ಕಾಶಿಪಟ್ಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಶಿಪಟ್ಣ ಅಂಗನವಾಡಿ ಮತ್ತು ಕಾಶಿಪಟ್ಣ ಸಂಜೀವಿನಿ ಶೆಡ್ ನಲ್ಲಿ ನಡೆದ ಕಾಮಧೇನು ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15 ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ಸಾಮಾಜಿಕ ಪರಿಶೋಧನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಶ್ರೀಮತಿ ಜಯಲಕ್ಷ್ಮಿ ಮತ್ತು ಗ್ರಾಮ ಸಂಪನ್ಮೂಲ ವ್ಯಕ್ತಿ ಶ್ರೀಮತಿ ವಾಣಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು.
ಈ ವೇಳೆ ಸ್ವಚ್ಚತಾ ವಾಹನದಲ್ಲಿ ಸಾಮಾಜಿಕ ಸಭೆಯ ಕುರಿತಂತೆ ಪ್ರಚಾರ ಮಾಡಲಾಯಿತು.
ಈ ಸಂದರ್ಭ ತಾಲೂಕು ಐಇಸಿ ಸಂಯೋಜಕರು ವಿನಿಷ, ಗ್ರಾ.ಪಂ ಸಿಬ್ಬಂದಿ ರೇಷ್ಮಾ ,ಅಂಗನವಾಡಿ ಕಾರ್ಯಕರ್ತೆ, ಎಮ್.ಬಿ.ಕೆ, ಎಲ್ .ಸಿ.ಆರ್.ಪಿ, ಪಶು ಸಖಿ ಉಪಸ್ಥಿತರಿದ್ದರು.