24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉರುವಾಲು ಭಾರತೀ ವಿದ್ಯಾಸಂಸ್ಥೆಯಲ್ಲಿ ವಿಜೃಂಭಣೆಯ ಗಣರಾಜ್ಯೋತ್ಸವ: ಶಾಲಾ ವಿದ್ಯಾರ್ಥಿಗಳಿಂದ ಹೆತ್ತವರಿಗಾಗಿ ಮಾತಾ ಪಿತೃ ಪೂಜೆ

ಉರುವಾಲು: ಇಲ್ಲಿನ ಭಾರತೀ ವಿದ್ಯಾ ಸಂಸ್ಥೆ ಯಲ್ಲಿ ವಿಜೃಂಭಣೆಯಿಂದ ಗಣರಾಜ್ಯೋತ್ಸವ ವನ್ನೂ ಆಚರಿಸಲಾಯಿತು.ಶಾಲಾ ಸೇವಾ ಸಮಿತಿಯ ಅಧ್ಯಕ್ಷ ದಿವಾಕರ ಶಾಸ್ತ್ರಿ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಧ್ವಜರೋಹಣ ಬಳಿಕ ವಿದ್ಯಾರ್ಥಿಗಳು ಧ್ವಜ ಗೀತೆ, ರಾಷ್ಟ್ರಗೀತೆ ಹಾಡಿ ಕೊನೆಯಲ್ಲಿ ಪಥ ಸಂಚಲನ ನೆರವೇರಿಸಿದರು. ಈ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಿತ ಕೆ ಆರ್ ಹಾಗೂ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಣ್ಣಪ್ಪ ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಶಾಲಾ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ತಮ್ಮ ಹೆತ್ತವರಿಗಾಗಿ ಮಾತಾ ಪಿತೃ ಪೂಜೆ ನೆರವೇರಿತು. ಪುರೋಹಿತರಾದ ವಿಷ್ಣು ಪ್ರದೀಪ್ ಇವರ ಮಾರ್ಗದರ್ಶನದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಹೆತ್ತವರ ಪಾದ ಪೂಜೆ ಸಲ್ಲಿಸಿ ಅವರ ಆಶೀರ್ವಾದ ಪಡೆದರು. ನಂತರ ಶಾಲೆಯಲ್ಲಿ ಈ ಮೊದಲು ಶಿಕ್ಷಕಿ ಆಗಿ ಸೇವೆ ಸಲ್ಲಿಸಿದ ಶ್ರೀಮತಿ ಹರ್ಷಿತಾ ಗಿರೀಶ್ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಉಷಾ ತಿರುಮಲೇಶ್ವರ ಪ್ರಸನ್ನ ಇವರುಗಳಿಗೆ ಶಿಕ್ಷಕ ವೃಂದ ದವರಿಂದ ಮಡಿಲು ತುಂಬುವ ಶಾಸ್ತ್ರ ವನ್ನು ನೆರವೇರಿಸಲಾಯಿತು.

Related posts

ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ಬಹುಮಾನ ವಿತರಣಾ ಕಾರ್ಯಕ್ರಮ – ” ಪುರಸ್ಕಾರ 2024 “

Suddi Udaya

ಕನ್ಯಾಡಿ: ಶ್ರೀ ರಾಮ ಕ್ಷೇತ್ರದಲ್ಲಿ ಶ್ರೀ ಹನುಮಾನ್ ರಥೋತ್ಸವ

Suddi Udaya

ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಶಿವಯೋಗಿ ಸಿದ್ಧರಾಮ ಜಯಂತಿ ಆಚರಣೆ

Suddi Udaya

ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಸಭೆ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಬಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ಪೀಠೋಪಕರಣಗಳ ಕೊಡುಗೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕೇಂದ್ರ ಕಛೇರಿ ಶ್ರೀ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಮತ್ತು ಆಡಳಿತ ಕಛೇರಿಯ ಉದ್ಘಾಟನೆ

Suddi Udaya
error: Content is protected !!