ಲಾಯಿಲ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಲಾಯಿಲದಲ್ಲಿ 75ನೇ ಗಣರಾಜ್ಯೋತ್ಸವವನ್ನುಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ಎಸ್.ಡಿ.ಎಮ್.ಸಿ, ನಾಮ ನಿರ್ದೇಶಕರು ಹಾಗೂ ಲಾಯಿಲ ಪಂಚಾಯತ್ ಸದಸ್ಯ ಪ್ರಸಾದ್ , ಮತ್ತು ಶಾಲಾ ಹಳೇ ವಿದ್ಯಾರ್ಥಿ ಶೇಖರ್ ಲಾಯಿಲ ಇವರು ಧ್ವಜಾರೋಹಣವನ್ನು ನೆರವೇರಿಸಿ, ಗಣರಾಜ್ಯೋತ್ಸವದ ಮಹತ್ವ ಮತ್ತು ಸಂವಿಧಾನದ ಬಗ್ಗೆ ಮಾಹಿತಿ ಕೊಟ್ಟರು.
ಹಳೆ ವಿದ್ಯಾರ್ಥಿಗಳಾದ ಅಚ್ಯುತ ಗೌಡ, ಮ್ಯಾಕ್ಸಿಂ, ಎಸ್.ಕೆಡಿ.ಆರ್.ಡಿಪಿ ಯೋಜನೆ ಸಂಯೋಜಕರಾದ ಶ್ರೀಮತಿ ಗೀತಾ ಮೇಡಂ, ಶಾಲಾ ಶಿಕ್ಷಕರು, ಅಡುಗೆ ಸಿಬ್ಬಂದಿಗಳು, ಊರವರು, ಹಾಗೂ ಮುದ್ದು ಪುಟಾಣಿಗಳು ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ಬಿಎಸ್ ಯವರು ಸ್ವಾಗತಿಸಿದ್ದ ಕಾರ್ಯಕ್ರಮಕ್ಕೆ ಸಹ ಶಿಕ್ಷಕ ಯೋಗೀಶ್ ಕಾರ್ಯಕ್ರಮ ನಿರೂಪಣೆ ಮಾಡಿ, ಧನ್ಯವಾದವಿತ್ತರು.
ಕಾರ್ಯಕ್ರಮಕ್ಕೆ ಲಾಯಿಲ ನ್ಯಾಯವಾದಿ ನೋಟರಿ ಪಬ್ಲಿಕ್ ಹಾಗೂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಸಮಿತಿ ( ಕೆ ಡಿ ಪಿ ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಕುಮಾರ್ ಸಿಹಿ ತಿಂಡಿ ವ್ಯವಸ್ಥೆಯನ್ನು ಮಾಡಿದರು.