ಉರುವಾಲು: ಗ್ರಾಮ ದೈವಗಳಿಗೆ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

Suddi Udaya

ಉರುವಾಲು :ಉರುವಾಲು ಗ್ರಾಮದ ಕಾರಿಂಜ ಬಾಕಿಮಾರಿನಲ್ಲಿ ವರ್ಷಂಪ್ರತಿಯಂತೆ ಗ್ರಾಮ ದೈವಗಳಿಗೆ ಹಾಗೂ ಪರಿವಾರ ನೇಮೋತ್ಸವವು ಜ.25, 26 ರಂದು ನಡೆಯಿತು.

ಜ.25ರಂದು ಪಿಲಿಚಾಮುಂಡಿ ದೈವಕ್ಕೆ ಪರ್ವಹಾಗೂ ತೋರಣ ಮುಹೂರ್ತ ಸಂಜೆ ಹೋಮ, ಸ್ಥಳ ಶುದ್ಧಿ, ಬಿಂಬ ಶುದ್ದಿ, ಕಲಶ ಶುದ್ದಿ ಚೆಂಡೆತ್ತಿಮಾರು ಗುತ್ತಿನಿಂದ ಭಂಡಾರ ಹೊರಡುವುದು, ರಾತ್ರಿ ಕಾರಿಂಜ ಬಾಕಿಮಾರಿನಲ್ಲಿ ಭಂಡಾರ- ಇಳಿಸುವುದು, ಪಿಲಿಚಾಮುಂಡಿ ಭಂಡಾರ ಇಳಿಸಿ ದೈವಗಳಿಗೆ ಪರ್ವ ಹಾಗೂ ರಾಜಂದೈವ ಕಲ್ಕುಡ, ಪಿಲಿಚಾಮುಂಡಿ ಇತರ ಪರಿವಾರ ದೈವಗಳಿಗೆ ಎಣ್ಣೆ ವೀಳ ಕೊಡುವುದು ಮತ್ತು ನೇಮ, ಪಲ್ಲಪೂಜೆ, ಅನ್ನಸಂತರ್ಪಣೆ, ಕಲ್ಕುಡ, ಕಲ್ಲುರ್ಟಿ ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು.

ಜ.26ರಂದು ಸಂಜೆ ಎಣ್ಮಣ್ಣಾಯ ದೈವದ ನೇಮಕ್ಕೆ ಎಣ್ಣೆ ವೀಳ್ಯ ಕೊಡುವುದು- ಅಂಕ-ಚೆಂಡು, ಎಣ್ಮಣ್ಣಾಯ ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ, ಪಂಜುರ್ಲಿ ದೈವದ ನೇಮಕ್ಕೆ ಎಣ್ಣೆ ವೀಳ್ಯ ಕೊಡುವುದು, ನೇಮ ಜರುಗಿತು.


ಜ.28ರಂದು ಬೆಳಿಗ್ಗೆ ಕುಡುಮದ ಪಂಜುರ್ಲಿ, ಕೊರಗಜ್ಜ, ಗುಳಿಗ ಹಾಗೂ ಮುಗೇರ ಕೋಲ (ಮುಗೇರರ ಬನದಲ್ಲಿ), ಸಂಜೆ ಮಹಮ್ಮಾಯಿಗೆ ಸೇವೆ ಹಾಗೂ ಮಾರಿ ಪೂಜೆ ನಡೆಯಲಿದೆ.

ಆಡಳಿತ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ನೇಮೋತ್ಸವ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು. ಹಾಗೂ ಉರುವಾಲು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment

error: Content is protected !!