32.2 C
ಪುತ್ತೂರು, ಬೆಳ್ತಂಗಡಿ
April 3, 2025
ಅಪಘಾತ

ಗುರುವಾಯನಕೆರೆ ಪೊಟ್ಟುಕೆರೆ ಯಲ್ಲಿ ಕಾರು ಡಿಕ್ಕಿ: ಬೈಕ್ ಸವಾರರಿಬ್ಬರು ಗಾಯ – ಸಹ ಸವಾರ ಮಂಗಳೂರು ಆಸ್ಪತ್ರೆಗೆ ದಾಖಲು

ಗುರುವಾಯನಕೆರೆ: ಇಲ್ಲಿಯ ಪೊಟ್ಟುಕೆರೆ ಎಂಬಲ್ಲಿ ಬೈಕ್ ಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಾಯ ಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಕುವೆಟ್ಟು ಗ್ರಾಮದ ನಿವಾಸಿ ಶವನ್ (29) ಎಂಬವರ ದೂರಿನಂತೆ, ಜ.20 ರಂದು ಬೆಳಿಗ್ಗೆ, ಶವನ್ ಅವರು ತಮ್ಮ ಬೈಕ್ ನಲ್ಲಿ ಸಹ ಸವಾರನನ್ನಾಗಿ, ಅವರ ಅಣ್ಣ ಶಮೀರ್ ಎಂಬವರನ್ನು ಕುಳ್ಳಿರಿಸಿಕೊಂಡು, ಕುವೆಟ್ಟು ಗ್ರಾಮದ ಪೊಟ್ಟುಕೆರೆ ಎಂಬಲ್ಲಿ ತಲುಪುತ್ತಿದ್ದಂತೆ, ವಿರುದ್ದ ದಿಕ್ಕಿನಿಂದ ಕಾರನ್ನು ಅದರ ಚಾಲಕ ಅಬ್ದುಲ್ಲಾ ರವರು ದುಡುಕುತನದಿಂದ ಚಲಾಯಿಸಿಕೊಂಡು ಬಂದು, ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ,ಶವನ್ ಮತ್ತು ಸಹ ಸವಾರ ಶಮೀರ್ ರವರು ಮೋಟಾರು ಸೈಕಲ್ ನೊಂದಿಗೆ ರಸ್ತೆಗೆ ಬಿದ್ದು, ಸಹ ಸವಾರ ಶಮೀರ್ ರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ, ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 09/2024 ಕಲಂ: 279,338 ಭಾ.ದಂ.ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಕಣಿಯೂರು : ಓಮ್ಮಿ ಕಾರು ಹಾಗೂ ರಿಡ್ಜ್ ಕಾರು ಮುಖಾಮುಖಿ ಡಿಕ್ಕಿ

Suddi Udaya

ಮಚ್ಚಿನ: ಬಂಗೇರಕಟ್ಟೆ ಕಲ್ಲಗುಡ್ಡೆಯಲ್ಲಿ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ಉಜಿರೆಯಲ್ಲಿ ಸರಣಿ ಅಪಘಾತ: ಮೂವರಿಗೆ ಗಾಯ

Suddi Udaya

ಧರ್ಮಸ್ಥಳ: ಶಾಂತಿವನ ಬಳಿ ನಿಂತಿದ್ದ ಬೋಲೆರೋ ಹಾಗೂ ಬೈಕ್ ಗೆ ಕಾರು ಡಿಕ್ಕಿ

Suddi Udaya

ಸೋಣಂದೂರು: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿ

Suddi Udaya

ದ್ವಿಚಕ್ರ ವಾಹನಗಳ ಅಪಘಾತ: ಮೂವರಿಗೆ ಗಂಭೀರ ಗಾಯ

Suddi Udaya
error: Content is protected !!