ಕೊಕ್ಕಡ: ಯುವ ಕೇಸರಿ, ಕಾವು ಇವರ ಆಶ್ರಯದೊಂದಿಗೆ ಮೋದಿ ಮತ್ತೊಮ್ಮೆ ಎಂಬ ಮಹಾ ಸಂಕಲ್ಪದೊಂದಿಗೆ, ವೇ.ಮೂ. ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ಪೌರೋಹಿತ್ಯದಲ್ಲಿ “ಶ್ರೀ ಲಲಿತಾ ಸಹಸ್ರನಾಮ ಯಾಗ”ವು ಜ.25 ರಂದು ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು.
ಬೆಳಿಗ್ಗೆ ಯಾಗ ಪ್ರಾರಂಭಗೊಂಡು, ಯಾಗ ಪೂರ್ಣಾಹುತಿ ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಸೌತಡ್ಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಅಧ್ಯಕ್ಷತೆ ವಹಿಸಿದರು.
ದಿಕ್ಸೂಚಿ ಭಾಷಣವನ್ನು ಬಾಲವಾಗ್ಮಿ ಕು| ಹಾರಿಕಾ ಮಂಜುನಾಥ್ ರವರು ನೆರವೇರಿಸಿದರು. ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ಆಡಳಿತ ಟ್ರಸ್ಟ್‌ನ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಕೆ. ಮಹಾಬಲ ಮತ್ತು ಜಿ. ದೇವಪ್ಪ ಗೌಡ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು.
ಕು. ಧಾತ್ರಿ ಗೋಖಲೆ ಪ್ರಾರ್ಥಿಸಿ, ಅರ್ಚಕ ಮಂಜುನಾಥ್ ಭಟ್ ಸ್ವಾಗತಿಸಿದರು. ವೃಶಾಂಕ್ ಖಾಡಿಲ್ಕರ್ ಅರಸಿನಮಕ್ಕಿ ಕಾರ್ಯಕ್ರಮ ನಿರೂಪಿಸಿ, ಡಾ| ಗಣೇಶ್ ಪ್ರಸಾದ್ ಕೊಕ್ಕಡ ಧನ್ಯವಾದವಿತ್ತರು. ಕಾರ್ಯಕ್ರಮದ ಯಶಸ್ವಿಗೆ ಯುವ ಕೇಸರಿ ಬಳಗ ಸಹಕರಿಸಿದರು.