29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್ ಡಿ ಎಮ್ ಬೆಳ್ತಂಗಡಿ ಶಾಲೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತರ ಭೇಟಿ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ವೀಕ್ಷಣೆಗಾಗಿ ರಾಜ್ಯ ಸಂಘಟನಾ ಆಯುಕ್ತರಾದ ಶ್ರೀಮತಿ ಸಿ ಮಂಜುಳಾ ರವರು ಭೇಟಿ ನೀಡಿರುವರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಆಯುಕ್ತರನ್ನು ಶಾಲಾವತಿಯಿಂದ ಸನ್ಮಾನಿಸಲಾಯಿತು. ಶಾಲೆಯಲ್ಲಿ ನಡೆಸಿದ ಚಟುವಟಿಕೆಯನ್ನು ವೀಕ್ಷಿಸಿದ ಸಂಘಟನಾ ಆಯುಕ್ತರು ದಳದ ಸಾಧನೆ ಬಗ್ಗೆ ಪ್ರಸಂಸೆ ವ್ಯಕ್ತಪಡಿಸಿದರು. ಜಿಲ್ಲಾ ಪ್ರಶಸ್ತಿ ,ರಾಜ್ಯ ಪ್ರಶಸ್ತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯ ಸಂಸ್ಥೆಯು ಉತ್ತಮ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಶ್ರೀ ಮಂಜುನಾಥ ದೇವರ ಅನುಗ್ರಹದಿಂದ ಮಕ್ಕಳು ಉತ್ತಮ ಭವಿಷ್ಯ ರೂಪಿಸುವಂತಾಗಲಿ, ಹಾಗೆಯೇ ಸ್ಕೌಟಿಂಗ್ ಸಮಾಜದಲ್ಲಿ ಉತ್ತಮ ಸಾಧನೆಯನ್ನು ಮಾಡಲಿ ಎಂದು ಶುಭ ಹಾರೈಸಿದರು.


‌ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಪದ್ಮ ಕುಮಾರ್, ಉಪಸ್ಥಿತರಿದ್ದು ಸ್ವಾಗತಿಸಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ, ಎಸ್ ಡಿ ಎಮ್‌ ಬೆಳ್ತಂಗಡಿ ಸ್ಕೌಟ್ಸ್ ಗೈಡ್ಸ್ ಸಂಯೋಜಕ ಶಿಕ್ಷಕಿ ಪ್ರಮೀಳಾ ಕಾರ್ಯಕ್ರಮ ಸಂಘಟಿಸಿ, ಉಪಸ್ಥಿತರಿದ್ದು, ವಂದಿಸಿದರು.


ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಜೆಸಿಂತಾ ರೋಡ್ರಿಗಸ್, ಸ್ಕೌಟ್ ಮಾಸ್ಟರ್ ಮಂಜುನಾಥ್ ಉಪಸ್ಥಿತರಿದ್ದರು.
ನಿರೂಪಣೆಯಲ್ಲಿ ಗೈಡ್ ವಿದ್ಯಾರ್ಥಿ ಯಶ್ವಿತಾ ಸಹಕರಿಸಿದರು.
‌‌ ನಂತರ ಸಂಘಟನಾ ಆಯುಕ್ತರು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್ ರವರನ್ನು ಭೇಟಿ ಮಾಡಿ ಉತ್ತಮ ಕಾರ್ಯಗಳಿಗೆ ಹೆಮ್ಮೆ ವ್ಯಕ್ತಪಡಿಸಿದರು. ಹಾಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಹಾಯಕರಾದ ಬಿ ಸೋಮಶೇಖರ್ ಶೆಟ್ಟಿಯವರನ್ನು ಭೇಟಿ ಮಾಡಿದರು.
ಧರ್ಮಸ್ಥಳ ಕ್ಷೇತ್ರದ ದರ್ಶನದೊಂದಿಗೆ ಡಾ.ಡಿ. ವಿರೇಂದ್ರ ಹೆಗ್ಗಡೆ ಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

Related posts

ರಾಜ್ಯದ ರೈತರ, ಮಠ ಮಂದಿರಗಳ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲು ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಮಂಡಲದ ವತಿಯಿಂದ ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ

Suddi Udaya

ಉಜಿರೆ : ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಸಂಭ್ರಮಾಚರಣೆ ಪ್ರಯುಕ್ತ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಅಯೋಧ್ಯೆ ಯಾತ್ರೆ

Suddi Udaya

ಎಸ್‌ಡಿಟಿಯು ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಮಾಸಿಕ ಸಭೆ.

Suddi Udaya

ಕೊಯ್ಯೂರು ಮೈಂದಕೋಡಿ ಮನೆಯಲ್ಲಿ ಭಜನಾ ಕಮ್ಮಟ ಹಾಗೂ ದೈವಗಳ ಗಗ್ಗರ ಸೇವೆ

Suddi Udaya

ಮಿತ್ತಬಾಗಿಲು: ಮನೆಯ ಬೀಗ ಮುರಿದು ನಗದು ಕಳ್ಳತನ

Suddi Udaya
error: Content is protected !!