ಲಾಯಿಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಲಾಯಿಲ ಇದರ ಆಶ್ರಯದಲ್ಲಿ ಆಯೋಧ್ಯ ಪ್ರಭು ಶ್ರೀ ರಾಮಲಲ್ಲನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಲಾಯಿಲದ ವಿಘ್ನೇಶ್ವರ ಕಲಾ ಮಂದಿರದಲ್ಲಿ ರಾಮ ನಾಮ ತಾರಕ ಮಂತ್ರ ಹಾಗೂ 1,111 ಹಣತೆಗಳ ದೀಪ ಪ್ರಜ್ವಲನ ಕಾರ್ಯಕ್ರಮವನ್ನು ಲಾಯಿಲ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕರಾದ ವೆ|ಮೂ| ಶ್ರೀ ಶ್ರೀನಿವಾಸ್ ಭಟ್ ಇವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು..
ಬಳಿಕ ಲಾಯಿಲ ಬಲಮುರಿ ಗಣಪತಿ ಭಜನಾ ಮಂಡಳಿಯ ಎಲ್ಲಾ ಭಜಕರಿಗೆ ತನ್ನ ವೈಯುಕ್ತಿಕ ನೆಲೆಯಲ್ಲಿ ಶಾಲು ಹಾಕಿ ಗೌರವಿಸಿದರು. ರಾಮತಾರಕ ಮಂತ್ರವನ್ನು ಅರ್ಚಕರಾದ ಸ್ವಸ್ತಿಕ್ ಭಟ್ ಪುಂಜಾಲಕಟ್ಟೆ ಇವರು ಎಲ್ಲರಿಗೂ ಹೇಳಿಕೊಟ್ಟರು. ನಂತರ 1,111 ಹಣತೆಗಳ ದೀಪ ಪ್ರಜ್ವಲನೇಯ ಜೊತೆ ಶ್ರೀ ರಾಮ ದೇವರಿಗೆ ಮಹಾ ಮಂಗಳಾರತಿ ನೆರವೇರಿತು..
ಈ ಸಂದರ್ಭದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು. ಸಮಿತಿಯ ಸಲಹೆಗಾರರದ ಗಿರೀಶ್ ಡೋಂಗ್ರೆಯವರು ಎಲ್ಲರಿಗೂ ಸಿಹಿಯ ವ್ಯವಸ್ಥೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ 2 ಸಮಿತಿಯ ಸದಸ್ಯರುಗಳು, ಬಲಮುರಿ ಗಣಪತಿ ಭಜನಾ ಮಂಡಳಿಯ ಸಂಚಾಲಕರುಗಳು, ಭಜಕರು ಮಹಿಳಾ ಭಜನಾ ತಂಡದವರು ಹಾಗೂ ಸ್ಥಳೀಯ ರಾಮ ಭಕ್ತರು ಭಾಗವಹಿಸಿದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಅರವಿಂದ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಗಣೇಶ್ ಲಾಯಿಲ ಧನ್ಯವಾದವಿತ್ತರು.