ ಜಯ ಕೆ. ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮ ಆಡಳಿತ ಅಧಿಕಾರಿ ಹೇಮಾ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮ ಆಡಳಿತ ಅಧಿಕಾರಿ ಪರಮೇಶ್ವರ್ ಸಹಕರಿಸಿದರು.