25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿ

ಅಯೋಧ್ಯೆಯಲ್ಲಿನ ಶ್ರೀ ರಾಮನ ಮಂದಿರವು ಸುಂದರವಾಗಿ ಮೂಡಿಬಂದಿದೆ: ಡಾ| ಡಿ ವೀರೇಂದ್ರ ಹೆಗ್ಗಡೆ

ಅಯೋಧ್ಯೆಯಲ್ಲಿನ ಶ್ರೀ ರಾಮನ ಮಂದಿರವು ಸುಂದರವಾಗಿ ಮೂಡಿಬಂದಿದೆ. ಮಂದಿರದೊಳಗಿನ ಶ್ರೀ ರಾಮನ ಬಿಂಬದ ಪ್ರಾಣಪ್ರತಿಷ್ಠೆಯು ಸೂಕ್ತ ರೀತಿಯಲ್ಲಿ ಜರುಗಿತು. ಪ್ರತಿಷ್ಟಿತ ಮಠಾಧಿಪತಿಗಳು ಮತ್ತು ಎಲ್ಲಾ ರಂಗದ ಪ್ರಮುಖರು ಈ ಐತಿಹಾಸಿಕ ಕಾರ್‍ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವು ಅತ್ಯಂತ ಶಿಸ್ತಿನಿಂದ ನಡೆದಿದೆ.

ಅಯೋಧ್ಯೆಯ ನಗರವನ್ನು ಹೂವಿನಿಂದ ಶೃಂಗಾರಗೊಳಿಸಿದ್ದರು. ಅಲ್ಲಲ್ಲಿ ಸ್ವಾಗತ ನೃತ್ಯವು ನಡೆಯುತ್ತಿದ್ದವು. ಎಲ್ಲಾ ರೀತಿಯಿಂದಲೂ ಕಾರ್ಯಕ್ರಮವು ವ್ಯವಸ್ಥಿತವಾಗಿಯೇ ನಡೆಯಿತು.
ರಾಮಮಂದಿರದ ಎದುರುಗಡೆ ಕುಳಿತ ಎಲ್ಲಾ ಸಂತರಿಗೂ ಅಲ್ಲಿಯೇ ಆಹಾರ, ಪಾನೀಯಗಳನ್ನು ವಿತರಿಸಿದರು. ಅಲ್ಲಿಯ ಹವಾಮಾನದಲ್ಲಿ ಚೆನ್ನಾಗಿ ಚಳಿಯೇ ಇತ್ತು, ಆದರೂ ಆತ್ಮೀಯವಾದ ಸ್ವಾಗತ ಮತ್ತು ವ್ಯವಸ್ಥಿತವಾದ ಕಾರ್ಯಕ್ರಮದಿಂದಾಗಿ ನಮಗೆಲ್ಲರಿಗೂ ಅಷ್ಟು ಸಮಸ್ಯೆಯೇ ಎನಿಸಲಿಲ್ಲ. ಹೊರಗಡೆ ಕುಳಿತವರಿಗೆ ಟಿ.ವಿ. ಪರದೆಯ ಮುಖಾಂತರ ಒಳಗೆ ನಡೆಯುವ ಪೂಜಾ ವಿಧಿ-ವಿಧಾನಗಳನ್ನು ತೋರಿಸುತ್ತಿದ್ದರು.

ಈ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಿಂದಾಗಿ ಮಹಾತ್ಮರೆಲ್ಲರೂ ಪ್ರಸನ್ನರಾಗಿ ಹೋದರು. ಇಂದು ಈ ಕಾರ್ಯಕ್ರಮದಿಂದಾಗಿ ಅಲ್ಲಲ್ಲಿ ಪ್ರಯಾಣಕ್ಕೆ ಅಡೆತಡೆಗಳಿದ್ದವು. ಇಂದಿನಿಂದ ಮಂದಿರಕ್ಕೆ ಮುಕ್ತ ದರ್ಶನ ಎಂದು ಘೋಷಿಸಲಾಗಿದೆ.


ಗೌರವಾನ್ವಿತ ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿಜೀಯವರು ಎಲ್ಲರನ್ನೂ ಉದ್ಧೇಶಿಸಿ ಮಾತನಾಡಿದರು ಹಾಗೂ ಎಲ್ಲಾ ಸಂತರ ಬಳಿ ಬಂದು ಗೌರವದಿಂದ ಮಾತನಾಡಿಸಿದರು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯವನ್ನು ತಿಳಿಸಿದರು.

Related posts

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ನಿಡ್ಲೆ : ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

Suddi Udaya

ಅ.29: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಪಟ್ರಮೆ: ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಚಿಣ್ಣರ ಸಂಭ್ರಮ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಎಸ್.ಡಿ.ಎಂ ಸ್ವಾಯತ್ತ ಕಾಲೇಜು : ವಿದ್ಯಾರ್ಥಿಗಳಿಂದ ಪ್ರಾಯೋಗಿಕ ‘ಮಾದರಿ ಸಂಸತ್ತು 2025 -26’

Suddi Udaya
error: Content is protected !!