ಬೆಳ್ತಂಗಡಿ: ಉತ್ತರ ಪ್ರದೇಶದ ಸರಯೂ ನದಿತೀರದ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ (ಬಾಲರಾಮ) ಮೂರ್ತಿ ಪ್ರತಿಷ್ಠಾಪನೆಯ ಪುಣ್ಯ ಕಾರ್ಯ ಕಣ್ತುಂಬಿಕೊಳ್ಳಲು ಇಡೀ ರಾಷ್ಟ್ರವೇ 500 ವರ್ಷಗಳಿಂದ ಕಾಯುತ್ತಿದ್ದ ಕಾಲ ಈಗ ಕೂಡಿ ಬಂದಿದೆ. ಜ.22 ಸೋಮವಾರದಂದು ಅಭಿಜಿನ್ ಶುಭ ಮುಹೂರ್ತದಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ನಿರ್ಮಾಣವಾಗಿರುವ ಭವ್ಯ ಮಂದಿರದ ನೆಲ ಅಂತಸ್ತಿನಲ್ಲಿರುವ ಗರ್ಭಗುಡಿಯಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ನೆರವೇರಲಿದೆ.
ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನಾದ್ಯಂತ ಶ್ರೀ ರಾಮನ ಸಂಭ್ರಮಿಸಲು ರಾಮಭಕ್ತರು ತಯಾರಿ ನಡೆಸುತ್ತಿದ್ದಾರೆ. ಹಾಗಾಗಿ ಬೆಳ್ತಂಗಡಿಯಲ್ಲಿ ರಾಮನ ಭಾವಚಿತ್ರವಿರುವ ಬಂಟಿಂಗ್ಸ್, ಧ್ವಜ, ಶಾಲುಗಳು, ಟಿ-ಶರ್ಟ್ ಸೇರಿದಂತೆ ಹಲವು ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಕಳೆದ ಎರಡು ವಾರಗಳಿಂದ ಬೆಳ್ತಂಗಡಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಜನರು ತಮ್ಮ ಊರನ್ನು ಕೇಸರಿಮಯ ಮಾಡಲು ರಾಮಭಕ್ತರು ಸಜ್ಜಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನಾದ್ಯಂತ ಶ್ರೀ ರಾಮನ ಭಾವಚಿತ್ರವಿರುವ ಬ್ಯಾನರ್ ಗಳು ಹಾಗೂ ತಾಲೂಕಿನ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲು ರಾಮಭಕ್ತರು ಸಿದ್ಧರಾಗಿದ್ದಾರೆ