September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ: ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ “ಶ್ರೀ ಲಲಿತಾ ಸಹಸ್ರನಾಮ ಯಾಗ: ಧಾರ್ಮಿಕ ಸಭೆ, ಸನ್ಮಾನ

ಕೊಕ್ಕಡ: ಯುವ ಕೇಸರಿ, ಕಾವು ಇವರ ಆಶ್ರಯದೊಂದಿಗೆ ಮೋದಿ ಮತ್ತೊಮ್ಮೆ ಎಂಬ ಮಹಾ ಸಂಕಲ್ಪದೊಂದಿಗೆ, ವೇ.ಮೂ. ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ಪೌರೋಹಿತ್ಯದಲ್ಲಿ “ಶ್ರೀ ಲಲಿತಾ ಸಹಸ್ರನಾಮ ಯಾಗ”ವು ಜ.25 ರಂದು ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು.


ಬೆಳಿಗ್ಗೆ ಯಾಗ ಪ್ರಾರಂಭಗೊಂಡು, ಯಾಗ ಪೂರ್ಣಾಹುತಿ ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರ ಸೌತಡ್ಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಅಧ್ಯಕ್ಷತೆ ವಹಿಸಿದರು.


ದಿಕ್ಸೂಚಿ ಭಾಷಣವನ್ನು ಬಾಲವಾಗ್ಮಿ ಕು| ಹಾರಿಕಾ ಮಂಜುನಾಥ್ ರವರು ನೆರವೇರಿಸಿದರು. ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ಆಡಳಿತ ಟ್ರಸ್ಟ್‌ನ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಕೆ. ಮಹಾಬಲ ಮತ್ತು ಜಿ. ದೇವಪ್ಪ ಗೌಡ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು.

ಕು. ಧಾತ್ರಿ ಗೋಖಲೆ ಪ್ರಾರ್ಥಿಸಿ, ಅರ್ಚಕ ಮಂಜುನಾಥ್ ಭಟ್ ಸ್ವಾಗತಿಸಿದರು. ವೃಶಾಂಕ್ ಖಾಡಿಲ್ಕರ್ ಅರಸಿನಮಕ್ಕಿ ಕಾರ್ಯಕ್ರಮ ನಿರೂಪಿಸಿ, ಡಾ| ಗಣೇಶ್ ಪ್ರಸಾದ್ ಕೊಕ್ಕಡ ಧನ್ಯವಾದವಿತ್ತರು. ಕಾರ್ಯಕ್ರಮದ ಯಶಸ್ವಿಗೆ ಯುವ ಕೇಸರಿ ಬಳಗ ಸಹಕರಿಸಿದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಸಾಮೂಹಿಕ ದೀಪಾವಳಿ ಆಚರಣೆ: ಸರ್ವಧರ್ಮೀಯರು ಆಚರಿಸುವ ವಿಶ್ವವಿಖ್ಯಾತ ಹಬ್ಬ ದೀಪಾವಳಿ: ಪ್ರಕಾಶ ಶೆಟ್ಟಿ ನೊಚ್ಚ

Suddi Udaya

ಬಜಿಲ ಕಿ.ಪ್ರಾ. ಶಾಲೆಯಲ್ಲಿ ಶ್ರಮದಾನ, ಪೋಷಕರಿಂದ ಮಾದರಿ ಶಾಲಾ ಕೈತೋಟ ನಿರ್ಮಾಣ

Suddi Udaya

ನಿಡ್ಲೆ: ಸಿಡಿಲು ಬಡಿದು ಗಾಣಂತಿ ರಾಜೇಂದ್ರ ಗೌಡರವರ ಪಂಪು ಶೆಡ್, ಬೋರ್ ಪಂಪು ಸಹಿತ ಮನೆಗೆ ಹಾನಿ

Suddi Udaya

ಬಿಎಂಎಸ್ ರಿಕ್ಷಾ ಚಾಲಕರ ಸಂಘ ಕ್ಷೇಮ ನಿಧಿ ಯೋಜನೆಯ 31ನೇ ಸಹಾಯಧನ ಹಸ್ತಾಂತರ

Suddi Udaya

ತೆಕ್ಕಾರು ಇಬ್ಬನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಾಸಭೆ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ

Suddi Udaya
error: Content is protected !!