September 6, 2026
ಅಪಘಾತ

ಗುರುವಾಯನಕೆರೆ ಪೊಟ್ಟುಕೆರೆ ಯಲ್ಲಿ ಕಾರು ಡಿಕ್ಕಿ: ಬೈಕ್ ಸವಾರರಿಬ್ಬರು ಗಾಯ – ಸಹ ಸವಾರ ಮಂಗಳೂರು ಆಸ್ಪತ್ರೆಗೆ ದಾಖಲು

ಗುರುವಾಯನಕೆರೆ: ಇಲ್ಲಿಯ ಪೊಟ್ಟುಕೆರೆ ಎಂಬಲ್ಲಿ ಬೈಕ್ ಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಾಯ ಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಕುವೆಟ್ಟು ಗ್ರಾಮದ ನಿವಾಸಿ ಶವನ್ (29) ಎಂಬವರ ದೂರಿನಂತೆ, ಜ.20 ರಂದು ಬೆಳಿಗ್ಗೆ, ಶವನ್ ಅವರು ತಮ್ಮ ಬೈಕ್ ನಲ್ಲಿ ಸಹ ಸವಾರನನ್ನಾಗಿ, ಅವರ ಅಣ್ಣ ಶಮೀರ್ ಎಂಬವರನ್ನು ಕುಳ್ಳಿರಿಸಿಕೊಂಡು, ಕುವೆಟ್ಟು ಗ್ರಾಮದ ಪೊಟ್ಟುಕೆರೆ ಎಂಬಲ್ಲಿ ತಲುಪುತ್ತಿದ್ದಂತೆ, ವಿರುದ್ದ ದಿಕ್ಕಿನಿಂದ ಕಾರನ್ನು ಅದರ ಚಾಲಕ ಅಬ್ದುಲ್ಲಾ ರವರು ದುಡುಕುತನದಿಂದ ಚಲಾಯಿಸಿಕೊಂಡು ಬಂದು, ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ,ಶವನ್ ಮತ್ತು ಸಹ ಸವಾರ ಶಮೀರ್ ರವರು ಮೋಟಾರು ಸೈಕಲ್ ನೊಂದಿಗೆ ರಸ್ತೆಗೆ ಬಿದ್ದು, ಸಹ ಸವಾರ ಶಮೀರ್ ರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ, ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 09/2024 ಕಲಂ: 279,338 ಭಾ.ದಂ.ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಮದ್ದಡ್ಕ: ಬೈಕ್ ನ್ನು ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಕೆಎಸ್ ಆರ್ ಟಿಸಿ ಬಸ್ಸು

Suddi Udaya

ನಾಲ್ಕೂರು: ತುಂಡಾಗಿ ಬಿದ್ದ ವಿದ್ಯುತ್‌ ತಂತಿಯಿಂದ ತೋಟದಲ್ಲಿ ಮೆಯುತ್ತಿದ್ದ ಹಸುವಿಗೆ ವಿದ್ಯುತ್ ತಗುಲಿ ಸಾವು

Suddi Udaya

ಕೊಯ್ಯೂರು: ಬೈಕ್ ಮುಖಾಮುಖಿ ಡಿಕ್ಕಿ: ಶಾಲಾ ಶಿಕ್ಷಕನಿಗೆ ಗಂಭೀರ ಗಾಯ

Suddi Udaya

ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾದ ಜನಾರ್ದನರವರ ಚಿಕಿತ್ಸೆಗೆ ನೆರವಾಗಿ

Suddi Udaya

ಉಜಿರೆ ಕಾಶಿಬೆಟ್ಟು ಬಳಿ ಬೈಕ್ ಹಾಗೂ ಕಾರು ನಡುವೆ ಅಪಘಾತ: ಬೈಕ್ ಸವಾರರಿಗೆ ಗಂಭೀರ ಗಾಯ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಬಸ್ ಪಲ್ಟಿ ಹಲವರಿಗೆ ಗಾಯ

Suddi Udaya
error: Content is protected !!